ಪೊನ್ನಂಪೇಟೆ: ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಮಾಪಿಳ್ಳೆ ತೋಡು ಕಲ್ಲಾಯಿ ಜುಮ್ಮಾ ಮಸೀದಿ, ಪೊನ್ನಂಪೇಟೆಯ ಹನಫಿ ಜಾಮಿಯಾ ಮಸೀದಿ ಹಾಗೂ ಹಳ್ಳಿಗಟ್ಟು ಬದರ್ ಜುಮಾ ಮಸೀದಿಯ ಮುಸ್ಲಿಂ ಜಮಾಅತ್ ಒಕ್ಕೂಟ ಹಾಗೂ ಸಂಯುಕ್ತ ಮಿಲಾದ್ ಆಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧,೫೦೦ನೇ ಜನ್ಮ ದಿನಾಚರಣೆ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಿತು. ಪಟ್ಟಣದ ರಾಮಕೃಷ್ಣ ಶಾರದಾಶ್ರಮದ ಬಳಿಯಿಂದ ಆರಂಭಗೊAಡ ಮಿಲಾದ್ ಸಂದೇಶ ಜಾಥಾ, ಪೊನ್ನಂಪೇಟೆಯ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು. ನೂರಾರು ಮುಸ್ಲಿಂ ಬಾಂಧವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಬಸ್ ನಿಲ್ದಾಣದಲ್ಲಿ ನಡೆದ ಮದರಸ ವಿದ್ಯಾರ್ಥಿಗಳಿಂದ ಹಾಗೂ ಹಿರಿಯರಿಂದ ದಫ್ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ಈ ಸಂದರ್ಭ ಶಾಫಿ ಜುಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್, ಕಾರ್ಯದರ್ಶಿ ಪಿ.ಎ. ಅಜೀಜ್, ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಕಾಟಕೊಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಂ.ಎ. ಆಲಿ, ಕಾರ್ಯದರ್ಶಿ ಅನೀಫ್, ಹನಫಿ ಜುಮಾ ಮಸೀದಿ ಅಧ್ಯಕ್ಷ ಎಂ.ಇ. ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಕಲ್ಲಾಯಿ ಜುಮಾ ಮಸೀದಿ ಅಧ್ಯಕ್ಷ ಆಲೀರ ಪಿ. ಅಲೀ, ಉಪಾಧ್ಯಕ್ಷ ಆಲೀರ ಎ. ಖಾಲಿದ್, ಕಾರ್ಯದರ್ಶಿ ಆಲೀರ ಹೆಚ್. ಅಬ್ದುಲ್ ಹಮೀದ್, ಹಳ್ಳಿಗಟ್ಟು ಜುಮಾ ಮಸೀದಿ ದಾರ್ಮಿಕ ಗುರುಗಾಳಾದ ಫಾರೂಕ್ ಫೈಝೀ, ಅಬ್ದುಲ್ ರಜಾಕ್ ಸಖಾಫಿ, ಹ್ಯಾರೀಸ್ ಮದನಿ, ಜಕರಿಯಾ ಸಅದಿ, ಮಾತನಾಡಿದರು. ಸಮುದಾಯದ ಹಿರಿಯರಾದ ಆಲೀರ ಎರ್ಮು ಹಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಸದಸ್ಯ ಆಲೀರ ಅಜೀಜ್, ಐದು ಮಸೀದಿಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಇದ್ದರು. ಈ ಸಂದರ್ಭ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ೧,೫೦೦ ನೇ ಹುಟ್ಟುಹಬ್ಬ ದಿನಾಚರಣೆಯ ಕಾರ್ಯಕ್ರಮದ ಸಂಚಾಲಕ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಎ. ಜುನೈದ್ ಅವರು ಮಾತನಾಡಿ, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು, ಆಯಾ ಧರ್ಮದ ಮುಂದಿನ ಪೀಳಿಗೆಯ ಮಕ್ಕಳಿಗೆ ಸ್ನೇಹ, ಪ್ರೀತಿ, ಸೌಹಾರ್ದತೆಯಿಂದ ಒಗ್ಗೂಡಿ ಅವರವರ ಧರ್ಮದ ಆಚರಣೆಯನ್ನು ಆಚರಿಸುವಂತೆ ಪ್ರೇರೇಪಿಸಬೇಕೆಂದರು.ಕೊಡ್ಲಿಪೇಟೆ: ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ ಸುನ್ನಿ ಜುಮ್ಮಾ ಮಸ್ಜಿದ್ ವತಿಯಿಂದ ನೂರ್‌ಮಹಲ್‌ನಲ್ಲಿ ಮಿಲಾದುನ್ನೆಬಿ ಕಾರ್ಯಕ್ರಮ ನಡೆಯಿತು.

