ಸೋಮವಾರಪೇಟೆ, ಸೆ. ೧೧: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆಯಲ್ಲಿ ಭಾಗಿಯಾಗಿದ್ದ ರೈತರು, ಸರ್ಕಾರದಿಂದ ರೈತರಿಗೆ ಸೂಕ್ತ ಬೆಳೆಹಾನಿ ಪರಿಹಾರ ಸಿಗಬೇಕಾದರೆ ಸಂಬAಧಪಟ್ಟ ಇಲಾಖೆಯಿಂದ ವೈಜ್ಞಾನಿಕ ಸರ್ವೆಯಾಗಬೇಕು. ಕಾಟಾಚಾರದ ಸರ್ವೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಿಸಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ರೈತರು ಈ ಬಗ್ಗೆ ಆಗ್ರಹಿಸಿದರು.
ಮೇ ತಿಂಗಳಿನಿAದ ನಿರಂತರವಾಗಿ ಸುರಿದ ಮಳೆಯಿಂದ ಕಾಫಿ, ಕಾಳುಮೆಣಸು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರವನ್ನು ನೀಡಲೇಬೇಕು ಎಂದು ಒತ್ತಾಯಿಸಿದ ರೈತರು, ಕೃಷಿ, ಕಂದಾಯ, ತೋಟಗಾರಿಕೆ ಹಾಗು ಕಾಫಿ ಮಂಡಳಿಯಿAದ ವೈಜ್ಞಾನಿಕ ಸರ್ವೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಟಾಚಾರದ ಸರ್ವೆಯಿಂದ ಅನೇಕ ವರ್ಷಗಳಿಂದ ರೈತರು ಸೂಕ್ತ ಪರಿಹಾರ ಸಿಗದೇ ಸಂಕಷ್ಟದಲ್ಲಿದ್ದಾರೆ. ತಾಲೂಕಿನ ಎಲ್ಲಾ ಹೋಬಳಿಯಲ್ಲೂ ಶೇ.೬೦ರಷ್ಟು ಫಸಲು ಹಾನಿಯಾಗಿದೆ ಎಂದು ಕೃಷಿಕರಾದ ಎಸ್.ಬಿ. ಭರತ್ ಕುಮಾರ್, ಜಿ.ಎಂ.ಹೂವಯ್ಯ, ಎಚ್.ಎಂ. ಜಿತೇಂದ್ರ, ಸಂದೀಪ್, ಪ್ರಸ್ಸಿ, ಲೋಕೇಶ್ ಮತ್ತಿತರರು ಆಗ್ರಹಿಸಿದರು. ಜೂನ್, ಜುಲೈ ತಿಂಗಳಿನಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ಆ ಸಂದರ್ಭದಲ್ಲೇ ಬೆಳೆಹಾನಿ ಸರ್ವೆ ಕಾರ್ಯ ನಡೆಸಬೇಕಿತ್ತು ಎಂದು ಹೇಳಿದರು.
ಬೆಳೆಹಾನಿ ಸರ್ವೆಗೆ ಕಂದಾಯ, ಕೃಷಿ, ಕಾಫಿ ಮಂಡಳಿ ಹಾಗು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಸರ್ವೆ ಕಾರ್ಯ ನಡೆಯಲಿದೆ ಎಂದು ಗ್ರಾಮ ಲೆಕ್ಕಿಗರಾದ ಚಂದನ್ ಸಭೆಗೆ ತಿಳಿಸಿದರು.
ಕಾಫಿ ಆಹಾರ ಬೆಳೆಯೆಂದು ಘೋಷಣೆಯಾಗಬೇಕಿದೆ. ಕಳೆದ ಹಲವಾರು ವರ್ಷಗಳಿಂದ ಕಾಫಿ ಕೃಷಿ ನಷ್ಟದ ಹಾದಿಯಲ್ಲಿದೆ. ಅಕಾಲಿಕ ಮಳೆ, ಅತೀವೃಷ್ಟಿಯಿಂದ ಕಾಫಿ ಫಸಲನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಕಾಫಿ ಬೆಳೆಗಾರರ ೧೦ಎಚ್ಪಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಬಾಕಿಯಿರುವ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಹೂವಯ್ಯ, ಎಚ್.ಈ.ರಮೇಶ್, ಬಿ.ಎಂ.ಮೊಗಪ್ಪ ಆಗ್ರಹಿಸಿ, ಈ ವಿಷಯದಲ್ಲಿ ಸಭೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವಂತೆ ಹೇಳಿದರು. ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ನೋಡೆಲ್ ಅಧಿಕಾರಿ ಸತೀಶ್ ಕುಮಾರ್ ಸಭೆಗೆ ತಿಳಿಸಿದರು.
