ಮಡಿಕೇರಿ, ಸೆ. ೧೧: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ ೪ನೇ ವರ್ಷದ ಜಾನಪದ ದಸರಾವನ್ನು ತಾ. ೨೯ ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದರ್ಶನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದರ್ಭ ಜಾನಪದ ವಸ್ತು ಪ್ರದರ್ಶನ, ಕಲಾ ಜಾಥಾ ಕೂಡ ಜರುಗಲಿದೆ ಎಂದು ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ.
ಜಾನಪದ ದಸರಾ ಸಂದರ್ಭ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದ±ðನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದರ್ಭ ನೀಡಲು ಇಚ್ಚಿಸುವ ಪ್ರದರ್ಶನದ ಬಗ್ಗೆ ತಮ್ಮ ಹೆಸರನ್ನು ತಾ. ೨೦ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಅರ್ಜಿಗಳನ್ನು ಅಧ್ಯಕ್ಷರು, ಕೊಡಗು ಜಾನಪದ ಪರಿಷತ್, ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ - ೫೭೧೨೦೧ ಇಲ್ಲಿಗೆ ಕಳುಹಿಸಬೇಕು, ಜಾನಪದ ದಸರಾ ಸಂಬAಧಿತ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆಗಳು - ೯೮೮೬೧೮೧೬೧೩, ಎಸ್ ಐ ಮುನೀರ್ ಅಹಮ್ಮದ್ , ಪ್ರಧಾನ ಕಾರ್ಯದರ್ಶಿ, ೯೪೪೮೬ ೧೪೯೯೯ ಎಸ್.ಎಸ್. ಸಂಪತ್ ಕುಮಾರ್ ಖಜಾಂಜಿ, ಕೊಡಗು ಜಿಲ್ಲಾ ಜಾನಪದ ಪರಿಷತ್, ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.