ಪ್ರವಾದಿ ಮಹಮ್ಮದ್ ಅವರ ೧೫೦೦ ನೇ ಜನ್ಮದಿನದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಹ್ಯಾಂಡ್‌ಪೋಸ್ಟ್ನ ತಜಲ್ಲಿಯಾತ್ ಮದರಸ, ಬ್ಯಾಡಗೊಟ್ಟದ ಹಿದಾಯತ್ತುಸ್ವಿಭಿಯಾನ್ ಮದÀÀರಸ, ಕಲ್ಲಾರೆಯ ಖುವ್ವತ್ತುಲ್ ಇಸ್ಲಾಂ ಮದ್ತಸಗಳ ವಿದ್ಯಾರ್ಥಿಗಳು ಪ್ರವಾದಿಯವರ ಪ್ರಕೀರ್ತನೆಯನ್ನೊಳಗೊಂಡ ವಿವಿಧ ಭಾಷೆಗಳ ಹಾಡು, ಭಾಷಣ, ಕವ್ವಾಲಿ, ಬುರ್ದಾ ಹಾಗೂ ದÀಫ್ ಪ್ರದರ್ಶನ ನೀಡಿದರು.

ಕ್ಯಾತೆ ಗ್ರಾಮದ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಗುರುಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಯೋಜನೆಗಳು ಮತ್ತು ವಸತಿ ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು,

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಮಸ್ಜಿದುನ್ನೂರ್ ಧರ್ಮಗುರುಗಳಾದ ಶಾಫಿ ಫೈಝಿ, ಪ್ರವಾದಿಯವರ ಪ್ರಕೀರ್ತನೆಗಳನ್ನು ಪ್ರಸ್ತುತಪಡಿಸುವುದು, ಅವರ ಹೆಸರಿನಲ್ಲಿ ಅನ್ನದಾನ ಸೇರಿದಂತೆ ವಿವಿಧ ದಾನ ಧರ್ಮಗಳನ್ನು ಮಾಡಿದರೆ ಪ್ರತಿಫಲ ಲಭಿಸಲಿದೆ. ಪ್ರವಾದಿಗಳ ಜೀವನ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.

ಮಸ್ಜಿದುನ್ನೂರ್ ಅಧ್ಯಕ್ಷ ಜಿ.ಎಂ. ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಮದರÀಸದÀ ಮುಖ್ಯ ಅಧ್ಯಾಪಕ ರಜಾಕ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಮದ್ರಸ ಅಧ್ಯಾಪಕರಾದ ಸಮದ್ ಫೈಝಿ, ಸಮೀರ್ ಸಖಾಫಿ ಅವರುಗಳು ಮೌಲೀದ್ ಮಜ್ಲಿಸ್ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಹೀರ್ ನಿಜಾಮಿ, ಸ್ವಾಲಿಹ್ ರಹ್ಮಾನಿ, ಹಾರಿಸ್ ಜೌಹರಿ, ಮುಸ್ತಫ ಮುಸ್ಲಿಯಾರ್, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್, ಕಾರ್ಯದರ್ಶಿ ಮುನೀರ್, ಉಪಾಧ್ಯಕ್ಷ ಸುಲೈಮಾನ್ ಸೇರಿದಂತೆ ಇತರರು ಇದ್ದರು.

