ಮಡಿಕೇರಿ, ಸೆ. ೧೯: ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗೌಳಿಬೀದಿ ಅಂಗನವಾಡಿ, ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆ ಹಾಗೂ ಸ್ಪಂದನಾ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮವು ರೋಟರಿ ವುಡ್ಸ್ನ ಅಧ್ಯಕ್ಷ ಕಿರಣ್ ಕುಂದರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸ್ಪಂದನಾ ಮಹಿಳಾ ಸಂಘದ ಅಧ್ಯಕ್ಷೆ ಕಟ್ರತನ ಲಲಿತಾ ಅಯ್ಯಣ್ಣ ಪ್ರಾಸ್ತಾವಿಕ ನುಡಿಯಾಡಿ, ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿದರಲ್ಲದೆ, ನಮ್ಮ ಆಹಾರ ಪದ್ಧತಿಯಲ್ಲಿ ಸುಧಾರಣೆ ಮಾಡಿಕೊಳ್ಳುವುದು ಬಹಳ ಅಗತ್ಯವಾಗಿದೆ ಎಂದರು.
ರೋಟರಿ ವುಡ್ಸ್ನ ವಸಂತ ಕುಮಾರ್ ಮಾತನಾಡಿ, ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಪ್ರತಿವರ್ಷ ಬಿಡದೆ ಆಚರಿಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರಲ್ಲದೆ ಮುಂದಿನ ವರ್ಷ ಇನ್ನೂ ಉತ್ತಮವಾಗಿ ಆಚರಿಸುವಂತಾಗಬೇಕೆAದರು.
ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಮಾತನಾಡಿ, ಮಹಿಳೆಯರು ಇಷ್ಟೊಂದು ಆಸಕ್ತಿಯಿಂದ ಭಾಗವಹಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ, ನಮ್ಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯವೆಂದರು.
ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಪ್ರತಿಯೊಬ್ಬರು ಮಾಡಿಕೊಂಡು ಬಂದಿರುವ ವಿವಿಧ ಬಗೆಯ ಆಹಾರ ಪದಾರ್ಥಗಳು ಬಹಳ ಉತ್ತಮವಾಗಿದ್ದು, ಮಹಿಳೆಯರ ಸೃಜನಶೀಲತೆಯನ್ನು ಪ್ರಶಂಶಿಸಿ ಇಂತಹ ಆಹಾರ ಪದ್ಧತಿಯನ್ನು ಪ್ರತಿಯೊಬ್ಬರು ಮನೆಯಲ್ಲಿ ಅಳವಡಿಸಿ ಕೊಳ್ಳಬೇಕೆಂದರು.
ಸಾಮೂಹಿಕ ಗಣಪತಿ ಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸ್ಪಂದನಾ ಮಹಿಳಾ ಸಂಘದ ಖಜಾಂಚಿ ಗೀತಾ ಸ್ವಾಗತ, ಕಾರ್ಯದರ್ಶಿ ವಿಜಯಲಕ್ಷ್ಮಿ ನಿರೂಪಣೆ ಹಾಗೂ ಸದಸ್ಯೆ ಜಯಂತಿ ವಂದನಾರ್ಪಣೆ ಮಾಡಿದರು. ಪೌಷ್ಟಿಕ ಆಹಾರ ತಯಾರಿಸಿಕೊಂಡು ಬಂದಿದ್ದ ಪ್ರತಿಯೊಬ್ಬರಿಗೂ ರೋಟರಿ ವುಡ್ಸ್ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.