ಗೋಣಿಕೊಪ್ಪಲು. ಸೆ, ೧೧: ಅಮ್ಮತ್ತಿಯ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ತಾ. ೧೩ ರಂದು ಬೆಳಿಗ್ಗೆೆ ೧೦ ಗಂಟೆಗೆ ದೇವಾಲಯ ಆವರಣದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ. ಪ್ರಿನ್ಸ್ ಗಣಪತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಧು ಮಾದಪ್ಪನವರು ಇತ್ತೀಚೆಗೆ ನಿಧನರಾದ ಹಿನ್ನೆಲೆ ಗೌರಿ ಗಣೇಶ ವಿಸರ್ಜನೋತ್ಸವವನ್ನು ಸರಳ ರೀತಿಯಲ್ಲಿ ಆಯೋಜನೆ ಮಾಡಲಾಗುತ್ತಿದೆ.

ಇವರ ಜ್ಞಾಪಕರ್ಥಾ ಶ್ರೀ ಬಸವೇಶ್ವರ ದೇವಸ್ಥಾನ, ಸೇವಾ ಭಾರತಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ದಿ.ಮಾಚಿಮಂಡ ಮಧು ಮಾದಪ್ಪನವರ ಶ್ರದ್ಧಾಂಜಲಿ ಸಭೆಯು ಕೂಡ ನಡೆಯಲಿದೆ. ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಪ್ರತಿಷ್ಠಾಪಿಸಿ ಚೌಡೇಶ್ವರಿ ಗಣಪತಿ ಸೇವಾ ಸಮಿತಿ, ಗಜಾನನ ಸೇವಾ ಸಮಿತಿಯ ಮಂಟಪಗಳೊAದಿಗೆ ತೆರಳಿ ಮುಂಜಾನೆಯ ವೇಳೆ ಮದ್ರೀರ ಗಣೇಶ್ ಅವರ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಪಿ.ಬಿ.ಹರಿ, ಖಜಾಂಚಿ ಎಂ.ಎA. ಉತ್ತಪ್ಪ, ಜಂಟಿ ಕಾರ್ಯದರ್ಶಿ ಪಿ.ಸೋಮೇಶ್, ನಿರ್ದೇಶಕರಾದ ಅಯ್ಯಪ್ಪ, ಶ್ಯಾಮ್ ಚಿಣ್ಣಪ್ಪ, ಬೋಪಣ್ಣ, ಅರ್ಚಕರಾದ ಜಿ.ಮಹೇಶ್ ಉಪಸ್ಥಿತರಿದ್ದರು.