ಗೋಣಿಕೊಪ್ಪಲು, ಸೆ. ೨೦: ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ೪೭ನೇ ವರ್ಷದ ದಸರಾ ಜನೋತ್ಸವ-೨೦೨೫ರ ಕಾರ್ಯಕ್ರಮದ ಪಟ್ಟಿಯನ್ನು ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅವರು ಬಿಡುಗಡೆಗೊಳಿಸಿದರು.
ಶ್ರೀ ಕಾವೇರಿ ದಸರಾ ಸಮಿತಿಯ ಮಾಧ್ಯಮ ಸಂಚಾಲಕರಾದ ಹಿರಿಯ ಪತ್ರಕರ್ತ ಪಿ.ಕೆ.ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕರಾದ ಚಂದನ್ ಕಾಮತ್ ಕಾರ್ಯಕ್ರಮದ ವಿವರಣೆ ನೀಡಿದರು.
೧೧ ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನಾಡಿನ ಜನತೆ ಆಗಮಿಸುವಂತಾಗಬೇಕೆAದು ಕಾವೇರಿ ದಸರಾ ಸಮಿತಿಯ ಅಧ್ಯಕ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಎಂ. ಮಂಜುಳ ಸಮಿತಿಯ ಗೌರವ ಸಲಹೆಗಾರರಾದ ಬಿ.ಎನ್.ಪ್ರಕಾಶ್ ಉಪಸ್ಥಿತರಿದ್ದರು.
ಕಾರ್ಯಕ್ರಮ ವಿವರ
ತಾ.೨೨ರಂದು ನಗರದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಬೆಳಿಗ್ಗೆ ೭ ಗಂಟೆಗೆ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ೯.೩೦ ಗಂಟೆಗೆ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿ ಸಾಂಸ್ಕೃತಿಕ ರೋಡ್‌ಶೋ ನಡೆಯಲಿದೆ.
ಸಂಜೆ ೬ ಗಂಟೆಯಿAದ ೭.೩೦ರವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಉದ್ಘಾಟನಾ ನೃತ್ಯಾಭಿನಯ ನಡೆಯಲಿದ್ದು ಗೋಣಿಕೊಪ್ಪಲುವಿನ ಸುವೃತ ನಾಟ್ಯಾಲಯದಿಂದ ‘ಗಜವದನ ಹೇರಂಬ’ ರಂಗಗೀತೆಗೆ ನೃತ್ಯಾಭಿನಯ ನಡೆಯಲಿದೆ. ೭.೩೦ ಗಂಟೆಗೆ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ೮.೩೦ ಗಂಟೆಗೆ ಗೋಣಿಕೊಪ್ಪಲುವಿನ ಎ ರಿಪ್ಲೆಕ್ಷನ್ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಫಿಟ್ನೆಸ್ ಇವರಿಂದ ‘ಸಪ್ತಸ್ವರ ತಕಧಿಮಿತ ವಿಭಿನ್ನ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.
ತಾ.೨೩ರಂದು ಬೆಳಿಗ್ಗೆ ೯ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಮಕ್ಕಳ ದಸರಾ ಅಂಗವಾಗಿ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿದೆ. ಸಂಜೆ ೬ ಗಂಟೆಗೆ ಪೊನ್ನಂಪೇಟೆಯ ಜೈಭೀಮ್ ಗಡಿನಾಡು ಜನಪದ ಕಲಾ ತಂಡದಿAದ ಸುಗಮ ಸಂಗೀತ ಚಿತ್ರಗೀತೆ ನಡೆಯಲಿದೆ. ೭.೩೦ ಗಂಟೆಗೆ ಗೋಣಿಕೊಪ್ಪಲುವಿನ ಭೂಮಿಕ ಕಲಾ ತಂಡದಿAದ ಶಾಸ್ತಿçÃಯ ಸಂಗೀತ, ಭಾವಗೀತೆ, ದಾಸರ ಪದ ಹಾಗೂ ಜಾನಪದ ಗೀತೆಗಳು ಮೂಡಿ ಬರಲಿವೆ. ೮.೩೦ ಗಂಟೆಗೆ ಶಾಂತಳ್ಳಿಯ ಗಣೇಶ್ ಭಟ್ ಇವರಿಂದ ಸುಗಮ ಸಂಗೀತ ಹಾಗೂ ಮಂಗಳೂರಿನ ಕಲಾ ಸಂಗಮ ತಂಡದಿAದ ಶಿವಧೂತ ಗುಳಿಗ ಕನ್ನಡ ನಾಟಕ ನಡೆಯಲಿದೆ.
