ವೀರಾಜಪೇಟೆ, ಸೆ. ೧೯: ರಾಜ್ಯ ಸರಕಾರದಿಂದ ಪ್ರಸ್ತುತ ನಡೆಸಲು ಮುಂದಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಸಂದರ್ಭ ಕೊಡವ ಜನಾಂಗದವರು ಧರ್ಮ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಕ್ಕೆ ಸಂಬAಧಿಸಿದAತೆ ಇಂದು ಅಖಿಲ ಕೊಡವ ಸಮಾಜದ ವತಿಯಿಂದ ಸಭೆಯಲ್ಲಿ ಈ ಬಗ್ಗೆ ಯಾವುದೇ ಒಮ್ಮತಕ್ಕೆ ಬಾರಲಿಲ್ಲ ಸ್ಪಷ್ಟ ನಿಲುವೂ ಅಂತಿಮವಾಗಲಿಲ್ಲ.

ಸಭೆಯಲ್ಲಿ ಪರ - ವಿರೋಧದ ನಿಲುವು ವ್ಯಕ್ತಗೊಂಡು ಗೊಂದಲವೇರ್ಪಟ್ಟಿತ್ತು. ಧರ್ಮ ವಿಚಾರದಲ್ಲಿ ಹಿಂದೂ ಎಂದೇ ಇರಬೇಕು ಎಂಬ ನಿಲುವೇ ಬಹುತೇಕರಿಂದ ವ್ಯಕ್ತಗೊಂಡಿತಲ್ಲದೆ ಇದೇ ಪ್ರಮುಖ ಎಂಬ ರೀತಿಯಲ್ಲಿ ಮುಕ್ತಾಯ ಕಂಡಿದೆ.

ಸಭೆಯಲ್ಲಿ ಕಾವೇರಿದ ಚರ್ಚೆಗಳೂ ನಡೆಯಿತಲ್ಲದೆ, ಭಾರೀ ವಿರೋಧ ಕೇಳಿಬಂತು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಕೊಡವ ಧರ್ಮ ಎಂಬ ವಿಚಾರವನ್ನು ಒಪ್ಪಲಾಗದು ಎಂಬ ನಿಲುವು ತೋರಿದರು. ಈ ಕಾರಣದಿಂದ ಸಭೆ ಯಾವುದೇ ತೀರ್ಮಾನಕ್ಕೆ ಬಾರದೆ ರದ್ದುಗೊಂಡಿತು.

ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಇಂದು ಮುಂದಿನ ಜಾತಿ ಗಣತಿ ವಿಚಾರದಲ್ಲಿ ಅನುಸರಿಸಬೇಕಾದ ನಡೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಾತಿ ಕಲಂನಲ್ಲಿ ಕೊಡವ ಮತ್ತು ಧರ್ಮದ ಜಾಗದಲ್ಲಿ ಕೊಡವ ಧರ್ಮ ಅಥವಾ ಹಿಂದೂ ಯಾವ ಧರ್ಮ ನಮೂದಿಸಬೇಕು ಎಂಬ ವಿಚಾರದಲ್ಲಿ ಗೊಂದಲ ಏರ್ಪಟ್ಟು ಅನೇಕರು ಕೊಡವ ಧರ್ಮ ಸರಿಯಲ್ಲ. ಹಿಂದೂ ಎಂದೇ ನಮೂದಿಸಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಆರಂಭಿಕ ಹಂತದಲ್ಲಿಯೇ ಕೆಲವರ ಮಾತಿಗೆ ತೀವ್ರ ಆಕ್ಷೇಪ ಗೊಂದಲ ಏರ್ಪಟ್ಟದರಿಂದ ಯಾವುದೇ ಸ್ಪಷ್ಟ ಸಮ್ಮತಕ್ಕೆ ಬಾರದೆ ಸಭೆ ಗೊಂದಲದ ಗೂಡಾಯಿತು. ಈ ಕಾರಣ ಸಮಾಜದ ಅಧ್ಯಕ್ಷರು ಸಭೆಯನ್ನು ಮುಂದೂಡಿರುವುದಾಗಿ ಘೋಷಿಸಿದ ಘಟನೆಗೆ ಸಭೆ ಸಾಕ್ಷಿಯಾಗಬೇಕಾಯಿತು.

ದ್ವಂದ್ವ ನಿಲುವು ಸಭೆಯಲ್ಲಿ ವ್ಯಕ್ತಗೊಂಡವು ಕೆಲವು ಮಂದಿ ಕೊಡವ ಧರ್ಮ ಎಂಬ ಬಗ್ಗೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದರೆ ಇದರ ವಿರುದ್ಧ ಇನ್ನು ಅನೇಕರು ಮುಗಿಬೀಳುತ್ತಿದ್ದರು. ಈ ಕಾರಣದಿಂದಾಗಿ ಸಭೆ ತೀರಾ ಗೊಂದಲಮಯ ಸನ್ನಿವೇಶಕ್ಕೆ ಒಳಪಟ್ಟಿತ್ತು.

