ಮಡಿಕೇರಿ, ಸೆ.೧೯: ಕನ್ನಡ ಚಲನ ಚಿತ್ರರಂಗದ ಹಿರಿಯ ನಟ, ಡಾ. ವಿಷ್ಣುವರ್ಧನ್ ಅವರ ಹುಟ್ಟು ಹಬ್ಬಾಚರಣೆ ತಾ.೨೦ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಫೀಕ್ ದಾದ; ಹಿರಿಯ ನಟ ಡಾ. ವಿಷ್ಣುವಧÀðನ್ ಅವರ ೭೫ನೇ ಹುಟ್ಟು ಹಬ್ಬವನ್ನು ಈ ಬಾರಿ ನಗರದ ಅಬ್ದುಲ್ ಕಲಾಂ ಬಡಾವಣೆಯಲ್ಲಿರುವ ಜನ ವಿಕಾಸ್ ಸೇವಾ ಟ್ರಸ್ಟ್ನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ ೨ಗಂಟೆಗೆ ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗುವದು. ಅತಿಥಿಗಳಾಗಿ ಪತ್ರಕರ್ತರಾದ ಉಳ್ಳಿಯಡ ಪೂವಯ್ಯ, ಡಾಟಿ ಪೂವಯ್ಯ, ಸಂಘದ ಗೌರವ ಅಧ್ಯಕ್ಷ ಪಿ.ಜಿ.ಮಂಜುನಾಥ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ೫ ಸ್ಟಾರ್ ಸಿಂರ್ಸ್ ತಂಡದಿAದ ರಸಮಂಜರಿಯೊAದಿಗೆ ಆಶ್ರಮದಲ್ಲಿರುವ ಬಡ ವೃದ್ಧರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮಾತನಾಡಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಹಾಗೂ ಪುಣ್ಯ ತಿಥಿ ಆಚರಣೆ ಸಂಬAಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಂದೊAದಾಗಿ ಆಚರಣೆ ಮಾಡಲಾಗುವದು. ಬೆಂಗಳೂರಿನಲ್ಲಿ ವಿಷ್ಣು ಅವರ ಸಮಾಧಿಯನ್ನು ಕಿಡಿಗೇಡಿಗಳು ರಾತೋ ರಾತ್ರಿ ಒಡೆದುಹಾಕಿದ್ದು, ಅವರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಿತಿ ಖಜಾಂಚಿ ಪಿ.ಐ. ಅನ್ಸಾರ್, ಸದಸ್ಯ ರಮೇಶ್ ರೈ ಇದ್ದರು.