ಮಡಿಕೇರಿ. ಸೆ. ೧೦: ಮುಕ್ಕೋಡ್ಲು ಗ್ರಾಮದಲ್ಲಿ ಎರಡು ಏಕರೆ ಕಾಫಿ ಮತ್ತು ಏಲಕ್ಕಿ ತೋಟವನ್ನು ಅರಣ್ಯ ಜಾಗ ಎಂದು ಕಾರಣ ನೀಡಿ ಅರಣ್ಯ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ನಾಶಗೊಳಿಸಿದ ಘಟನೆಗೆ ಸಂಬAಧಿಸಿದAತೆ ಅರಣ್ಯ ಅಧಿಕಾರಿಗಳಾದ ದರ್ಶಿನಿ ಮತ್ತು ದಿನೇಶ್ ಎಂಬವರನ್ನು ತಾ.೨೬ರ ಒಳಗಾಗಿ ಕೆಲಸದಿಂದ ವಜಾಗೊಳಿಸಬೇಕು ಮತ್ತು ನೊಂದ ಬೆಳೆಗಾರ ಕಾಳಚಂಡ ನಾಣಿಯಪ್ಪ ಅವರಿಗೆ ೩೦ ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಜಿಲ್ಲಾ ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ.೨೬ ರ ಒಳಗೆ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಆಗಸ್ಟ್ ೧೮ ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮುಕ್ಕೋಡ್ಲುವಿನ ಕಾಳಚಂಡ ನಾಣಿಯಪ್ಪ ಅವರು ತೋಟ ಮಾಡಿಕೊಂಡಿರುವ ಜಾಗವನ್ನು ಅರಣ್ಯವೆಂದು ತಿಳಿಸಿ, ಸಂಪೂರ್ಣ ನಾಶಗೊಳಿಸಿದ್ದಾರೆ.

ನಾಣಿಯಪ್ಪ ಅವರು ಮುಕ್ಕೋಡ್ಲುವಿನ ಪೈಸಾರಿ ಜಾಗದಲ್ಲಿ ಏಲಕ್ಕಿ, ಕಾಫಿ ತೋಟವನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ತೋಟ ಪೈಸಾರಿಯಾಗಿರುವ ಹಿನ್ನೆಲೆ ಇವರು ಇದನ್ನು ಮಂಜೂರು ಮಾಡಿಕೊಡುವಂತೆ ೧೯೯೧ ರಲ್ಲಿ ಫಾರಂ ನಂ.೫೧ ರಲ್ಲಿ ಮತ್ತು ೨೦೧೮ರಲ್ಲಿ ಫಾರಂ ನಂ.೫೩ ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರ ತೋಟ ಸರ್ವೆ ನಂ.೩೩/೨ ರಲ್ಲಿದ್ದು, ಇದರ ಪಹಣಿಯಲ್ಲಿ ಪೈಸಾರಿ ಎಂದಿದೆಯೇ ಹೊರತು ಅರಣ್ಯವೆಂದು ನಮೂದಾಗಿಲ್ಲ. ಹೀಗಿದ್ದೂ ಇವರ ಜಾಗದಲ್ಲಿನ ಕೃಷಿಯನ್ನು ನಾಶಮಾಡಲು ಅರಣ್ಯ ಇಲಾಖೆಗೆ ಅಧಿಕಾರವನ್ನು ನೀಡಿದವರು ಯಾರು ಎಂದು ಸುರೇಶ್ ಪ್ರಶ್ನಿಸಿದರು.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ ‘ಸಿ ಮತ್ತು ಡಿ’ ಜಮೀನಿನ ಸಮಸ್ಯೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆ ಪರಿಹಾರವಾಗಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಬೇಕೆಂದಿದೆಯಾದರು, ಪ್ರಸ್ತುತ ಅರಣ್ಯ ಇಲಾಖೆ ಈ ಸೂಚನೆಗಳನ್ನು ನಿರ್ಲಕ್ಷಿಸಿ ತಣ್ಣಿಮಾನಿ, ಭಾಗಮಂಡಲ ಮುಂತಾದ ಕಡೆಗಳಲ್ಲಿ ಸರ್ವೆ ಕಾರ್ಯವನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿ ಇದಕ್ಕೆ ತೀವ್ರ ಆಕ್ರೇಪ ವ್ಯಕ್ತಪಡಿಸಿದರು. ಸಿ ಮತ್ತು ಡಿ ದರ್ಜೆಯ ಜಮೀನುಗಳನ್ನು ಗುರುತಿಸುವ ಮತ್ತು ಸರ್ವೇ ಕಾರ್ಯಕ್ಕಾಗಿ ವಿಶೇಷಾಧಿಕಾರಿಯಾಗಿ ರೇಣುಕಾಂಬ ಎಂಬವರನ್ನು ಸರ್ಕಾರ ನಿಯುಕ್ತಿ ಗೊಳಿಸಿದೆ. ನಿಯಮದಂತೆ ಸರ್ವೇ ನಡೆಸುವ ೪ಏಳನೇ ಪುಟಕ್ಕೆ ಹಿತಿಯನ್ನು ನೀಡಬೇಕು. ಆದರೆ, ಮಾಹಿತಿ ನೀಡದೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ.

