ಮಡಿಕೇರಿ, ಸೆ. ೧೧: ಕಾಫಿ ಬೆಳೆಯುವ ಜಿಲ್ಲೆಗಳನ್ನು ಒಳಗೊಂಡAತೆ ಈ ಹಿಂದೆ ಪ್ರಗತಿಯ ಪಥದಲ್ಲಿದ್ದು ನಂತರದಲ್ಲಿ ಕಾರಣಾಂತರಗಳಿAದ ಅವನತಿಯತ್ತ ಸಾಗಿದ್ದ ಮೈಸೂರು ಕಾಫಿ ಸಂಸ್ಕರಣಾ ಘಟಕ (ಎಂ.ಸಿ.ಪಿ.ಸಿ.ಎಸ್) ಸಂಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಂಸ್ಥೆಯ ಮಹಾಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು.

ಸಂಸ್ಥೆಯ ಹಿಡಿತದಿಂದ ಕೈತಪ್ಪಿ ಹೋಗುವ ಹಂತ ತಲುಪಿದ್ದ ಈ ಸಂಸ್ಥೆ ಇದೀಗ ಹಲವರ ಪ್ರಯತ್ನದಿಂದಾಗಿ ಮತ್ತೆ ಸಂಸ್ಥೆಯ ಅಧೀನಕ್ಕೆ ಬಂದಿದ್ದು ಇದರ ಅಧ್ಯಕ್ಷರಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಅವರು ಅಧ್ಯಕ್ಷರಾಗಿದ್ದಾರೆ.

ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಪ್ರಮುಖರು ಆಡಳಿತ ಮಂಡಳಿಯಲ್ಲಿದ್ದು ಇದೀಗ ನಡೆದ ಮಹಾಸಭೆಯಲ್ಲಿ ಮುಂದಿನ ರೂಪು-ರೇಷೆಗಳ ಬಗ್ಗೆ ಚರ್ಚೆ ನಡೆದಿದೆ.

ಎ.ಎಸ್. ಪೊನ್ನಣ್ಣ ಅವರು ಸಭೆಯಲ್ಲಿ ಪಾಲ್ಗೊಂಡಿದ್ದು ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿದೆ. ಮೈಸೂರಿನಲ್ಲಿರುವ ಸಂಸ್ಥೆಯ ಜಾಗದಲ್ಲಿ ಮಹಾಸಭೆ ನಡೆಸಲಾಯಿತು. ಪ್ರಮುಖವಾಗಿ ಆದಾಯ ಕ್ರೋಢಿಕರಣದ ನಿಟ್ಟಿನಲ್ಲಿ ಚರ್ಚಿಸಲಾಗಿ ಸದ್ಯಕ್ಕೆ ಬಾಡಿಗೆ ಆಧಾರದಲ್ಲಿ ಆ ಜಾಗದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಪ್ರಾರಂಭಿಸಲು ಅವಕಾಶ ಕಲ್ಪಿಸುವುದು ಕಾಫಿಯಾಧಾರಿತವಾಗಿ ಮತ್ತು ಪ್ರದರ್ಶನ ವಿಚಾರ ಸಂಕಿರಣಗಳು ಬ್ರಾಂಡಿAಗ್ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಅಲ್ಲದೆ ಸಂಘದ ಪುನಶ್ಚೇತನಕ್ಕೆ ಸಹಕಾರ ಕೋರಿ ಸರಕಾರದ ಮೇಲೆ ಒತ್ತಡ ಹೇರುವುದು ಸದಸ್ಯತ್ವ ಹೆಚ್ಚಿಸುವುದು ಬೈಲಾ ತಿದ್ದುಪಡಿಗೆ ಸರಕಾರದ ಅನುಮೋದನೆ ಜಾಗ ಸಂಘಕ್ಕೆ ವಾಪಸಾತಿ ವಿಚಾರ ಇತ್ಯಾದಿ ಅಂಶಗಳ ಬಗ್ಗೆ ಚರ್ಚಿಸಲಾಯಿತು.

ಸಂಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ರೂಪಿಸಿದ್ದ ದಿವಂಗತ ಮುಖಂಡ ಬೋಸ್ ದೇವಯ್ಯ ಹಾಗೂ ವಕೀಲ ಹೇಮಚಂದ್ರ ಅವರುಗಳ ಭಾವಚಿತ್ರವನ್ನು ಅಳವಡಿಸುವ ನಿಟ್ಟಿನಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿಯಲ್ಲಿರುವ ಕೊಡಗಿನ ಪ್ರಮುಖರುಗಳಾದ ಉಪಾಧ್ಯಕ್ಷ ಪ್ರಭುದೇವ್, ಎ.ಕೆ. ಮನು ಮುತ್ತಪ್ಪ, ಕೋಲತಂಡ ಸುಬ್ರಮಣಿ, ನೆಲ್ಲೀರ ಚಲನ್, ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇರಂಡ ನಂದಾ ಸುಬ್ಬಯ್ಯ, ಅಳಮೆಂಗಡ ವಿವೇಕ್, ಶಾಂತಳ್ಳಿ ದಿನೇಶ್, ರಾಜಶೇಖರ್, ಉಮೇಶ್, ಮತ್ತಿತರರು ಹಾಜರಿದ್ದರು.