ಮಡಿಕೇರಿ ರೇಂಜ್‌ನಲ್ಲಿ ೧೨ ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸಮ್ರೀನಾಳಿಗೆ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ನೀಡಲಾಯಿತು.ಈದ್ ಮಿಲಾದ್ ಹಬ್ಬವನ್ನು ಅಂಬಟ್ಟಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸೌಹಾರ್ದತೆಯ ಸಂದೇಶ ಜಾಥಾ ನಡೆಯಿತು. ನಂತರ ಸಾಂಸ್ಕೃತಿಕ ಸೀನಿಯರ್ ದಫ್ ಹಾಗೂ ಜೂನಿಯರ್ ದಫ್ ತಂಡಗಳಿAದ ದಫ್ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆದವು.ಸಿದ್ದಾಪುರ : ಮುಸ್ಲಿಂ ಧರ್ಮವು ಇಡೀ ವಿಶ್ವವನ್ನು ಅಣ್ಣ ತಮ್ಮಂದಿರAತೆ ನೋಡುವ ಹಾಗೂ ಪ್ರೀತಿಯಿಂದ ಬದುಕುತ್ತಿರುವ ಧರ್ಮವಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಮತ ವ್ಯಕ್ತಪಡಿಸಿದರು. ಬಾಡಗ ಬಾಣಂಗಲ ಗ್ರಾಮದ ಹುಂಡಿಯ ಸುನ್ನಿ ಜುಮಾ ಮಸೀದಿಯಲ್ಲಿ ನಡೆದ ಸೌಹಾರ್ದತೆ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಇಸ್ಲಾಂ ಧರ್ಮವು ಪ್ರೀತಿಯನ್ನು ಪ್ರತಿಪಾದನೆ ಮಾಡುವ ಹಾಗೂ ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳುವಂತÀಹ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡುವಂತಹ ಧರ್ಮವಾಗಿದೆ ಎಂದರು ಮೆಚ್ಚುಗೆ ವ್ಯಕ್ತಪಡಿಸಿದರು. ಹುಂಡಿ

ಸುನ್ನಿ ಜುಮಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹಾಜಿ ಮಾತನಾಡಿ, ಯಾವ ಧರ್ಮದಲ್ಲೂ ಕೋಮುವಾದ ಇರಬಾರದೆಂದು ಕಿವಿಮಾತು ಹೇಳಿದರು. ಮಾನವರೆಲ್ಲರೂ ಪರಸ್ಪರ ಸೌಹಾರ್ದತೆಯಿಂದ ಅನ್ಯೋನ್ಯವಾಗಿ ಇರಬೇಕೆಂದು ಸಲಹೆ ನೀಡಿದರು. ಮಾನವನ ರಕ್ತ ಒಂದೇ ರಕ್ತ ಆಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿಧರ್ಮದವರು ಪರಸ್ಪರ ಸಹೋದರರಂತೆ ಜೀವನ ಸಾಗಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ಶಾಫಿ ಸಹದಿ. ಗ್ರಾಮ ಪಂಚಾಯಿತಿ ಸದಸ್ಯ ನಿಯಾಜ್. ಉಪ ವಲಯ ಅರಣ್ಯ ಅಧಿಕಾರಿ ಶಶಿ. ಚೆನ್ನವೀರ ಹುಂಡಿ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಕರುಣಾಕರ. ಕಾರ್ಯದರ್ಶಿ ನಂದ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉಮೇಶ್. ವಲಯ ಕಾಂಗ್ರೆಸ್ ಅಧ್ಯಕ್ಷ ಸಜಿ ತೋಮಸ್. ಸೈಫುದ್ದೀನ್. ಇನ್ನಿತರರು ಹಾಜರಿದ್ದರು.ಸೋಮವಾರಪೇಟೆ: ಪಟ್ಟಣದ ಜಲಾಲಿಯಾ ಮಸೀದಿ ವತಿಯಿಂದ ಈದ್‌ಮಿಲಾದ್ ಅಂಗವಾಗಿ ನಗರದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು.

ಗಾಂಧಿನಗರದ ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಮದ್ರಸಾ ವಿದ್ಯಾರ್ಥಿಗಳಿಂದÀ ದಫ್ ಪ್ರದರ್ಶನ ಗಮನ ಸೆಳೆಯಿತು.

