ಮಡಿಕೇರಿ, ಸೆ. ೨೩ : ಮಡಿಕೇರಿ ದಸರಾ ಅಂಗವಾಗಿ ತಾ. ೨೪ ರಂದು (ಇಂದು) ಬೆಳಿಗ್ಗೆ ಕಾಫಿ ದಸರಾ ಹಾಗೂ ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ದಸರಾ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕಾಫಿ ಹಾಗೂ ಕಾಫಿ ಕೃಷಿ ಸಂಬAಧಿತ ಮಳಿಗೆಗಳು, ಕಾಫಿಯಿಂದ ತಯಾರಿಸಲಾಗುವ ಖಾದ್ಯ ಸ್ಪರ್ಧೆ ನಡೆಯಲಿದೆ. ಸಂಜೆ ೬ ಗಂಟೆಗೆ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯಿಂದ ಸಾಂಸ್ಕೃತಿಕ ವೈವಿಧ್ಯ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ತಂಡದಿAದ ನೃತ್ಯ, ಕೊಡಗು ಪತ್ರಕರ್ತರ ಸಂಘದ ಕೆಪಿಎಸ್ ಬೀಟ್ಸ್ ತಂಡದಿAದ ಸಂಗೀತ ರಸಮಂಜರಿ, ಅಂತರರಾಷ್ಟಿçÃಯ ಖ್ಯಾತಿಯ ಹರಿ ಚೇತನ್ ತಂಡದಿAದ ಕಥಕ್ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.