ಗೋಣಿಕೊಪ್ಪ ವರದಿ, ಸೆ. ೧೦: ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರಲ್ಲಿನ ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ನಾಡಿಗೆ ತಿಳಿಪಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಕಾರ್ಯದರ್ಶಿ ಪಿ. ಕೆ. ಅಬ್ದುಲ್ ರೆಹಮನ್ ತಿಳಿಸಿದರು.
ಚೈತನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ ಅವರನ್ನು ಅರಿಯಿರಿ, ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ಆದರ್ಶದ ಔಚಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೆ. ೩ ರಿಂದ ಸೆ. ೧೪ ರವರೆಗೆ ಸೀರತ್ ಪ್ರವಾದಿ ಸಂದೇಶ ನೀಡಲಾಗುವುದು. ಜನರಿಂದ ಅವರ ಬಗ್ಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬAಧಗಳನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಶಾಂತಿ ಪ್ರಕಾಸನ ಪ್ರಕಟಿಸಿರುವ ಎರಡು ಪುಸ್ತಕಗಳನ್ನು ರಾಜ್ಯಾದÀ್ಯಂತ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಅಭಿಯಾನದ ಭಾಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆ, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಗೋಣಿಕೊಪ್ಪ ಸ್ಥಾನಿಕ ಸಂಚಾಲಕ ಎ. ಪಿ. ತನ್ವಿರ್ ಅಹಮದ್ ಮಾತನಾಡಿ, ಸೆ. ೭ ರಂದು ಗೋಣಿಕೊಪ್ಪದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಸಹ ಕಾರ್ಯದರ್ಶಿ ರಿಯಾಜ್ ಅಹಮ್ಮದ್ ಚೈತನ್ಯ ಸಭಾಂಗಣದಲ್ಲಿ ಭಾಷಣ ಮಾಡಲಿದ್ದಾರೆ. ಸ್ವಚ್ಛತೆಗೆ ಕೈಗೊಳ್ಳಬೇಕಾದ ಜಾಗೃತಿ, ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಕುಶಾಲನಗರದಲ್ಲಿ ಕೂಡ ಸಾರ್ವಜನಿಕ ಕಾರ್ಯಕ್ರಮ ಸೆ. ೨೭ ರಂದು ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕರ್ತರಾದ ಶಮಿರ್, ಮುಹಮ್ಮದ್ ಸೆಗಿರ್ ಅಸ್ಹರಿ, ಸಫ್ವಾನ್ ಅಹಮ್ಮದ್, ಎಂ.ಆರ್. ರಿಜ್ವಾನ್, ಮುಹಮ್ಮದ್ ಫರ್ಧೆನ್, ಕುಝರ್ ಅಬ್ದುಲ್ಲ ಈ ಸಂದರ್ಭ ಅಭಿಯಾನಕ್ಕೆ ಶುಭಕೋರಿದರು.