ಮುಸ್ಲಿಂ ಸಮುದಾಯದವರು ಶ್ವೇತ ವಸ್ತçಧಾರಿಗಳಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಸಾರುವ ಗೀತೆಗಳು ಮೊಳಗಿದವು. ಧರ್ಮಗುರು ಅಬ್ದುಲ್ ಹಮೀದ್ ಸಖಾಫಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜಲಾಲಿಯ ಮದರಸ ಅಧ್ಯಕ್ಷ ಮುನೀರ್ ಸಹದಿ, ಮಸೀದಿಯ ಅಧ್ಯಕ್ಷ ಕೆ.ಎ. ಆದಂ, ಉಪಾಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಆಸಿಫ್, ಮಾಜಿ ಅಧ್ಯಕ್ಷ ಅಬ್ದುಲ್ಲಾ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.

ನಂತರ ಜಲಾಲಿಯಾ ಮಸೀದಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಭಾಗಿಯಾಗಿದ್ದರು. ಈ ಸಂದರ್ಭ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳು ಸಂಸ್ಕೃತಿಯ ಉಳಿವಿನ ಪ್ರತೀಕವಾಗಿವೆ. ಎಲ್ಲರೂ ಸಂಸ್ಕೃತಿಯನ್ನು ಆಚರಿಸಿ, ಉಳಿಸಿ ಬೆಳೆಸಬೇಕೆಂದರು. ಸರ್ಕಾರವು ಎಲ್ಲಾ ವರ್ಗದ ಮಂದಿಯ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು, ಇವುಗಳನ್ನು ಬಳಸಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭ ಮಸೀದಿ ಆಡಳಿತ ಮಂಡಳಿಯಿAದ ಶಾಸಕ ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು.ವೀರಾಜಪೇಟೆ: ಈದ್ ಮಿಲಾದ್ ಹಬ್ಬವನ್ನು ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿ ಹಾಗು ದಾರುಲ್ ಇಸ್ಲಾಂ ಮದರಸದ ವತಿಯಿಂದ ಕಲ್ಲುಬಾಣೆಯಲ್ಲಿ ಆಚರಿಸಲಾಯಿತು.

ಕಲ್ಲುಬಾಣೆಯ ಬದ್ರಿಯಾ ಮಸೀದಿಯಿಂದ ಪಂಜರಪೇಟೆವರೆಗೆ ಸಂದೇಶ ಜಾಥಾ ನಡೆಯಿತು. ನಂತರ ಬದ್ರಿಯಾ ಶಾಲಾ ಸಭಾಂಗಣದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳು ಎಲ್ಲರ ದಫ್ ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಕೆ. ಆಪ್ಸಲ್ ವಹಿಸಿದ್ದರು. ಉಸ್ತಾದ್ ಅಲಿ ಬಕ್‌ಅವಿ ಉಪಸ್ಥಿತರಾಗಿದ್ದರು. ಸಂದೇಶ ಜಾಥಾದ ಸಂದರ್ಭ ದಾರಿಯುದ್ದಕ್ಕೂ ಎಲ್ಲರಿಗೂ ಸಿಹಿ ಹಾಗೂ ಪಾನೀಯ ಹಂಚಲಾಯಿತು. ಈ ಸಂದರ್ಭ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಮರವಣಿಗೆಯುದ್ದಕ್ಕೂ ಯಾವುದೇ ಪೇಪರ್, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ರಸ್ತೆಯ ಬದಿ ಹಾಕದೆ ಒಂದು ವಾಹನದಲ್ಲಿ ತುಂಬಿ ಕುಶಾಲನಗರ, ಸೆ. ೧೧: ೨೦೨೫-೨೬ರ ಸಾಲಿನ ಸೋಮವಾರಪೇಟೆ ಕ್ಷೇತ್ರ ಶಿಕ್ಷಣ ತಾಲೂಕು ಮಟ್ಟದ ೧೪ ವರ್ಷ ವಯೋಮಿತಿ ಹಾಗೂ ೧೭ ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಕಬಡ್ಡಿ ಮತ್ತು ಥ್ರೋಬಾಲ್ ಕ್ರೀಡಾಕೂಟ ಕುಶಾಲನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಿತು.