ತಾ.೨೪ರಂದು ಸಂಜೆ ೬ ಗಂಟೆಗೆ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದಿಂದ ಭರತನಾಟ್ಯ, ಕುಚಿಪುಡಿ ಹಾಗೂ ಮೋಹಿಯಾಟ್ಟಮ್ ನಡೆಯಲಿದೆ. ೭.೩೦ ಗಂಟೆಗೆ ಗೋಣಿಕೊಪ್ಪ ಪುಟಾಣಿಗಳಿಂದ ಗುಜರಾತಿ ಜನಪದ ನೃತ್ಯ, ಗರ್ಬ ಮತ್ತು ದಾಂಡಿಯಾ, ಗೋಣಿಕೊಪ್ಪಲುವಿನ ಶ್ರೀ ಲಕ್ಷಿö್ಮ ಮಹಿಳಾ ವಿಭಾಗದಿಂದ ತಿರುವಾದಿರ ನೃತ್ಯ ನಡೆಯಲಿದೆ. ೮.೩೦ ಗಂಟೆಗೆ ಬೆಂಗಳೂರಿನ ದಕ್ಷತರಂಗ ತಂಡದಿAದ ಜನಪದ ಕಲರವ ನಡೆಯಲಿದ್ದು ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ ಕುಣಿತ, ಪೂಜಾ ಕುಣಿತ, ನಂದಿಕೋಲು, ಹಾಗೂ ಸೋಮಕುಣಿತ ನಡೆಯಲಿದೆ. ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕಲ್ ನೈಟ್ ನಡೆಯಲಿದೆ.
ತಾ.೨೫ರಂದು ಸಂಜೆ ೬ ಗಂಟೆಗೆ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಶಾಲೆ ಇವರಿಂದ ಭರತನಾಟ್ಯ, ಜನಪದ ಹಾಗೂ ಆಧುನಿಕ ನೃತ್ಯ ಪ್ರದರ್ಶನ ನಡೆಯಲಿದೆ. ೭.೩೦ ಗಂಟೆಗೆ ಸಾರಂಗ್ ಕಲಾ ತಂಡದಿAದ ಮ್ಯಾಜಿಕ್ ಡ್ಯಾನ್ಸ್, ಬಾಲ್ ಡ್ಯಾನ್ಸ್, ಏರೋಬೇಟಿಕ್ ಡ್ಯಾನ್ಸ್ ಆಯೋಜನೆಗೊಂಡಿದೆ. ರಾತ್ರಿ ೮.೩೦ ಗಂಟೆಗೆ ಖ್ಯಾತ ಹಿನ್ನಲೆ ಗಾಯಕರಾದ ಅನುರಾಧ ಭಟ್, ರಿಯಾಲಿಟಿ ಶೋ ಖ್ಯಾತಿಯ ದಿವ್ಯಾರಾಮಚಂದ್ರ, ಖಾಸಿಮ್ ಆಲಿ, ವಿಶಾಕ್ ಇವರಿಂದ ಮೆಗಾ ಮ್ಯೂಸಿಕಲ್ ನೈಟ್ಸ್ ನೃತ್ಯ ರಸ ಸಂಜೆ ನಡೆಯಲಿದೆ.
