ಮಡಿಕೇರಿ, ಸೆ. ೧೯: ಪೋಷಣ್ ಮಾಸಾಚರಣೆ ಅಂಗವಾಗಿ ಹೊಸ್ಕೇರಿ ಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ತಾಯಿ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ, ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಸನ್ನ ಕಾರ್ಯಕ್ರಮ ಕೃಷಿ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಮುಕ್ಕಾಟಿ ಸದಾ ಡೆನಿಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರ ಮೇಲ್ವಿಚಾರಣೆಯಲ್ಲಿ ನೆರವೇರಿತು. ಪಾಲ್ಗೊಂಡ ಮಕ್ಕಳ ಪೋಷಕರು, ಗ್ರಾಮಸ್ಥರು, ಸ್ತಿçÃಶಕ್ತಿ ಗುಂಪಿನವರು, ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಸೇರಿ ತಾಯಿ ಹೆಸರಿನಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ನಂತರ ಮಾತನಾಡಿದ ಮೇಲ್ವಿಚಾರಕರು, ಕುಟುಂಬದವರ ಆರೋಗ್ಯ ವೃದ್ಧಿಗಾಗಿ ತಮ್ಮ ಮನೆಗಳಲ್ಲಿ ಆರೋಗ್ಯಕರವಾದಂತಹ ಹಣ್ಣಿನ, ತರಕಾರಿಗಳ ಗಿಡಗಳನ್ನು ನೆಟ್ಟು ಪೋಷಿಸಿ. ಬಾಲ್ಯದಲ್ಲಿಯೇ ಮಕ್ಕಳಿಗೆ ರಾಸಾಯನಿಕ ಮುಕ್ತ ಆಹಾರವನ್ನು ಬೆಳೆಸುವ ಅರಿವನ್ನು ಮೂಡಿಸಲು ಪ್ರತಿಯೊಬ್ಬರು ಮುಂದಾಗಬೇಕು. ಪೌಷ್ಟಿಕ ಕೈತೋಟಗಳನ್ನು ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಉತ್ತಮ ಆಯೋಜನೆಯನ್ನು ಮಾಡಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ಲತಾ ಮತ್ತು ಸಹಾಯಕಿ ಸುಮಿತ್ರ ನಡೆಸಿದರು.