ವೀರಾಜಪೇಟೆ, ಸೆ. ೧೯: ವೀರಾಜ ಪೇಟೆ ತಾಲೂಕು ಪಾಲಿಬೆಟ್ಟ ಗ್ರಾಮದಲ್ಲಿ ಶಾಸಕರ ಅನುದಾನ ರೂ. ೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಲೂರ್ಡ್ಸ್ ಶಾಲೆಗೆ ತೆರಳುವ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.

ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಭಾಗವಹಿಸಿದ ಶಾಸಕ ಪೊನ್ನಣ್ಣ, ಮಾಲ್ದಾರೆ ಗ್ರಾಮದಲ್ಲಿನ ರೂ. ೮ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.

ಬಳಿಕ ಶಾಸಕರು, ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷ ಕಾಳಪ್ಪ, ಪಂಚಾಯಿತಿ ಸದಸ್ಯರು ನಜರ್, ಕೆ.ಡಿ.ಪಿ. ಸದಸ್ಯರು ಗಣೇಶ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಮಾಲ್ದಾರೆ ಪಂಚಾಯಿತಿ ಸದಸ್ಯರು ಲಲಿತಾ, ಪಕ್ಷದ ಪ್ರಮುಖರು ಮಿಲನ್ ಸುಬ್ಬಯ್ಯ, ಕಾಲೇಜು ಪ್ರಾಂಶುಪಾಲರಾದ ಶೈನಿ, ದರ್ಶನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.