ತಾ.೨೬ರ ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಕವಿಗೋಷ್ಠಿ ನಡೆಯಲಿದೆ. ಸಂಜೆ ೬ ಗಂಟೆಗೆ ತಿತಿಮತಿಯ ಯಾಹವಿ ಡ್ಯಾನ್ಸ್ ಆಕಾಡೆಮಿಯಿಂದ ಶಾಸ್ತಿçÃಯ ಮತ್ತು ಪಾಶ್ಚಾತ್ಯ ನೃತ್ಯ, ನಾಪೋಕ್ಲುವಿನ ರವಿ ಓಂಕಾರ್ ತಂಡದಿAದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ೭.೩೦ ಗಂಟೆಗೆ ಸಭಾ ಕಾರ್ಯಕ್ರಮವು ಜರುಗಲಿದ್ದು ಸಂಜೆ ೮.೩೦ ಗಂಟೆಗೆ ಮೈಸೂರಿನ ಯುಎಸ್‌ಎ ಡ್ಯಾನ್ಸ್ ಆಕಾಡೆಮಿ ಇವರಿಂದ ವಿವಿಧ ಶೈಲಿಯ ನೃತ್ಯ ಕಾರ್ಯಕ್ರಮ ಹಾಗೂ ಕೊಡಗು ಪೊಲೀಸರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತಾ.೨೭ರಂದು ಬೆಳಿಗ್ಗೆ ೯.೩೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಮಹಿಳಾ ದಸರಾ ನಡೆಯಲಿದೆ. ಸಾಮೂಹಿಕ ನೃತ್ಯ, ಛಧ್ಮವೇಶ,ಸಾಮೂಹಿಕ ಗೀತೆ, ಹೋರಾಂಗಣ ಕ್ರೀಡೆಗಳು ಹಾಗೂ ಇತರ ಕಾರ್ಯಕ್ರಮಗಳು ಮೂಡಿ ಬರಲಿವೆ. ಸಂಜೆ ೬ ಗಂಟೆಗೆ ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿAದ ಶಾಸ್ತಿçÃಯ ಮತ್ತು ಜನಪದ ನೃತ್ಯ ನಡೆಯಲಿದೆ.
ದಸರಾ ಮೈದಾನದಲ್ಲಿ ಶಿವಾಜಿ ಯುವ ಸೇನೆ ವತಿಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ೨ ದಿನಗಳ ಮ್ಯಾಟ್ ಕಬಡ್ಡಿ ಪಂದ್ಯಾವಳಿಯು ಉದ್ಘಾಟನೆಗೊಳ್ಳಲಿದೆ.
ಸಂಜೆ ೭.೩೦ ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದೆ. ೮.೩೦ ಗಂಟೆಗೆ ಗಿಚ್ಚಿಗಿಲಿಗಿಲಿ ಖ್ಯಾತಿಯ ರಾಘವೇಂದ್ರ ಆಲಿಯಾಸ್ ರಾಗಿಣಿ, ಚಿಲ್ಲರ್ ಮಂಜು, ಹುಲಿ ಕಾರ್ತಿಕ್ ಮತ್ತು ಶಿವು ಇವರಿಂದ ರಿಯಾಲಿಟಿ ಶೋ ಹಾಸ್ಯೋತ್ಸವ ಹಾಗೂ ಸಂಗೀತ ಸಂಜೆ ಏರ್ಪಡಿಸಲಾಗಿದೆ.
ತಾ.೨೮ರಂದು ಯುವ ದಸರಾ ವತಿಯಿಂದ ದಸರಾ ಮೈದಾನದಲ್ಲಿ ಬೆಳಿಗ್ಗೆ ೭.೩೦ ಗಂಟೆಗೆ ಸೈಕಲ್ ರೇಸ್, ಮಧ್ಯಾಹ್ನ ೧೨ ಗಂಟೆಗೆ ಬಸ್ ನಿಲ್ದಾಣದಲ್ಲಿ ಬೈಕ್ ಸ್ಟಂಟ್, ಬೆಳಿಗ್ಗೆ ೧೦ ಗಂಟೆಗೆ ಜಿಎಂಪಿ ಶಾಲಾ ಆವರಣದಲ್ಲಿ ರೆಡ್‌ಕ್ರಾಸ್ ಪೊನ್ನಂಪೇಟೆ ತಾಲೂಕು ಘಟಕ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜನೆಗೊಂಡಿದೆ.
ಸಂಜೆ ೬ ಗಂಟೆಗೆ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ,ಶಿವಾಜಿ ಯುವ ಸೇನೆಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ, ೭.೩೦ ಗಂಟೆಗೆ ಸಭಾ ಕಾರ್ಯಕ್ರಮ, ಸಂಜೆ ೮.೩೦ ಗಂಟೆಗೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಜರುಗಲಿದೆ.
ತಾ.೨೯ರಂದು ಸಂಜೆ ೬ ಗಂಟೆಯಿAದ ಗೋಣಿಕೊಪ್ಪಲುವಿನ ಸೈಕ್ಲೋನ್ ಡ್ಯಾನ್ಸ್ ಅಕಾಡೆಮಿ ಹಾಗೂ ಸುವೃತ ನಾಟ್ಯಾಲಯ ಇವರಿಂದ ನೃತ್ಯ ಕಾರ್ಯಕ್ರಮ, ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ತಾ.೩೦ರಂದು ಸಂಜೆ ೬ ಗಂಟೆಗೆ ನಾಗರ ಹೊಳೆಯ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ನಾಣಚ್ಚಿ ಇವರಿಂದ ಜೇನುಕುರುಬರ ಹಾಡು ಹಾಗೂ ನೃತ್ಯ ಮೂಡಿಬರಲಿದೆ. ೭.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ೮.೩೦ ಗಂಟೆಗೆ ಸೋಜುಗಾದ ಸೂಜು ಮಲ್ಲಿಗೆ ಹಾಡಿನ ಖ್ಯಾತಿಯ ಸ್ಯಾಂಡಲ್‌ವುಡ್ ಹಿನ್ನಲೆ ಗಾಯಕಿ ಅನನ್ಯಭಟ್ ಇವರ ತಂಡದಿAದ ಮ್ಯೂಸಿಕಲ್ ಧಮಾಕಾ ಮೂಡಿಬರಲಿದೆ.
ಅ.೧ ಸಂಜೆ ೬ ಗಂಟೆಗೆ ಕೊಡಗಿನ ಖ್ಯಾತ ಗಾಯಕ ಚೆಕ್ಕೆರ ಪಂಚಮ್ ತ್ಯಾಗ್‌ರಾಜ್ ಅವರಿಂದ ಕೊಡವ ಹಾಗೂ ಶಾಸ್ತಿçÃಯ ಗಾಯನ, ಕುಶಾಲನಗರದ ಎ ಕ್ರೀಯೆಟಿವ್ ಡ್ಯಾನ್ಸ್ ಆಕಾಡೆಮಿಯಿಂದ ನೃತ್ಯ ಕಾರ್ಯಕ್ರಮ, ಸಂಜೆ ೭.೩೦ ಗಂಟೆಗೆ ಸಭಾ ಕಾರ್ಯಕ್ರಮ ರಾತ್ರಿ ೮.೩೦ ಗಂಟೆಗೆ ೨೫ನೇ ವರ್ಷದ ಅಂಗವಾಗಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ೨೫ನೇ ವರ್ಷಾಚರಣೆ ಅಂಗವಾಗಿ ಮಧುರಾ ಇವೆಂಟ್ಸ್ ಬೆಂಗಳೂರು ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
ಅ.೨ರ ಮಧ್ಯಾಹ್ನ ೨ ಗಂಟೆಯಿAದ ಗೋಣಿಕೊಪ್ಪ ಮುಖ್ಯ ಬೀದಿಯಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ, ಸಂಜೆ ೮ ಗಂಟೆಗೆ ದಶಮಂಟಪಗಳಿAದ ಶೋಭಾಯಾತ್ರೆ ಆರಂಭ, ೬ ಗಂಟೆಗೆ ಕಿರುಗೂರುವಿನ ಸಪ್ತಸ್ವರ ಮೆಲೋಡಿಸ್, ಪೊನ್ನಂಪೇಟೆಯ ನಾಗರಾಜ್ ತಂಡದಿAದ ಸಂಗೀತ ರಸಮಂಜರಿ, ಕೈಕೇರಿಯ ಹರ್ಷಿತ ಕಿರಣ್ ಇವರಿಂದ ಭರತನಾಟ್ಯ ಮೂಡಿ ಬರಲಿದ್ದು, ೭.೩೦ ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮೈಸೂರಿನ ಪಿವಿಆರ್ ಇವೆಂಟ್ಸ್ ಎಂಟರ್‌ಟೇನರ್ ಇವರಿಂದ ಸಂಗೀತ ರಸ ಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಜರುಗಲಿದೆ.
ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರತಿ ದಿನ ಬೆಳಿಗ್ಗೆ ೭ ಗಂಟೆಯಿAದ ೮ರ ವರೆಗೆ ಹಾಗೂ ಸಂಜೆ ೭ರಿಂದ ೮ರವರೆಗೆ ಪೂಜಾ ಕಾರ್ಯಕ್ರಮವು ನಡೆಯಲಿದೆ.
-ಹೆಚ್.ಕೆ. ಜಗದೀಶ್