ಇದೀಗ ೫೦-೬೦ ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿರುವ, ಕೃಷಿ ಮಾಡಿಕೊಂಡು, ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಣ್ಣ ಬೆಳೆಗಾರರ ಜೀವನ ಬೀದಿ ಪಾಲಾಗಲಿದೆ. ಈಗಿನ ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಸದಸನದಲ್ಲಿ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಸಿಗಲಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸರಕಾರ ಕಾನೂನು ರೀತಿಯಡಿ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ. ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ. ಆದರೂ ಪ್ರಯತ್ನಿಸುತ್ತಿಲ್ಲ. ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ. ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಎಲ್ಲವನ್ನೂ ಅರಣ್ಯ ಮಾಡಲು ಹೊರಟಿದ್ದಾರೆ

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ; ಅರಣ್ಯ ಇಲಾಖಾಧಿಕಾರಿಗಳು ತಮಗೆ ಇಷ್ಟ ಬಂದAತೆ ಕಾನೂನು ರೂಪಿಸಿಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗವನ್ನು ಫಾರೆಸ್ಟ್ ಪೈಸಾರಿ ಎಂದು ಹೊಸದಾದ ನಿಯಮ ಮಾಡಿಕೊಂಡಿದ್ದಾರೆ. ಸಿ ಆ್ಯಂಡ್ ಡಿ ಜಾಗವನ್ನು ಯಾವದೇ ಕಾರಣಕ್ಕೂ ಅರಣ್ಯವೆಂದು ಘೋಷಿಸಲಾಗದು. ಹಲವಾರು ವರ್ಷಗಳಿಂದ ಸಣ್ಣ ಬೆಳೆೆಗಾರರು ಈ ಜಾಗದಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅಕ್ರಮ ಸಕ್ರಮ ಯೊಜನೆಯಡಿ ಅರ್ಜಿ ಕೂಡ ಸಲ್ಲಿಸಿದ್ದಾರೆ. ಸಕ್ರಮಗೊಳಿಸುವ ಪ್ರಕ್ರಿಯೆ ವಿಳಂಬವಾಗಿದೆ, ಈ ನಡುವೆ ಅಧಿಕಾರಿಗಳು ಬೆಳೆಗಾರರಿಗೆ ನೋಟೀಸ್ ನೀಡುತ್ತಾ ಕಿರುಕುಳ ನೀಡುತ್ತಿರುವದು ಸರಿಯಲ್ಲವೆಂದು ಹೇಳಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಅತ್ಯಧಿಕ ಹಾಗೂ ಮಡಿಕೇರಿ ತಾಲೂಕಿನ ಭಾಗಮಂಡಲ ಭಾಗದಲ್ಲಿನ ಜಾಗವನ್ನು ಅರಣ್ಯ ಮಾಡಲು ಹೊರಟಿದ್ದಾರೆ. ಈ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರ