ಚೆಯ್ಯಂಡಾಣೆ, ಸೆ. ೧೧: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ೫೨ ವರ್ಷಗಳಿಂದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಘಟನೆಯಿAದ ಕಡಂಗ ಬದ್ರಿಯಾ ಮಸೀದಿಯ ಸಭಾಂಗಣದಲ್ಲಿ ತಾ. ೧೨, ೧೩ ಹಾಗೂ ೧೪ ರಂದು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ನಡೆಯಲಿದೆ. ಎಸ್.ಎಸ್.ಎಫ್ ಸಂಘಟನೆಯಿAದ೨೦೦೩ರಲ್ಲಿ ಪ್ರಾರಂಭಿಸಿದ ಸಾಹಿತ್ಯೋತ್ಸವ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಎರಡು ವರ್ಷಗಳಿಗೊಮ್ಮೆ ಸಾಹಿತ್ಯೋತ್ಸವ ನಡೆಯುತ್ತಿತ್ತು. ೨೦೦೩ ರಿಂದ ೨೦೨೧ರವರೆಗೆ “ಪ್ರತಿಭೋತ್ಸವ” ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಲಾ ಕಾರ್ಯಕ್ರಮ ೨೦೨೩ ರಿಂದ ಅಧಿಕೃತವಾಗಿ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ನಡೆಯುತ್ತಿದ್ದು, ಈ ಬಾರಿ ಕಡಂಗದಲ್ಲಿ ನಡೆಯುತ್ತಿರುವುದು ೧೩ನೇ ಸಾಹಿತ್ಯೋತ್ಸವವಾಗಿದೆ, ರಾಜ್ಯ ಮಟ್ಟದವರೆಗೆ ಮಾತ್ರ ಸೀಮಿತವಾಗಿದ್ದ ಎಸ್‌ಎಸ್‌ಎಫ್ ಸಾಹಿತ್ಯೋತ್ಸವವು ೨೦೨೧ ರಿಂದ ರಾಷ್ಟಿçÃಯ ಮಟ್ಟದಲ್ಲಿ ಕೂಡ ಆಯೋಜನೆಗೊಳುತ್ತಿದೆ. ಯೂನಿಟ್ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭೆಗಳು ಸೆಕ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮೊದಲ ಸ್ಥಾನ ಪಡೆದ ಪ್ರತಿಭೆಗಳು ಡಿವಿಷನ್ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ಜಿಲ್ಲಾಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆ ಆಗುತ್ತಾರೆ.

ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಪೈಪೋಟಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ. ನಂತರ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ರಾಷ್ಟ್ರೀಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

೭ ವಿಭಾಗ, ೧೬೦ ಕ್ಕೂ ಹೆಚ್ಚು ಸ್ಪರ್ಧೆಗಳು, ೫೦೦ ರಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಎಸ್.ಎಸ್.ಎಫ್ ಸಾಹಿತ್ಯೋತ್ಸವವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಿದೆ.ಈ ಬಾರಿ ಲಿಜೆಂಡ್ಸ್ ಎಂಬ ಮತ್ತೊಂದು ಕಾರ್ಯಕ್ರಮ ಕೂಡ ಸೇರ್ಪಡೆ ಗೊಂಡು ಯುವ ಜನತೆಗೆ ಸಾಹಿತ್ಯದ ಹುಮ್ಮಸ್ಸು ಮೂಡಿದೆ, ರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯೋತ್ಸವ ನಡೆಯುತ್ತಿರುವುದರಿಂದ ಎಸ್.ಎಸ್.ಎಫ್ ರಾಜ್ಯ ಸಮಿತಿ ರಾಷ್ಟ್ರೀಯ ಮಟ್ಟಕ್ಕೆ ಅನುಕೂಲ ವಾಗುವಂತಹ ವಿಷಯಗಳ ಸ್ಪರ್ಧೆಗಳಿಗೆ ಅವಕಾಶ ನೀಡಲಾಗಿದೆ.

೨೫ ವರ್ಷದೊಳಗಿನ ಸ್ಪರ್ಧಿಗಳು ಸಾಹಿತ್ಯೋತ್ಸವದಲ್ಲಿ ಭಾಗವಹಿಸ ಬಹುದಾಗಿದೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ವಯಸ್ಸಿಗೆ ಅನುಗುಣವಾಗಿ, ಒಟ್ಟು ೭ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಕಡಂಗದಲ್ಲಿ ತಾ.೧೩ರಿಂದ ನಡೆಯಲಿರುವ ಸಾಹಿತ್ಯೋತ್ಸವದಲ್ಲಿ ಐದು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ೧೦ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ.

ನೋಡುಗರ ಮನಸೂರೆಗೊಳ್ಳುವ ವೇದಿಕೆಗಳು ಸಜ್ಜು ಗೊಂಡಿದ್ದು, ಸಾಹಿತ್ಯೋತ್ಸವದ ಪ್ರವೇಶ ದ್ವಾರ ನೋಡುಗರ ಗಮನ ಸೆಳೆಯುತ್ತಿದೆ. ರಾತ್ರಿ ಕಡಂಗ ಬದ್ರಿಯಾ ಮಸೀದಿಯ ಆವರಣ ಹಾಗೂ ಪಟ್ಟಣ ದಿಪಾಲಂಕಾರದಿAದ ಕಂಗೊಳಿಸುತ್ತಿದೆ. ಕೇರಳ,ಕರ್ನಾಟಕ ರಾಜ್ಯದ ಸಾಹಿತ್ಯೋತ್ಸವದಲ್ಲಿ ತೀರ್ಪು ನೀಡಿ ಅನುಭವವಿರುವ ನುರಿತ ತೀರ್ಪುಗಾರರು ಈ ಬಾರಿಯ ಕೊಡಗು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ತೀರ್ಪುಗಾರಿಕೆ ನೀಡಲಿದ್ದಾರೆ. ಜಿಲ್ಲಾ ಮಟ್ಟದವರೆಗೆ ಮಾತ್ರ ಸಬ್ ಜೂನಿಯರ್ ಹಾಗೂ ಜೂನಿಯರ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

ಮೂರು ಡಿವಿಷನ್‌ಗಳ ಮಧ್ಯೆ ಪ್ರಶಸ್ತಿಗಾಗಿ ಪೈಪೋಟಿ

ಎಸ್.ಎಸ್.ಎಫ್ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವದಲ್ಲಿ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಸೆಕ್ಟರ್‌ಗಳ ಮಧ್ಯೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿವೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಪ್ರಶಸ್ತಿ ಗೆಲ್ಲುವ ಫೇವರೇಟ್ ಡಿವಿಷನ್ ಮಡಿಕೇರಿಯಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲಾಮಟ್ಟದ ಸಾಹಿತ್ಯೋತ್ಸವದ ಪ್ರಶಸ್ತಿಯನ್ನು ಮಡಿಕೇರಿ ಡಿವಿಷನ್ ಪ್ರತಿಭೆಗಳು ಗೆಲ್ಲುತ್ತಾ ಬಂದಿದೆ.

ಮಡಿಕೇರಿ ಡಿವಿಷನ್‌ನಲ್ಲಿ, ಎಮ್ಮೆಮಾಡು,ನಾಪೋಕ್ಲು, ಹಾಗೂ ಕೊಂಡAಗೇರಿ ಸೆಕ್ಟರ್ ಪ್ರತಿಭೆಗಳು ಮಡಿಕೇರಿ ಡಿವಿಷನ್ ಪ್ರತಿನಿಧಿಸಲಿದ್ದಾರೆ. ಕಡಂಗ, ಸಿದ್ದಾಪುರ,ಪಾಲಿಬೆಟ್ಟ ಸೆಕ್ಟರ್ ಪ್ರತಿಭೆಗಳು ವೀರಾಜಪೇಟೆ ಸೆಕ್ಟರ್ ಪ್ರತಿನಿಧಿಸಲಿದ್ದಾರೆ.

ನೆಲ್ಲಿಹುದಿಕೇರಿ ಸೆಕ್ಟರ್, ಕುಶಾಲನಗರ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಸೆಕ್ಟರ್ ಪ್ರತಿಭೆಗಳು ಸೋಮವಾರಪೇಟೆ ಡಿವಿಷನ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವವು ಈ ಬಾರಿ ಅತೀ ಹೆಚ್ಚು ಸ್ಪರ್ಧೆಗಳು ಇರುವುದರಿಂದ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.

ಕನ್ನಡ,ಇಂಗ್ಲಿಷ್,ಉರ್ದು,ಅರಬಿ, ಮಲಯಾಳಂ ಭಾಷಣ,ಕನ್ನಡ, ಇಂಗ್ಲಿಷ್,ಉರ್ದು ಕವನ ರಚನೆ ಹಾಗೂ ಕವಿತೆ ಬರವಣಿಗೆ, ಸೈನ್ಸ್ ಮೋಡೆಲ್, ಡಿಬೇಟ್, ಟೆಡ್ ಟಾಕ್,ಕವಾಲಿ, ಬುರ್ದಾ, ನಶೀದಾ, ಕನ್ನಡ, ಉರ್ದು, ಮಲಯಾಳಂ ಹಾಡು,ಕನ್ನಡ ಉರ್ದು,ಇಂಗ್ಲೀಷ್, ಪ್ರಬಂಧ, ಅನುವಾದ, ಕಥೆ ಹೇಳುವುದು, ಟ್ವೀಟ್, ಪೋಸ್ಟರ್ ಡಿಸೈನಿಂಗ್, ಡಿಜಿಟಲ್ ಡಿಸೈನಿಂಗ್, ಸ್ಪಾಟ್ ಮ್ಯಾಗಝಿನ್,ಕ್ವಿಝ್ ಸೇರಿ ಐದು ವಿಭಾಗಗಳಲ್ಲಿ ೧೬೦ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ಕೊಡಗು ಜಿಲ್ಲಾ ಎಸ್‌ಎಸ್‌ಎಫ್ ಸಾಹಿತ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪ್ರಡೆಯುವ ಪ್ರತಿಭೆಗಳು ಸೆಪ್ಟೆಂಬರ್ ೨೬ ,೨೭ ಹಾಗೂ ೨೮ರಂದು ದಕ್ಷಿಣ ಕನ್ನಡ ಜಿಲ್ಲೆಯ ತುರ್ಕಳಿಕೆಯಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ಅಕ್ಟೋಬರ್ ೧೧ರಿಂದ ೧೩ ರ ವರೆಗೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯಲಿರುವ ರಾಷ್ಟಿಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇಂಗ್ಲಿಷ್, ಉರ್ದು, ಅರೇಬಿಕ್ ವಿಷಯಗಳ ಸ್ಪರ್ಧೆಗಳು ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿವೆ - ಅಶ್ರಫ್