ಮರಗೋಡು, ಸೆ. ೧೦: ಮರಗೋಡಿನ ವಿವೇಕಾನಂದ ಯುವಕ ಸಂಘ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಗ್ರಾಮಾಂತರ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಉದ್ಘಾಟÀÁ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಕಾನಡ್ಕ ಪ್ರಸಾದ್ (ಶ್ಯಾಮ್) ವಹಿಸಿದ್ದರು. ನಿವೃತ್ತ ಸೈನಿಕರಾದ ಕಟ್ಟೆಮನೆ ಹನಿಸೋಮಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮರಗೋಡು ಮೊದಲಿನಿಂದಲೂ ಕ್ರೀಡೆಯಲ್ಲಿ ತೊಡಗಿಕೊಂಡಿರುವ ಗ್ರಾಮ, ಕ್ರೀಡೆಯಿಂದ ಯುವಕರಲ್ಲಿ ದೈಹಿಕ ಕ್ಷಮತೆ ಹೆಚ್ಚುತ್ತದೆ ಹಾಗೆಯೇ ಯುವಕರು ಮಾದಕ ವ್ಯಸನಗಳಿಂದ ದೂರವಿರಬೇಕೆಂದು ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಮರಗೋಡು ಪ್ರಾಥಮಿಕ ಶಾಲಾ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಪಿ. ಚಿತ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಳಪದ ಜಯಕುಮಾರ್, ಬಹುಮಾನ ದಾನಿಗಳಾದ ಮುಕ್ಕಾಟಿ ಜಗದೀಶ್ ನಾಣಯ್ಯ, ಮುಕ್ಕಾಟಿ ಗಿರೀಶ್, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್, ಹಾಗೂ ಶೃತಿಲ್ ಉಪಸ್ಥಿತರಿದ್ದರು. ಕಾನಡ್ಕ ಭರತ್ ಪ್ರಾರ್ಥಿಸಿ, ಪ್ರದೀಪ್ ಮರಗೋಡು ಸ್ವಾಗತಿಸಿದರು, ಸಂಘದ ಹಿರಿಯ ಸಲಹೆಗಾರರಾದ ಮಾಳಿಗೆ ಮನೆ ವೆಂಕಟೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಪ್ರದಾನ ಕಾರ್ಯದರ್ಶಿ ಬಡುವಂಡ್ರ ದುಶ್ಯಂತ್ ವಂದಿಸಿದರು
ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪೂಳಕಂಡ ಶುಭ ರಾಜೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಮಂಡ ಮೊಣ್ಣಪ್ಪ ನಂದಕುಮಾರ್ ಪಿ.ಟಿ., ಮುಕ್ಕಾಟಿ ಚಿದಂಬರ, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಕಾನಡ್ಕ ಪ್ರಸಾದ್, ದಾನಿಗಳಾದ ತೆಕ್ಕಡೆ ಧಾಮೋಧರ, ಚೀಯಂಡಿರ ಕಿಶನ್, ಕಾನಡ್ಕ ಅನಂತ್ ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಮಾಳಿಗೆಮನೆ ವೆಂಕಟೇಶ್ ಸ್ವಾಗತಿಸಿದರು, ಮಗೇರನ ಬೆಳ್ಯಪ್ಪ ವಂದಿಸಿದರು.