ನಾಪೋಕ್ಲು, ಸೆ. ೧೯: ನಾಲ್ಕುನಾಡ್ ವ್ಯಾಪ್ತಿಯ ನಾಪೋಕ್ಲು ಮುಸ್ಲಿಂ ಜಮಾಅತ್ ಅಧೀನದಲ್ಲಿ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ರ‍್ಯಾಲಿಯಲ್ಲಿ ಕುಂಜಿಲ ಯುವಕರ ದಫ್ ತಂಡವು ಅತ್ಯುತ್ತಮ ದಫ್ ಪ್ರದರ್ಶನ ನೀಡಿ ತಂಡವು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಈ ಬಹುಮಾನವನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಂದ ಪಡೆದುಕೊಂಡರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ತಂಡದ ತರಬೇತುದಾರ ಪಯ್ಯಡಿ ರಶೀದ್ ಉಸ್ತಾದ್, ನಾಯಕ ರಝಕ್ ಅಲಿ (ಜಜ್ಜು) ಮತ್ತು ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಸೌಕತ್ ಅಲಿ ಮಕ್ಕಿ, ಖಲೀಲ್ ಮತ್ತು ಅಝರುದ್ದೀನ್ ಉಪಸ್ಥಿತರಿದ್ದರು.