ಗೋಣಿಕೊಪ್ಪಲು, ಸೆ. ೧೦: ಯೂರೋಪಿಯನ್ ಒಕ್ಕೂಟದ ದೇಶಗಳು ಭಾರತ ದೇಶಕ್ಕೆ ಆಮದು ಮಾಡುವ ಕಾಫಿಗೆ ಅರಣ್ಯ ಕಡಿತ ನಿರ್ಬಂಧ ನೀತಿ ಜಾರಿಗೆ ಮುಂದಿನ ವರ್ಷ ಜೂನ್ ಕೊನೆಯ ತನಕ ಅವಕಾಶ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ಭಾರತ ದೇಶದಿಂದ ರಫ್ತಾಗುವ ಕಾಫಿಗೂ ಹೊಡೆತ ಬೀಳಲಿದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಫೆಡರೇಶನ್‌ನ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಭಾರತೀಯ ಕಿಸಾನ್ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಕೃಷಿ ಕಾರ್ಯಾಗಾರದಲ್ಲಿ ವಿಷಯ ಮಂಡಿಸಿದರು.

ದೇಶದಲ್ಲಿ ಕಾಫಿ ಒಂದು ರಫ್ತು ಆಧಾರಿತ ಉತ್ಪನ್ನವಾಗಿದೆ. ದೇಶದ ಶೇ.೭೦ರಷ್ಟು ಅಧಿಕ ಕಾಫಿಯನ್ನು ೧೨೩ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಇದರಲ್ಲಿ ಯೂರೋಪಿಯನ್ ಒಕ್ಕೂಟ ಮುಖ್ಯ ಗ್ರಾಹಕವಾಗಿದೆ. ಇದೀಗ ಈ ದೇಶಗಳು ಜಾರಿಗೊಳಿಸಲು ಉದ್ದೇಶಿಸಿರುವ ಅರಣ್ಯ ಕಡಿತ ನೀತಿ ಅಡಿಯಲ್ಲಿ ಕಾಫಿ ಸೇರ್ಪಡೆಯಾಗಿದೆ.

ಈ ನಿಯಮಾವಳಿ ಪ್ರಕಾರ ಯೂರೋಪಿಯನ್ ಒಕ್ಕೂಟಕ್ಕೆ ಕಾಫಿಯನ್ನು ರಫ್ತು ಮಾಡಲು ಕಾಫಿ ತೋಟಗಳ ಭೂ ಪ್ರದೇಶ ಅಥವಾ ಭೂ ಪ್ರದೇಶದ ಆಕಾರವನ್ನು ‘ಪಾಲಿಗಾನ್’ ಸ್ವರೂಪದಲ್ಲಿ ಅವರೊಂದಿಗೆ ಹಂಚಿಕೊಳ್ಳಬೇಕು. ನಂತರ ಇದನ್ನು ಪರಿಗಣಿಸಿ ತಾವುಗಳು ಜಾರಿಗೆ ತಂದಿರುವ ನಿಯಮಾವಳಿಗೆ ಇದು ಒಪ್ಪಿಗೆಯಾದಲ್ಲಿ ತಮ್ಮ ದೇಶಕ್ಕೆ ಕಾಫಿಯನ್ನು ಆಮದು ಮಾಡಿಕೊಳ್ಳುತ್ತವೆ.

ದೇಶದಲ್ಲಿ ಕಾಫಿ ಆಂತರಿಕ ಬಳಕೆ ಹಿನ್ನಡೆಯಲ್ಲಿದ್ದು, ಇದಕ್ಕೆ ಮುಖ್ಯ ಕಾರಣ ಚಿಕೋರಿ ಬಳಸುವುದು ಆಗಿದೆ. ಪ್ರಸ್ತುತ ಶೇ.೭೦ ಚಿಕೋರಿ ಹಾಗೂ ಶೇ.೩೦ ಕಾಫಿಯ ಅನುಪಾತದಲ್ಲಿದೆ. ಶೇ.೩೦ ಹಾಗೂ ಶೇ.೭೦ ಆದಲ್ಲಿ ಆಂತರಿಕ ಬಳಕೆಯಿಂದ ಕಾಫಿಗೆ ಹೆಚ್ಚಿನ ಮೌಲ್ಯ ಲಭಿಸಲಿದೆ. ಬಹುಮುಖ್ಯವಾಗಿ ಬೆಳೆಗಾರರು ಅಂತರರಾಷ್ಟಿçÃಯ ಮಟ್ಟದಲ್ಲಿ ಕಾಫಿ ಬೆಳೆಯ ಬಗ್ಗೆ ಆಗುತ್ತಿರುವ ಬದಲಾವಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಭಾರತಕ್ಕೆ ಉಗಾಂಡ, ವಿಯೆಟ್ನಾಂ ಹಾಗೂ ಶ್ರೀಲಂಕಾ ಪ್ರಬಲ ಸ್ಪರ್ಧಿಗಳಾಗಿವೆ ಎಂದವರು.

ಕಾಫಿ ರಾಷ್ಟಿçÃಯ ಪಾನೀಯ ಆಂದೋಲನದ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಾಫಿಯನ್ನು ರಾಷ್ಟಿçÃಯ ಪಾನೀಯ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರುವಂತಾಗಬೇಕು. ಮುಖ್ಯವಾಗಿ ಸೇನೆ ಹಾಗೂ ರೈಲುಗಳಲ್ಲಿ ಇದರ ಬಳಕೆಯನ್ನು ಹೆಚ್ಚಿಸುವಂತಾಗಬೇಕು. ಇದರಿಂದ ಕಾಫಿಯ ಬಳಕೆ ಹೆಚ್ಚಾಗುವುದಲ್ಲದೆ. ಬೇಡಿಕೆಯು ಸಹಜವಾಗಿ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಆಂದೋಲನ ನಡೆಯಬೇಕು ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಕಿಸಾನ್ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟೀರ ಪ್ರವೀಣ್ ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಕಾಫಿ ಬೆಲೆಯ ಏರಿಳಿತದ ಬಗ್ಗೆ ಕಾಫಿ ಬೆಳೆಗಾರರಲ್ಲಿರುವ ಗೊಂದಲ ನಿವಾರಣೆಗೆ ಕಾರ್ಯಾಗಾರರನ್ನು ಆಯೋಜಿಸುವ ಮೂಲಕ ಕಾಫಿ ಬೆಳೆಗಾರರಿಗೆ ಉತ್ತಮ ರೀತಿಯ ಪ್ರಸ್ತುತ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಸಂಬAಧಿಸಿದ ವಿಷಯ ತಜ್ಞರಿಂದ ನೀಡುವ ಬಗ್ಗೆ ಪ್ರಯತ್ನ ಮಾಡಿದ್ದೇವೆ. ಮುಂದೆಯೂ ಕೂಡ ಕಾಲ ಕಾಲಕ್ಕೆ ತಕ್ಕಂತೆ ಕಾಫಿಯ ಬಗ್ಗೆ ವಿಷಯವನ್ನು ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಕೃಷಿ ಕಾರ್ಯಾಗಾರದಲ್ಲಿ ಕೊಡಗಿನ ವಿವಿಧ ಭಾಗದಿಂದ ಕಾಫಿ ಬೆಳೆಗಾರರು, ಸಂಘ-ಸAಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.