ಗೋಣಿಕೊಪ್ಪ ವರದಿ, ಸೆ. ೧೯ : ಭಾರತೀಯ ಕೃಷಿ ಅನುಸಂಧಾನ ಪರಿಷತ್, ಜೆ.ಆರ್.ಎಫ್ ಮತ್ತು ಎಸ್.ಆರ್.ಎಫ್ ಪರೀಕ್ಷೆಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಪೊನ್ನಂಪೇಟೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಸೀನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

ಪ್ರಕಟವಾದ ಫಲಿತಾಂಶಗಳ ಪ್ರಕಾರ, ಕಾಲೇಜಿನ ವಿದ್ಯಾರ್ಥಿಗಳು ಅನೇಕ ಉನ್ನತ ಶ್ರೇಣಿಗಳನ್ನು ಪಡೆದುಗಮನಾರ್ಹ ಸಾಧನೆ ಮಾಡಿದ್ದಾರೆ. ಎಸ್. ಕೆ. ಚೇತನ್‌ಗೌಡ ಐ.ಸಿ.ಎ.ಆರ್ ಅರಣ್ಯ ಶಾಸ್ತç ಜೆ.ಆರ್.ಎಫ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲನೇ ಶ್ರೇಣಿ ಪಡೆದು ಅಗ್ರಸ್ಥಾನಗಳಿಸಿದ್ದಾರೆ. ಎಚ್. ಕೆ. ತನುಶ್ರೀ ಜೆ.ಆರ್.ಎಫ್ ಶ್ರೇಣಿ ೨, ಎಸ್. ಸಾಹೇಬ್‌ಗೌಡ ಜೆ.ಆರ್.ಎಫ್ ಶ್ರೇಣಿ ೩, ಕೆ. ಎಂ. ವಿವೇಕ್ ಜೆ.ಆರ್.ಎಫ್ ಶ್ರೇಣಿ ೪, ಸುಪ್ರಿಯಾ ನಾದೆಗಲಾ ಜೆ.ಆರ್.ಎಫ್ ಶ್ರೇಣಿ ೫ ಮತ್ತು ಎಸ್. ನವನೀತ್ ಜೆ.ಆರ್.ಎಫ್ ಶ್ರೇಣಿ ೬ ಉನ್ನತ ಶ್ರೇಣಿಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದೆ. ಎಂ.ಎನ್. ಜ್ಯೋತಿ ಜೆ.ಆರ್.ಎಫ್ ಶ್ರೇಣಿ ೧೧, ಜಿ. ಮೇಘನಾ ಜೆ.ಆರ್.ಎಫ್ ಶ್ರೇಣಿ ೨೯, ಕ್ಷಮಾ ಎಸ್. ಜಾಂಬಾಗಿ ಜೆ.ಆರ್.ಎಫ್ ಶ್ರೇಣಿ ೩೮, ತಂಪನ ತಂಗಮ್ಮ ಜೆ.ಆರ್.ಎಫ್ ಶ್ರೇಣ Â೪೮, ಬೃಂದಾ ಐಯ್ಯಪ್ಪ ಜೆ.ಆರ್.ಎಫ್ ಶ್ರೇಣಿ ೫೫, ವಿ. ರಕ್ಷಿತಾ ಜೆ.ಆರ್.ಎಫ್ ಶ್ರೇಣಿ ೯೯ ಸೇರಿದಂತೆ ಹಲವು ವಿದ್ಯಾರ್ಥಿಗಳು ಉತ್ತಮ ಶ್ರೇಣಿಗಳನ್ನು ಗಳಿಸಿದ್ದಾರೆ.

ಸೀನಿಯರ್ ರಿಸರ್ಚ್ ಫೆಲೋಶಿಪ್‌ನಲ್ಲಿ ೨೦೨೨ ರಲ್ಲಿ ಜೆ.ಆರ್.ಎಫ್ ಶ್ರೇಣಿ ೨ ಪಡೆದಿದ್ದ ಎಂ. ಎಸ್. ಗೀತಾ ಎಸ್.ಆರ್,ಎಫ್ ಶ್ರೇಣಿ ೨ ಪಡೆದಿದ್ದಾರೆ. ಹಿಂದಿನ ಜೆ.ಆರ್.ಎಫ್ ಶ್ರೇಣಿದಾರರಾದ ಪಿ. ವೈ. ಯತಿನ್, ಎಸ್.ಆರ್.ಎಫ್ ಶ್ರೇಣಿ ೩, ಮತ್ತು ಸೌರಭ್ ಎಸ್.ಆರ್.ಎಫ್ ಶ್ರೇಣಿ ೫ ಪಡೆದಿದ್ದಾರೆ. ಮಹಾವಿದ್ಯಾಲಯದ (ಅರಣ್ಯ) ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಸಾಧನೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.