ಕಾಫಿ ಬೆಳೆಗಾರರ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸೆಸ್ಕ್ ಸಿಬ್ಬಂದಿಗಳು ಮುಂದಾಗಬಾರದು ಎಂದು ಹೇಳಿದರು. ಕಳೆದ ಹಲವಾರು ವರ್ಷಗಳಿಂದ ಉಚಿತ ವಿದ್ಯುತ್ಗಾಗಿ ರೈತರಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ಹಾಗೂ ಇಲಾಖೆಯ ಆದೇಶಗಳನ್ನು ಪರಿಪಾಲಿಸುವುದು ಸೆಸ್ಕ್ ಸಿಬ್ಬಂದಿಗಳ ಕರ್ತವ್ಯವಾಗಿದೆ. ಸರ್ಕಾರದ ಮಟ್ಟದಲ್ಲಿ ಕಾಫಿ ಬೆಳೆಗಾರರು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸೆಸ್ಕ್ ಇಂಜಿನಿಯರ್ ಸುದೀಪ್ ಹೇಳಿದರು.
೨೦೦೩ರಿಂದ ಕೊಡಗಿನ ಟೆನ್ಯೂರ್ನಲ್ಲಿರುವ ಎಲ್ಲಾ ಭೂಮಿಯನ್ನು ಮಾತೃ ಇಲಾಖೆಯಾದ ಕಂದಾಯ ಇಲಾಖೆಗೆ ಸರ್ಕಾರ ಕೂಡಲೆ ಹಸ್ತಾಂತರ ಮಾಡಬೇಕು. ಈ ಬಗ್ಗೆ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಬೇಕಾಗಿದೆ ಎಂದು ಹೂವಯ್ಯ ಹೇಳಿದರು.
ಕಾಡುಕೋಣಗಳಿಂದ ಕೃಷಿ ಫಸಲನ್ನು ರಕ್ಷಿಸಿಕೊಳ್ಳಲು ಅಸಾಧ್ಯವಾಗಿದೆ. ಅರಣ್ಯ ಇಲಾಖೆಯವರು ಮೀಸಲು ಅರಣ್ಯದ ಸುತ್ತ ಸೋಲಾರ್ ಬೇಲಿಯನ್ನು ಹಾಕಬೇಕು. ಇರುವ ಆನೆ ಕಂದಕ ಮತ್ತು ಸೋಲಾರ್ ತಂತಿಬೇಲಿಯನ್ನು ದುರಸ್ತಿಗೊಳಿಸಬೇಕು ಎಂದು ಹಿರಿಕರ ವಸಂತ್ ಆಗ್ರಹಿಸಿದರು. ಅರಣ್ಯದ ಸುತ್ತ ತಂತಿಬೇಲಿಯನ್ನು ಸರಿಪಡಿಸಲು ಕೆಲಸ ಮುಂದುವರಿದಿದೆ ಎಂದು ಡಿಆರ್ಎಫ್ಒ ಮಲ್ಲೇಶ್ ತಿಳಿಸಿದರು.
ಜಲಜೀವನ್ ಮಿಷನ್ ವತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿದಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅನೇಕ ಗ್ರಾಮಸ್ಥರು ಆಗ್ರಹಿಸಿದರು. ಶುಂಠಿ ಗ್ರಾಮದಲ್ಲಿ ಜೆಜೆಎಂನಲ್ಲಿ ನಿರ್ಮಾಣವಾಗಿರುವ ನೀರಿನ ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ. ನೀರನ್ನು ಕುಡಿಯುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಕೂಡಲೇ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಭರತ್ ಕುಮಾರ್ ಆಗ್ರಹಿಸಿದರು.
ಉಪಾಧ್ಯಕ್ಷೆ ರೋಹಿಣಿ, ನವೀನ್ ಕುಮಾರ್, ನಾಗರಾಜು, ಸುಮಾ, ಮಲ್ಲಿಕಾ, ವಿಶಾಲಾಕ್ಷಿ, ಗೌರಿ, ಸಿ.ಈ. ವೆಂಕಟೇಶ್, ಗಣೇಶ್, ಪಿಡಿಒ ಲಿಖಿತಾ ಇದ್ದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