ವೀರಾಜಪೇಟೆ, ಸೆ. ೧೦: ವೀರಾಜಪೇಟೆ ವ್ಯಾಪ್ತಿಯ ವಾರ್ಡ್ಗಳನ್ನು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ ಎಂದು ತಾಲೂಕು ಜೆಡಿಎಸ್ ಆರೋಪಿಸಿದ್ದು, ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪಿ.ಎ. ಮಂಜುನಾಥ್, ವೀರಾಜಪೇಟೆ ವ್ಯಾಪ್ತಿಯ ಪುನರ್‌ವಿಂಗಡಣೆಗೊAಡಿರುವ ೨೩ ವಾರ್ಡ್ಗಳಲ್ಲಿ ಕೆಲವು ವಾರ್ಡ್ಗಳ ವಿಂಗಡಣೆ ಅವೈಜ್ಞಾನಿಕವಾಗಿದ್ದು, ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಮುಂದಿನ ಚುನಾವಣೆಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿದ್ದಾರೆ. ಇದನ್ನು ಜಿಲ್ಲಾಧಿüಕಾರಿಗಳು ಗಂಭೀರವಾಗಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನು ರೀತಿಯ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಪಟ್ಟಣದ ನೆಹರು ನಗರವನ್ನು ೧ ಮತ್ತು ೨ ಎಂದು ವಿಭಾಗ ಮಾಡಲಾಗಿದೆ. ಅದೇ ರೀತಿ ವಿದ್ಯಾನಗರವನ್ನು ಕೂಡ ೧ ಮತ್ತು ೨ ಭಾಗಗಳಾಗಿ ವಿಂಗಡಿಸಿದ್ದಾರೆ. ಆದರೆ ಪಟ್ಟಣದ ಅತಿ ದೊಡ್ಡ ಕ್ಷೇತ್ರವಾದ ಗಾಂಧಿನಗರದ ಒಂದು ಭಾಗವನ್ನು ಗೌರಿಕೆರೆಗೆ ವಾರ್ಡ್ಗೆ ಸೇರ್ಪಡೆಗೊಳಿಸಲಾಗಿದೆ. ಈ ಸೇರ್ಪಡೆ ದುರುದ್ದೇಶ ಪೂರಕವಾಗಿದೆ ಎಂದು ಆರೋಪಿಸಿದರು.

ಈ ರೀತಿಯ ವಿಂಗಡಣೆಯಿAದ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ತಮ್ಮ ಅಧಿಕೃತ ದಾಖಲಾತಿಗಳು ತಿದ್ದುಪಡಿ ಮಾಡುವ ಅನಿವಾರ್ಯತೆ ಉಂಟಾಗಲಿದೆ. ವಾರ್ಡ್ ವಿಂಗಡಣೆಯಲ್ಲಿ ಸ್ಥಳೀಯ ಸಂಸ್ಥೆಗೆ ಪ್ರತಿಬಾರಿ ಖಾಯಂ ಆಗಿ ಆಯ್ಕೆಯಾಗಿ ಬರುತ್ತಿರುವ ಜನಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ಕೂಡ ತಮ್ಮ ಗೆಲುವಿಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ವ್ಯಾಪಾರಿಗಳನ್ನು ಅನಧಿಕೃತವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಇವರುಗಳು ತಮ್ಮ ರಾಜ್ಯದಲ್ಲಿ ಮತದಾನ ನಡೆಯುವಾಗ ಅಲ್ಲಿಗೆ ತೆರಳಿ ಮತದಾನ ಮಾಡಿ ಬರುವುದನ್ನು ಖುದ್ದು ಗಮನಿಸಿದ್ದೇವೆ. ಇನ್ನು ಕೆಲವರು ವಾರ್ಡ್ಗಳಿಂದ ಮನೆಗಳನ್ನು ಸ್ಥಳಾಂತರ ಮಾಡಿದಾಗ ಒಂದು ಕಡೆಯ ಮತದಾನದ ಪಟ್ಟಿಯಿಂದ ಹೆಸರನ್ನು ತೆಗೆಯದೆ ೨ ಕಡೆ ತಮ್ಮ ಹೆಸರನ್ನು ದಾಖಲಿಸಿಕೊಂಡು ೨ ಕಡೆಗಳಲ್ಲಿ ಮತದಾನ ಮಾಡಿದ ಉದಾಹರಣೆಗಳಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುತ್ತಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಹರ್ಷ, ತಾಲೂಕು ಉಪಾಧ್ಯಕ್ಷ ಪಾಣತ್ತಲೆ ಸತ್ಯ, ಬಲ್ಲುಡ ವಿನೋದ್, ಯುವ ಘಟಕದ ಅಧ್ಯಕ್ಷ ಸೈಫುದ್ದಿನ್ ಉಪಸ್ಥಿತರಿದ್ದರು.