ಮಡಿಕೇರಿ,ಸೆ.೧೯: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ೯೫ನೇ ವರ್ಷದ ದಸರಾ ಉತ್ಸವ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಪೂಜೆ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ದಸರಾ ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್, ದಸರಾ ಉತ್ಸವಕ್ಕೆ ೯೫ ವರ್ಷಗಳಾಗಿದ್ದು, ಮುಂದಿನ ಶತಮಾನೋತ್ಸವ ಆಚರಣೆವರೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು.

ತಾ. ೨೨ರಂದು ದೇವಾಲಯದಲ್ಲಿ ನವರಾತ್ರಿ ಪೂಜಾ ಕಾರ್ಯಗಳು ನಡೆಯಲಿವೆ. ಅಂದಿನಿAದ ಒಂಭತ್ತು ದಿನಗಳ ಕಾಲ ಕರಗ ನಗರ ಪ್ರದಕ್ಷಿಣೆ ನಡೆಯಲಿದೆ. ಇದರೊಂದಿಗೆ ಹನ್ನೊಂದು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರದೊAದಿಗೆ ವಿಶೇಷ ಪೂಜೆ ಸಲ್ಲಿಸಲಾಗುವದು.

ತಾ.೨೨ರಂದು ಬೆಳ್ಳಿಯ ಅಲಂಕಾರ, ೨೩ರಂದು ಪಂಚ ಪುಷ್ಪ, ೨೪ರಂದು ವೀಳ್ಯದೆಲೆ, ೨೫ರಂದು ಕೊಲ್ಲೂರು ಮೂಕಾಂಬಿಕೆ, ೨೬ರಂದು ಮಹಾಲಕ್ಷಿö್ಮ, ೨೭ರಂದು ಚಾಮುಂಡೇಶ್ವರಿ, ೨೮ರಂದು ಗುಲಾಬಿ ಹೂವು, ೨೯ರಂದು ಶಾರದಾದೇವಿ, ೩೦ರಂದು ಗಾಯತ್ರಿ ದೇವಿ, ಅ.೧ರಂದು ಬಳೆ ಅಲಂಕಾರ, ೨ರಂದು ನವಿಲಿನ ಅಲಂಕಾರ ಮಾಡಲಾಗುವದೆಂದು ತಿಳಿಸಿದರು.

ಇದಲ್ಲದೆ ತಾ.೨೯ರಂದು ದೇಗುಲದಲ್ಲಿ ರಂಗಪೂಜೆ, ಅ.೨ರಂದು ದೇವಿಗೆ ವಿಶೇಷ ಅಲಂಕಾರ ಪೂಜೆ ಕೂಡ ಇರಲಿದೆ. ಭಕ್ತಾದಿಗಳು ಕರಗ ಸೇವೆ ಮಾಡಿಸಲು ಇಚ್ಛಿಸಿದಲ್ಲಿ ದೇವಾಲಯದ ಕೌಂಟರ್‌ನಲ್ಲಿ ಮಾಹಿತಿ ಪಡೆದುಕೊಂಡು ಸೇವೆ ಮಾಡಿಸಬಹುದಾಗಿದೆ ಎಂದು ರಂಜಿತ್ ಹೇಳಿದರು. ದಸರಾ ಉತ್ಸವದ ಬಳಿಕ ದೇವಾಲಯದ ಜೀರ್ಣೋದ್ದಾರ ಕಾರ್ಯ ಹಾಗೂ ಕುಂಬಾಭಿಷೇಕ ನಡೆಯಲಿದೆ ಎಂದು ತಿಳಿಸಿದರು. ವರ್ಷಂಪ್ರತಿಯAತೆ ಸಾರ್ವಜನಿಕರಿಗೆ ದಸರಾ ಉತ್ಸವ ಮಂಟಪ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ಕೂಡ ಆರು ಪ್ರದರ್ಶನ ಮಾಡಲಾಗುವದೆಂದು ಹೇಳಿದರು.

ಗೌರವ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ; ದಸರಾ ಉತ್ಸವಕ್ಕೆ ೯೫ ವರ್ಷವಾಗಿದ್ದು, ಮುಂದಿನ ಐದು ವರ್ಷಗಳ ಕಾಲ ವಿಜೃಂಭಣೆಯಿAದ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ತಾ.೨೨ರಂದು ಕರಗ ಹೊರಡುವದರೊಂದಿಗೆ ಈ ಬಾರಿಯ ಉತ್ಸವಕ್ಕೆ ಚಾಲನೆ ನೀಡಲಾಗುವದೆಂದು ಹೇಳಿದರು.

ಕಾರ್ಯದರ್ಶಿ ಸತೀಶ್ ಮಾತನಾಡಿ ಈ ಬಾರಿ ದಸರಾ ಉತ್ಸವ ಮಂಟಪದಲ್ಲಿ ಅಂಧಕಾಸುರನ ವಧೆಯ ಪೌರಾಣಿಕ ಕಥಾ ಸಾರಾಂಶವನ್ನು ಅಳವಡಿಸಿಕೊಳ್ಳಲಾಗಿದೆ. ಮಂಟಪಕ್ಕೆ ರೂ.೧೮ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದರು .ಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜು, ದೇವಾಲಯದ ಟ್ರಸ್ಟಿ ಸುಬ್ರಮಣಿ ಇದ್ದರು.