ಮಡಿಕೇರಿ, ಸೆ. ೧೦: ಮಡಿಕೇರಿ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಮಹಾಸಭೆಯು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರು ಮಾತನಾಡಿ, ೨೦೦೫ ರಲ್ಲಿ ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಅವರ ಮಾರ್ಗದರ್ಶನ ಹಾಗೂ ಅಂದಿನ ಕೊಡವ ಸಮಾಜದ ೪೭೨ ಸದಸ್ಯರಿಂದ ಸಂಘವು ಪ್ರಾರಂಭಗೊAಡಿದೆ. ಇದೀಗ ೨೦ ವರ್ಷಗಳು ಕಳೆದಿದ್ದು, ಪ್ರಸ್ತುತ ೨೧೪೩ ಸದಸ್ಯರಿದ್ದು, ಪಾಲುಹಣ ಒಂದು ಕೋಟಿ ಮೇಲ್ಪಟ್ಟಿದ್ದು ಈ ಬಾರಿ ೨೮.೨೯ ಲಕ್ಷ ಲಾಭಾಂಶ ಪಡೆದಿದ್ದು ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದೆಂದರು. ಸಂಘದ ಸದಸ್ಯತ್ವವನ್ನು ಪಡೆಯುವುದರ ಮೂಲಕ ಸಂಘದ ಸೌಲಭ್ಯವನ್ನು ಪಡೆಯುವುದು ಹಾಗು ಸಂಘದಿAದ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ಹತ್ತನೆ ಹಾಗು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು. ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿ, ಮಹಾಸಭೆಯ ವರದಿಯನ್ನು ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕಳ್ಳೇಂಗಡ ನೀಮಾ ಮಂಡಿಸಿದರು. ಉಪಾಧ್ಯಕ್ಷ ಕುಡುವಂಡ ಬಿ.ಉತ್ತಪ್ಪ ವಂದಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಚೋವಂಡ ಡಿ.ಕಾಳಪ್ಪ, ಅಂಜಪರವAಡ ಉಷಾ, ಕೊಂಗಾAಡ ಎ. ತಿಮ್ಮಯ್ಯ, ನಂದೇಟಿರ ರಾಜಮಾದಪ್ಪ, ಕೇಕಡ ಎಂ. ಸುಗುಣ, ಡಾ.ಸಣ್ಣುವಂಡ ಕಾವೇರಪ್ಪ, ಮೇದುರ ಪಿ.ಕಾವೇರಪ್ಪ, ಮುಕ್ಕಾಟಿರ ಪೊನ್ನಮ್ಮ, ಚೆರುಮಂದAಡ ಜಿ. ಪೊನ್ನಪ್ಪ, ಕಾಂಡೆರ ಯು. ಕುಟ್ಟಪ್ಟ ಹಾಜರಿದ್ದರು.