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಕುಶಾಲನಗರ, ಕೂಡಿಗೆ, ಸೋಮವಾರಪೇಟೆ, ಮಾದಾಪುರ, ಕೊಡ್ಲಿಪೇಟೆ, ಶಾಂತಳ್ಳಿ ಭಾಗದ ಏಳು ಹೋಬಳಿಗಳಿಂದ ೭ ತಂಡಗಳು ಹಾಗೂ ಪ್ರೌಢಶಾಲಾ ವಿಭಾಗದ ಕುಶಾಲನಗರ ಸೋಮವಾರಪೇಟೆ ಎ, ಬಿ ತಂಡಗಳು ಮತ್ತು ಶನಿವಾರಸಂತೆ ಕೊಡ್ಲಿಪೇಟೆ, ಸುಂಟಿಕೊಪ್ಪ ವ್ಯಾಪ್ತಿಯ ೭ ತಂಡಗಳು ಸೇರಿದಂತೆ ಒಟ್ಟು ೧೪ ತಂಡಗಳು ಪಾಲ್ಗೊಂಡಿದ್ದವು. ವಿಭಾಗ ಮಟ್ಟಕ್ಕೆ ತಂಡಗಳ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.

ಗೋಣಿಕೊಪ್ಪಲು: ಪಟ್ಟಣದ ಚೈತನ್ಯ ಸಭಾಂಗಣದಲ್ಲಿ ಜಮಾಅತೆ ಇಸ್ಲಾಂ ಹಿಂದ್ ಗೋಣಿಕೊಪ್ಪ ಶಾಖೆಯ ವತಿಯಿಂದ ಸರ್ವ ಧರ್ಮಿಯರ ವಿಶೇಷ ಮಾಹಿತಿ ಕಾರ್ಯಗಾರ ನಡೆಯಿತು.

ವಕೀಲ ರಿಯಾಜ್ ಮಹಮ್ಮದ್ ಮಾತನಾಡಿ, ನ್ಯಾಯದ ಹರಿಕಾರ ಮಹಮ್ಮದ್ ಪೈಗಂಬರ್ ಅವರು ತಮ್ಮ ಜೀವಿತ ಅವಧಿಯನ್ನು ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಇದರಿಂದ ಅವರ ಹೆಸರು ಅಜರಾಮರವಾಗಿದೆ. ಭಾರತ ದೇಶದಲ್ಲಿ ಸರ್ವ ಧರ್ಮಿಯರು ಪರಸ್ಪರ ಸೌಹಾರ್ದತೆಯಿಂದ ಬಾಳಬೇಕು. ಮತ್ತೊಬ್ಬರ ಕಷ್ಟದಲ್ಲಿ ಭಾಗಿಗಳಾಗಬೇಕು. ಇದರಿಂದ ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದರು.

ಗೋಣಿಕೊಪ್ಪ ನಗರದ ಜಮಾಹತ್‌ನ ಅಧ್ಯಕ್ಷ ತನ್ವೀರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಕೀಲ ಸಂಜೀವ್ ಮಾತನಾಡಿ, ಈ ರೀತಿಯ ಕಾರ್ಯಕ್ರಮದಿಂದ ಪರಸ್ಪರ ಪ್ರೀತಿ, ಬಾಂಧವ್ಯ ವೃದ್ಧಿಸುತ್ತದೆ ಎಂದು ಅಭಿಪ್ರಾಯಿಸಿದರು.

ಕಾವೇರಿ ಹಿಲ್ಸ್ ಬಡಾವಣೆಯ ಅಧ್ಯಕ್ಷ ಶಾಂತೆಯAಡ ಮಧು ಮಾಚಯ್ಯ, ಕಾರ್ಯಕ್ರಮದಲ್ಲಿ ಜಮಾಹತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಆರ್. ಪರಶುರಾಮ್ ಮಾತನಾಡಿದರು. ಸಂಘ ಸಂಸ್ಥೆಯ ಪ್ರಮುಖರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.