ಮಡಿಕೇರಿ, ಸೆ. ೧೦: ಮಾಜಿ ರಾಷ್ಟçಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತರರಾಷ್ಟಿçÃಯ ಫೌಂಡೇಶನ್ನ ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಕಾನೂನು ಸಲಹೆಗಾರರಾಗಿ ವಕೀಲರಾದ ಕೊಡಗಿನವರಾದ ಮಲ್ಲೇಂಗಡ ಬಿ. ಗಗನ್ ಗಣಪತಿ ಅವರನ್ನು ಆಯ್ಕೆ ಮಾಡಲಾಗಿದೆ.
ಇವರು ಭಾರತೀಯ ಹಾಗೂ ಅಂತರರಾಷ್ಟಿçÃಯ ಕಾನೂನು ಸಂಸ್ಥೆಯಾಗಿರುವ ಲಾರ್ಸ್ ಟ್ರಾನ್ಸ್ ಕಾಂಟಿನೆAಟಲ್ ಇದರ ಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದಾರೆ. ತಾ. ೫ ರಂದು ತಮಿಳುನಾಡಿನ ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತರರಾಷ್ಟಿçÃಯ ಫೌಂಡೇಶನ್ ವತಿಯಿಂದ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
೨೦೧೫ರ ಅಕ್ಟೋಬರ್ನಲ್ಲಿ ಈ ಫೌಂಡೇಶನ್ ಅನ್ನು ಸ್ಥಾಪಿಸಲಾಗಿದ್ದು, ಅಬ್ದುಲ್ ಕಲಾಂ ಅವರ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಸಹಾಯಹಸ್ತ ನೀಡುವ ಉದ್ದೇಶ ಹಾಗೂ ಚಿಂತನೆಯೊAದಿಗೆ ಇದು ಕಾರ್ಯನಿರ್ವಹಿಸುತ್ತಿದೆ.
ಗಗನ್ ಗಣಪತಿ ಅವರು ಮೂಲತಃ ಬಾಡಗರಕೇರಿ ನಿವಾಸಿ, ಬೆಂಗಳೂರಿನಲ್ಲಿ ನೆಲೆಸಿರುವ ಮಲ್ಲೇಂಗಡ ದಾದಾ ಬೆಳ್ಯಪ್ಪ ಹಾಗೂ ಸುಶೀಲ ದಂಪತಿ ಪುತ್ರರಾಗಿದ್ದು, ಖ್ಯಾತ ವಕೀಲರಾಗಿ ಗುರುತಿಸಲ್ಪಟ್ಟಿದ್ದಾರೆ.