ಸಿ ಮತ್ತು ಡಿ ಜಮೀನನನ್ನು ಅರಣ್ಯವನ್ನಾಗಿ ಪರಿವರ್ತಿಸುವುದಕ್ಕೆ ಮತ್ತು ಈ ಸಂಬAಧದ ಸೆಕ್ಷನ್ ೪ ಸರ್ವೆ ಕಾರ್ಯಕ್ಕೆ ಬೆಳೆಗಾರರ ವಿರೋಧವಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ರೈತ ಹೋರಾಟ ಸಮಿತಿ ಈಗಾಗಲೆ ಹಲವು ಹೋರಾಟಗಳನ್ನು ನಡೆಸಿದ್ದರೂ ಸರ್ಕಾರ ಸೂಕ್ತ ಸ್ಪಂದನ ನೀಡಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ಬಹಳಷ್ಟು ಬೆಳೆೆಗಾರರು ಸಿ ಮತ್ತು ಡಿ ಭೂಮಿಯಲ್ಲಿ ಅರ್ಧ, ಒಂದು ಎಕರೆ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ ಸಿ ಮತ್ತು ಡಿ ಜಾಗ ಅರಣ್ಯ ಭೂಮಿ ಎನ್ನುವ ಕಾರಣಕ್ಕಾಗಿ, ಬೆಳೆಗಾರರಿಗೆ ಸರ್ಕಾರದ ಪರಿಹಾರವಾಗಲಿ, ಸೌಲಭ್ಯಗಳಾಗಲಿ ಸಿಗುತ್ತಿಲ್ಲ ಎಂದು ಸುರೇಶ್ ವಿಷಾದಿಸಿದರು.

ಕಣ್ಣೀರಿಟ್ಟ ಕೃಷಿಕ

ಮುಕ್ಕೊಡ್ಲುವಿನ ಕಾಳಚಂಡ ನಾಣಿಯಪ್ಪ ಮಾತನಾಡಿ ಪೈಸಾರಿ ಜಾಗದಲ್ಲಿರುವ ನಮ್ಮ ತೋಟಕ್ಕೆ ಬಂದ ಅರಣ್ಯ ಅಧಿಕಾರಿಗಳು ಜಾಗ ದೇವರಕಾಡಾಗಿದ್ದು, ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿ ತೆರಳಿದ್ದರು. ನಂತರ ಎರಡು ದಿನಗಳ ಬಳಿಕ ಆಗಮಿಸಿದ ಅಧಿಕಾರಿಗಳು ಕಾಫಿ ಗಿಡಗಳು ಮತ್ತು ಏಲಕ್ಕಿ ಗಿಡಗಳನ್ನು ಸಂಪೂರ್ಣ ಕಡಿದು ಹಾಕಿದರು ಎಂದು ಕಣ್ಣೀರಿಟ್ಟರು. ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಭಾಗಮಂಡಲ ಹೋಬಳಿ ಅಧ್ಯಕ್ಷ ಹೊಸೂರು ಗಿರೀಶ್, ಸಂಘದ ಜಿಲ್ಲಾ ನಿರ್ದೇಶಕ ನಾಗಂಡ ಭವಿನ್, ಮುಕ್ಕೋಡ್ಲು ಗ್ರಾಮದ ಸಜನ್ ನಂದೀರ, ಓಡಿಯಂಡ ಸುಜನ್ ಉಪಸ್ಥಿತರಿದ್ದರು.