ಮಡಿಕೇರಿ, ಸೆ. ೨೩ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಗಾಲದ ಸನ್ನಿವೇಶ ಇನ್ನೂ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತ ತಲುಪಿದರೂ ಮಳೆ ಮಾತ್ರ ಬಿಡಲೊಲ್ಲೆ... ಎಂಬAತೆ ಮತ್ತೂ ಮುಂದುವರಿಯುತ್ತಿದೆ. ಈ ವರ್ಷ ಮೇ ತಿಂಗಳ ಅಂತ್ಯದಿAದಲೇ ಕೊಡಗು ಜಿಲ್ಲೆ ಮಳೆಯನ್ನು ಎದುರಿಸುತ್ತಿದೆ. ಜೂನ್, ಜುಲೈ, ಆಗಸ್ಟ್ ತಿಂಗಳಿನುದ್ದಕ್ಕೂ ಮುಂಗಾರು ಮಳೆಯನ್ನು ಕಂಡಿರುವ ಜಿಲ್ಲೆಯ ಜನರು ಇದೀಗ ಸೆಪ್ಟೆಂಬರ್ ತಿಂಗಳಿನಲ್ಲೂ ಮಳೆ ಚಳಿಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಸರಾ ಕಾರ್ಯಕ್ರಮ ಪ್ರಾರಂಭಗೊAಡಿದ್ದು, ದಸರಾ ಸಂಭ್ರಮಕ್ಕೂ ಈಗಿನ ವಾತಾವರಣ ಅಡ್ಡಿಯಾಗುತ್ತದೆ. ನಿನ್ನೆ ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಧಾರಾಕಾರ ಮಳೆ ಸುರಿದಿತ್ತು. ಸಂಜೆ ಇಳಿಮುಖವಾದರೂ ಮಂಗಳವಾರ ಬೆಳಿಗ್ಗೆಯಿಂದಲೇ ಹೊಸದಾಗಿ ಮಳೆಗಾಲ ಪ್ರಾರಂಭವಾಗುವ ಸಂದರ್ಭದಲ್ಲಿ ಕಂಡುಬರುವ ಸನ್ನಿವೇಶದಂತೆ ಮಳೆ ಸುರಿಯುಲಾರಂಭಿಸಿತ್ತು. ಮಡಿಕೇರಿ ಮಾತ್ರವಲ್ಲದೆ ಇಡೀ ಜಿಲ್ಲೆಯಾದ್ಯಂತ ಮಂಗಳವಾರ ಮಳೆಯ ವಾತಾವರಣವೇ ಕಂಡುಬAದಿತು. ಈ ಪರಿಸ್ಥಿತಿಯಿಂದಾಗಿ ಜನತೆ ಒಂದು ರೀತಿಯಲ್ಲಿ ಕಿರಿ ಕಿರಿಯನ್ನು ಅನುಭವಿಸುವಂತಾಗಿದೆ. ಸತತ ನೂರು ದಿನಗಳಿಗೂ ಅಧಿಕ ಕಾಲದಿಂದ ಮಳೆಯ ಸನ್ನಿವೇಶವನ್ನೇ ಕಾಣುತ್ತಿರುವ ಜನರು ಹೈರಾಣಾಗಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಿವಿಧೆಡೆಗಳಲ್ಲಿ ೩೦೦ ಇಂಚು, ೨೦೦ ಇಂಚುಗಳಿಗೂ ಮಳೆಯಾಗಿದ್ದು ಇಂತಹ ಪ್ರದೇಶಗಳು ಜರ್ಜರಿತಗೊಂಡAತಿವೆ. ಜಿಲ್ಲೆಯಲ್ಲೂ ಈತನಕ ಸರಾಸರಿ ೧೧೦ ಇಂಚುಗಳಷ್ಟು ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೧೬೫ ಇಂಚು

ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈತನಕ ೧೬೫ ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೧೬೦ ಇಂಚುಗಳಷ್ಟಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ ೯೭.೮೫ ಇಂಚು, ಪೊನ್ನಂಪೇಟೆ ೧೦೧.೮೮, ಸೋಮವಾರಪೇಟೆ ೧೨೪.೨೬, ಕುಶಾಲನಗರ ತಾಲೂಕಿನಲ್ಲಿ ೫೫.೯೭ ಇಂಚು ಸರಾಸರಿ ಮಳೆಯಾಗಿದೆ.

ಕಳೆದ ವರ್ಷ ಈ ಅವಧಿಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ೯೭.೭೮, ಪೊನ್ನಂಪೇಟೆ ೧೦೩.೧೫, ಸೋಮವಾರಪೇಟೆ ೧೨೪.೬೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೬೫.೬೦ ಇಂಚು ಮಳೆಯಾಗಿತ್ತು.

ಸುದೀರ್ಘ ಅವಧಿಯ ಮಳೆಗಾಲದಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಹಲವಷ್ಟು ಸಮಸ್ಯೆಗಳೂ ಉಂಟಾಗಿವೆ.