*ಗೋಣಿಕೊಪ್ಪ, ಸೆ. ೧೯: ಗೋಣಿಕೊಪ್ಪ ಪೊಲೀಸ್ ಠಾಣೆ ಸಿಬ್ಬಂದಿಗಳು, ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ವಿದ್ಯಾರ್ಥಿಗಳು ನಶೆ ಮುಕ್ತ ಭಾರತ ಜಾಗೃತಿ ಜಾಥಾವನ್ನು ನಡೆಸಿದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕರ ಕಚೇರಿಯಿಂದ ಪಟ್ಟಣದ ಮಾರ್ಕೆಟ್ ಹಿಂಭಾಗದ ಮೂಲಕ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ಜಾಗೃತಿ ಅಭಿಯಾನ ನಡೆಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದರು. ಮಾದಕ ದ್ರವ್ಯದ ಬಳಕೆಯಿಂದ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವ ಜನರ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟು ಸರ್ಕಾರ ನಶೆ ಮುಕ್ತ ಭಾರತ ಅಭಿಯಾನವನ್ನು ನಡೆಸುತ್ತಿದೆ ಎಂದು ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುದೋಳ್ ಮಾಹಿತಿ ನೀಡಿದರು.
ಠಾಣಾಧಿಕಾರಿ ಪ್ರದೀಪ್ ಕುಮಾರ್ ಬಿ.ಕೆ, ಎ.ಎಸ್.ಐ. ಗಳಾದ ದೇವರಾಜು, ವೆಂಕಟೇಶ್, ಸಿಬ್ಬಂದಿಗಳಾದ ತನುಕುಮಾರ್, ಕಾವೇರಮ್ಮ, ಬಿ.ಎಂ. ರಮೇಶ್, ಸಜನ್, ಹೇಮಲತ, ಪುನೀತ್ ಹಾಗೂ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಎಂ.ಎ. ಕುಶಾಲಪ್ಪ, ಪೂಜಾ ಶರಣು ಸೇರಿದಂತೆ, ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಇದ್ದರು.