ಚೆಯ್ಯಂಡಾಣೆ, ಸೆ. ೨೩: ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧೫೦೦ನೇ ಜನ್ಮದಿನಾಚರಣೆಯ ಅಂಗವಾಗಿ ಎಸ್ ಜೆ ಎಂ ನಾಪೋಕ್ಲು ಹಾಗೂ ಎಮ್ಮೆಮಾಡು ರೇಂಜ್‌ಗಳ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನಲ್ಲಿ ದಫ್ ಹಾಗೂ ಸ್ಕೌಟ್ ಪ್ರದರ್ಶನದೊಂದಿಗೆ ವರ್ಣ ರಂಜಿತ ಬೃಹತ್ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು.

ಪ್ರವಾದಿಯವರ ಸಂದೇಶಗಳಿAದ ಮಾತ್ರ ಜಗತ್ತಿನ ಸಂಕಷ್ಟಗಳಿAದ ಮುಕ್ತಿ ಪಡೆಯಲು ಸಾಧ್ಯ ಎಂದು ಎಸ್.ವೈ.ಎಸ್. ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ತಿಳಿಸಿದರು.

ಸಂಕುಚಿತ ಮನೋಭಾವದಿಂದ ಕ್ಷುಲ್ಲಕ ವಿಚಾರಗಳಿಗೆ ಪರಸ್ಪರ ವೈಷಮ್ಯ ಸೃಷ್ಟಿಸುವ ಬದಲಾಗಿ ಸಮಾಜ ಹಾಗೂ ರಾಷ್ಟçದ ಅಭಿವೃದ್ಧಿಗೆ ಪೂರಕವಾದ ಚಿಂತನೆ ನಮ್ಮಲ್ಲಿರಬೇಕು ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಎಮ್ಮೆಮಾಡು ರೇಂಜ್ ಪ್ರಧಾನ ಕಾರ್ಯದರ್ಶಿ ಯೂನುಸ್ ಪ್ರತಿ ಧರ್ಮಗಳೂ ಸಾರುವುದು ಶಾಂತಿಯ ಸಂದೇಶ ಎಂದರು.

ಎಸ್‌ಜೆಎಂ ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ, ಪ್ರಧಾನ ಕಾರ್ಯದರ್ಶಿ ಷಂಶುದ್ದೀನ್ ಅಮ್ಜದಿ ಬಲಮುರಿ, ಕೆಎಂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಸ್ವಾಗತ ಸಮಿತಿ ಚೇರ್ಮನ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಕನ್ವೀನರ್ ಹಂಝ ರಹ್ಮಾನಿ ಪಡಿಯಾಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.