ಮಡಿಕೇರಿ, ಸೆ. ೧೯: ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಸೇರಿಕೊಂಡಿದ್ದ ೧೦ ಸೆ.ಮೀ ಉದ್ದದ ಹುಳವನ್ನು ಶಸ್ತçಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ೬೪ ವರ್ಷದ ವ್ಯಕ್ತಿಯ ಕಣ್ಣಿನಲ್ಲಿ ಈ ವಿಚಿತ್ರ ಹುಳವೊಂದು ಸೇರಿಕೊಂಡಿದ್ದು, ತುರ್ತು ಚಿಕಿತ್ಸೆ ನೀಡದೇ ಇದ್ದಲ್ಲಿ ಕುರುಡುತನವೂ ಸಂಭವಿಸುತ್ತಿತ್ತು ಎಂಬುದಾಗಿ ತಿಳಿದುಬಂದಿದೆ.

೧ ತಿಂಗಳಿನಿAದ ಎಡ ಕಣ್ಣಿನಲ್ಲಿ ನಿರಂತರ ತುರಿಕೆಯಾಗುತ್ತಿದ್ದ ಕಾರಣ, ಚೇರಂಬಾಣೆಯ ನಿವಾಸಿ ಮಾಜಿ ಸೈನಿಕರೋರ್ವರು ಮಡಿಕೇರಿಯ ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತಾ. ೧೨ ರಂದು ಆಗಮಿಸಿದ್ದಾರೆ. ಇಲ್ಲಿನ ವೈದ್ಯರಾದ ಡಾ. ಎ.ಜಿ. ಚಿಣ್ಣಪ್ಪ ಅವರು ಪರಿಶೀಲನೆ ನಡೆಸಿದಾಗ ಕಣ್ಣಿನ ಕಂಜAಕ್ಟಿವ (ಬಿಳಿ ಭಾಗದಲ್ಲಿ) ಉಬ್ಬು ಕಾಣಿಸಿದೆ. ಸೂಕ್ಷö್ಮವಾಗಿ ಗಮನಿಸಿದಾಗ ಈ ಉಬ್ಬು ಸಂಚರಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಬಳಿಕ ಕಣ್ಣನ್ನು ಸ್ಕಾö್ಯನ್ ಮಾಡಲಾಗಿ, ಉಬ್ಬಿನೊಳಗೆ ಉದ್ದದ ಹುಳವೊಂದು ಪತ್ತೆಯಾಗಿದೆ.

ತುರ್ತು ಚಿಕಿತ್ಸೆ ಅಗತ್ಯವಿದ್ದ ಕಾರಣ ಅಂದೇ ಶಸ್ತçಚಿಕಿತ್ಸೆ ನೆರವೇರಿಸಿ ಹುಳವನ್ನು ಹೊರತೆಗೆಯಲಾಗಿದೆ. ಹುಳದ ಅಳತೆಯನ್ನು ಪಡೆಯಲಾಗಿದ್ದು ೧೦ ಸೆ.ಮೀ ನಷ್ಟು ಉದ್ದವಿದ್ದುದ್ದಾಗಿ ಪತ್ತೆಯಾಗಿದೆ. ಹಾಗೂ ಮೈಕ್ರೋ ಬಯೋಲಾಜಿಕಲ್ ಪರೀಕ್ಷೆಯನ್ನು ನಡೆಸಿ ಇದು ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಲೋವಾ-ಲೋವಾ ಎಂಬ ಹೆಸರಿನ ಹುಳ ಎಂಬುದಾಗಿ ಖಚಿತಪಡಿಸಲಾಗಿದೆ.

೧ ತಿಂಗಳಿನಿAದಲೂ ಕಣ್ಣಿನಲ್ಲಿ ತುರಿಕೆ ಇದ್ದದ್ದು, ಇನ್ನೂ ತಡವಾಗಿ ಚಿಕಿತ್ಸೆಗೆ ಆಗಮಿಸಿದ್ದಲ್ಲಿ ಕಣ್ಣು ಕುರುಡಾಗುವ ಸಾಧ್ಯತೆಗಳಿತ್ತು ಎಂಬುದಾಗಿ ಮಡಿಕೇರಿಯ ಇಕ್ಷಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಚಿಣ್ಣಪ್ಪ ಅವರು ‘ಶಕ್ತಿ‘ಗೆ ಮಾಹಿತಿ ನೀಡಿದ್ದಾರೆ.

ಜಾನುವಾರು - ನೊಣಗಳ ಮೂಲಕ ರಕ್ತ ಸೇರುವ ಹುಳ

ಲೋವಾ-ಲೋವಾ ಹೆಸರಿನ ಈ ಹುಳವು ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಆಫ್ರಿಕಾದಲ್ಲಿ ಕಂಡುಬರುವ ಈ ಹುಳ ಭಾರತದಲ್ಲಿ ಅತಿ ವಿರಳ. ಈ ಹುಳದ ಲಾರ್ವ (ಪ್ರೌಢತೆಗೆ ಬಾರದ ಹುಳ)ವನ್ನು ‘ಡೀರ್ ಫ್ಲೆöÊ’ ಹೆಸರಿನ ನೊಣವು ಹರಡುತ್ತದೆ. ಹುಳಗಳ ಲಾರ್ವವನ್ನು ಹೊತ್ತ ಈ ನೊಣಗಳು ವ್ಯಕ್ತಿಯ ದೇಹ ಸಂಪರ್ಕಿಸಿ ಕಚ್ಚಿದರೆ, ಈ ಲಾರ್ವ ರಕ್ತಕ್ಕೆ ಸೇರುತ್ತದೆ. ಇಲ್ಲಿ ಲಾರ್ವ ಅಭಿವೃದ್ಧಿಯಾಗಿ ಪ್ರೌಢತೆ ಸಾಧಿಸಿ ಕಣ್ಣಿನೊಳಗೆ ಅಥವಾ ಕೆಲ ಸಂದರ್ಭಗಳಲ್ಲಿ ಮೆದುಳಿನೊಳಗೂ ಸೇರಿಕೊಳ್ಳುತ್ತದೆ ಎಂದು ಡಾ. ಚಿಣ್ಣಪ್ಪ ಅವರು ಮಾಹಿತಿ ನೀಡಿದ್ದಾರೆ. ಈ ಹುಳ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಬಹಳ ವಿರಳ. ಕಣ್ಣಿನ ಸ್ವಚ್ಛತೆ ಕಾಪಾಡುವುದು ಅತ್ಯಗತ್ಯವಾಗಿದ್ದು, ಏನೇ ಸಮಸ್ಯೆ ಬಂದರೂ ನಿರ್ಲಕ್ಷö್ಯ ವಹಿಸದೆ ವೈದರನ್ನು ಸಂಪರ್ಕಿಸುವುದು ಅಗತ್ಯ ಎಂದು ಡಾ. ಚಿಣ್ಣಪ್ಪ ತಿಳಿಸಿದ್ದಾರೆ.