ಕೂಡಿಗೆ, ಸೆ. ೯: ಸೌಲಭ್ಯ ವಂಚಿತರಾಗಿರುವ ಬ್ಯಾಡಗೊಟ್ಟ ಗ್ರಾಮದ ಕುಟುಂಬಗಳಿಗೆ ತಕ್ಷಣ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.

ತಾ. ೯ ರಂದು ‘ಶಕ್ತಿ’ಯಲ್ಲಿ ‘೩೫ ವರ್ಷಗಳಿಂದಲೂ ದೊರಕದ ಮನೆ ಭಾಗ್ಯ’ ಎಂಬ ವರದಿಯನ್ನು ಗಮನಿಸಿದ ಶಾಸಕರು, ಕೂಡಿಗೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಮನೆಗಳ ನಿರ್ಮಾಣದೊಂದಿಗೆ ಮೂಲಭೂತ ಸೌಕರ್ಯ, ರಸ್ತೆ ಕಾಮಗಾರಿ, ಚರಂಡಿ ದುರಸ್ತಿಗೆ ಈಗಾ ಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ಗ್ರಾ.ಪಂ. ಸದಸ್ಯರಾದ ಅನಂತ, ಅರುಣ್ ರಾವ್, ಶಿವಕುಮಾರ್ ಇದ್ದರು.