ಪದಾಧಿಕಾರಿಗಳೇ ಕೆಲವರೂ ವಿರೋಧದ ನಿಲುವು ವ್ಯಕ್ತಪಡಿಸಿದರು. ಈ ಎಲ್ಲಾ ಕಾರಣಗಳಿಂದ ಸಭೆಯಲ್ಲಿ ಯಾವುದೇ ರೀತಿಯ ಖಚಿತ ನಿಲುವು ಕಂಡುಬಾರದೆ ಗೊಂದಲವೇ ಪ್ರಮುಖವಾದಂತೆ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಈ ಸಭೆ ಇದೇ ರೀತಿಯಲ್ಲಿ ಅಂತ್ಯಕಾಣುವAತಾಯಿತು.

ಸಭೆಯಲ್ಲಿ ಯುಕೋ ಸಂಘಟನೆಯ ಮಂಜು ಚಿಣ್ಣಪ್ಪ, ಕನೆಕ್ಟಿಂಗ್ ಕೊಡವಾಸ್‌ನ ನಿರನ್ ನಾಚಪ್ಪ, ೪೭ನೇ ಪುಟಕ್ಕೆ

ಮೊದಲ ಪುಟದಿಂದ) ಎ.ಕೆ. ಮನು ಮುತ್ತಪ್ಪ, ನೆಲ್ಲೀರ ಚಲನ್, ಮಾಚಿಮಾಡ ರವೀಂದ್ರ, ಅರುಣ್ ಭೀಮಯ್ಯ, ಚೆಕ್ಕೇರ ಮನು, ಕುಟ್ಟಂಡ ಪ್ರಿನ್ಸ್, ಮಾಚಿಮಾಡ ತಿಮ್ಮಯ್ಯ ಮತ್ತಿತರರು ಪಾಲ್ಗೊಂಡು ಅನಿಸಿಕೆ ವ್ಯಕ್ತಪಡಿಸಿದರು. ಕೊಡವ ಸಮಾಜ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರಮುಖರು, ತಕ್ಕರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಸಭೆ ರಾಜಕೀಯ ರಹಿತವಾಗಿದ್ದು ಕೆಲವು ವಿಚಾರಗಳನ್ನು ಮುಕ್ತವಾಗಿ ಚರ್ಚೆ ನಡೆಸುವ ಉದೇಶದಿಂದ ಎಲ್ಲಾ ಪ್ರಮುಖರ ಸಭೆ ಕರೆಯಲಾಗಿದೆ. ಜಾತಿ ಗಣತಿ ವಿಚಾರದಲ್ಲಿ ನಾವು ಯಾವ ರೀತಿ ಗೊಂದಲವಿಲ್ಲದೆ ಮಾಹಿತಿಗಳನ್ನು ನಮ್ಮ ಜನಾಂಗದವರಿಗೆ ನೀಡಬೇಕೆಂಬ ಅಭಿಪ್ರಾಯ ಮೂಡಿಸಲು ಈ ಸಭೆ ಕರೆಯಲಾಗಿದೆ.

ಕೊಡವರಲ್ಲಿ ಕೊಡವ ಧರ್ಮ ಎಂದು ನಮೂದಿಸಬೇಕೆ ಬೇಡವೆ ಎಂಬ ಮುಕ್ತ ಚರ್ಚೆ ಅಗಲಿ. ನಮ್ಮ ಸಮಾಜ ಕೊಡವ ಜನಾಂಗದ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಬುಡಕಟ್ಟು ಜನಾಂಗದ ಸ್ಥಾನ ಮಾನ ಕುರಿತ ಹೋರಾಟ ನಿರಂತರವಾಗಿ ಸಾಗಿದರು ಅದು ಫಲ ನೀಡಿಲ್ಲ ಎಂದರು. ನಮ್ಮ ಎಲ್ಲಾ ಪ್ರಮುಖ ವಿಚಾರದಲ್ಲಿ ಸಂಘಟಿತರಾಗಿ ಹೋರಾಟ ನಡೆಸಬೇಕೆಂದರು. ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್, ದೇಶತಕ್ಕರಾದ ಬೊಳ್ಳೇರ ವಿನಯ್, ಸಹಕಾರ್ಯದರ್ಶಿ ಮೂವೇರ ರೇಖಾ ಉಪಸ್ಥಿತರಿದ್ದರು.