ಮಡಿಕೇರಿ,ಸೆ.೨೦; ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಅಂಗವಾಗಿ ರಂಗೋಲಿ ಬಿಡಿಸುವುದು, ವಾಹನ ಹಾಗೂ ಕಟ್ಟಡಗಳ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ ದಸರಾ ಅಲಂಕಾರ ಸಮಿತಿ ಅಧ್ಯಕ್ಷ ಎಂ.ಎ. ಮುನೀರ್ ಮಾಚಾರ್; ತಾ. ೨೨ರಂದು ಕರಗ ಮಹೋತ್ಸವದ ದಿನ ಸಂಜೆ ೬ ಗಂಟೆಯಿAದ ಕರಗ ಪ್ರದಕ್ಷಿಣೆಯ ರಸ್ತೆಗಳಲ್ಲಿ ಬನ್ನಿ ಮಂಟಪದಿAದ ಶ್ರೀ ಪೇಟೆ ರಾಮ ಮಂದಿರದವರೆಗೆ ಮನೆಗಳ ಮುಂದೆ ರಸ್ತೆಯ ಮುಖ್ಯಭಾಗಗಳಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಚುಕ್ಕಿ ರಂಗೋಲಿ, ಎಳೆ ರಂಗೋಲಿ, ಬಣ್ಣದ ರಂಗೋಲಿ, ಹೂವಿನ ರಂಗೋಲಿ ಎಂದು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅಂದವಾದ ರಂಗೋಲಿಗಳಿಗೆ ಬಹುಮಾನ ನೀಡಲಿದ್ದು, ತೀರ್ಪುಗಾರರು ಅಂದು ೬ ಗಂಟೆಗೆ ಬರುವ ಸಂದರ್ಭದಲ್ಲಿ ರಂಗೋಲಿ ತಯಾರಾಗಿರಬೇಕು. ಅಪೂರ್ಣ ರಂಗೋಲಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲವೆಂದು ಹೇಳಿದರು.

ವಾಹನ ಅಲಂಕಾರ

ಅ.೧ರAದು ಆಯುಧಾ ಪೂಜೆ ಅಂಗವಾಗಿ ವಾಹನಗಳ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಸೈಕಲ್, ಬೈಕ್, ಆಟೋ, ಟೆಂಪೋ, ಜೀಪು, ಕಾರು, ಲಾರಿ, ಜೆಸಿಬಿ ಯಂತ್ರ, ಬಸ್, ಟ್ರಾö್ಯಕ್ಟರ್ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂದು ಸಂಜೆ ೭ ಗಂಟೆಗೆ ಸರಿಯಾಗಿ ಅಲಂಕೃತ ವಾಹನಗಳನ್ನು ಗಾಂಧಿ ಮೈದಾನದಲ್ಲಿ ನಿಲ್ಲಿಸಿರಬೇಕು ಎಂದು ಹೇಳಿದರು.

ಕಟ್ಟಡ ಅಲಂಕಾರ

ಅAಗಡಿ, ದೇವಾಲಯಗಳ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಬೃಹತ್ ಕಟ್ಟಡಗಳು ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳು, ಹೋಂ ಸ್ಟೇಗಳ ಅಲಂಕಾರಕ್ಕೆ ತಾ. ೨ರ ವಿಜಯದಶಮಿಯಂದು ಸಂಜೆ ೭ ಗಂಟೆಯಿAದ ಬಹುಮಾನ ನೀಡಲಾಗುವುದೆಂದು ಮುನೀರ್ ತಿಳಿಸಿದರು.

ಸಮಿತಿ ಗೌರವ ಸಲಹೆಗಾರ ಪಿ.ಜಿ. ಮಂಜುನಾಥ್ ಮಾತನಾಡಿ; ಆಯುಧಾ ಪೂಜಾ ದಿನದಂದು ಅಲಂಕೃತ ವಾಹನಗಳು ಗಾಂಧಿ ಮೈದಾನದತ್ತ ಬರುವ ಸಂದರ್ಭದಲ್ಲಿ ಪೊಲೀಸರು ತಡೆಯುತ್ತಾರೆ. ಇದರಿಂದ ವಾಹನಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಹಾಗಾಗಿ ಸ್ಪರ್ಧೆಗೆ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡುವಂತೆ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿಕೊಂಡರು. ವಾಹನಗಳು ಸಮಯ ಪಾಲನೆ ಮಾಡಬೇಕೆಂದು ಕೋರಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೋಚನ ಎಂ. ಚೇತನ್, ಖಜಾಂಚಿ ರಫೀಕ್ ದಾದ, ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್, ಸಂಚಾಲಕ ನವೀನ್ ಬಿ.ಕೆ. ಇದ್ದರು.