ಸುಂಟಿಕೊಪ್ಪ, ಸೆ. ೨೩: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೪-೨೫ನೇ ಸಾಲಿನಲ್ಲಿ ರೂ. ೫೮,೦೫,೩೯೮ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜಾ ಮಾಹಿತಿ ನೀಡಿದರು.ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರಿಗೆ ೨೦೨೪-೨೫ನೇ ಸಾಲಿನಲ್ಲಿ ಶೇ. ೧೩ ಡಿವಿಡೆಂಡ್ ನೀಡಲು ಇಂದಿನ ಮಹಾಸಭೆಯಲ್ಲಿ ಮಂಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದಲ್ಲಿ ೨,೦೦೦ ಮಂದಿ ಸದಸ್ಯರಿದ್ದು, ಇದರಲ್ಲಿ ‘ಎ’ ಸದಸ್ಯರ ಪಾಲುಹಣ ರೂ. ೮೬,೯೫,೩೮೦, ‘ಸಿ’ ತರಗತಿ ಪಾಲುಹಣ ರೂ. ೨,೭೫,೦೦೦, ಸರ್ಕಾರದ ಪಾಲುಹಣ ರೂ. ೭೮,೦೦೦ ಆಗಿರುತ್ತದೆ ಎಂದು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಒಟ್ಟು ವ್ಯಾಪಾರ ವಹಿವಾಟು ರೂ. ೧೬೬ ಕೋಟಿಗಳಾಗಿದ್ದು, ಒಟ್ಟು ರೂ. ೩೧,೯೦,೦೦೦ ಕೃಷಿ ಸಾಲ ಮತ್ತು ಕೃಷಿಯೇತರ ಸಾಲ ರೂ. ೪೬,೫೦,೦೦೦ಗಳನ್ನು ವಿತರಿಸಲಾಗಿದೆ ಎಂದರು.
ಸAಘದ ಸಾಲ ಮರುಪಾವತಿ ಪ್ರಮಾಣವು ಶೇ. ೯೮.೨ ಇದ್ದು, ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸಂಘದಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಅಧ್ಯಕ್ಷರನ್ನು ಹಿರಿಯ ಸದಸ್ಯ ಎಂ.ಎ ವಸಂತ ಪ್ರಶ್ನಿಸಿದಾಗ ಅಧ್ಯಕ್ಷರಾದ ಜೆರ್ಮಿ ಡಿಸೋಜಾ ಪ್ರತಿಕ್ರಿಯಿಸಿ ಈಗಾಗಲೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಕಾಲಕಾಲಕ್ಕೆ ವಿಚಾರಣೆ ನಡೆಯುತ್ತಿದ್ದು, ಸಂಘದ ವತಿಯಿಂದ ಕ್ರಮವಹಿಸಲಾಗಿದೆ ಎಂದರು. ಈ ಬಗ್ಗೆ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿರುವ ದಾಸಂಡ ರಮೇಶ್ ಚಂಗಪ್ಪ ಅವರು ಮಾಹಿತಿ ನೀಡಿ, ದುರುಪಯೋಗ ಸಂಬAಧ ವಿಚಾರವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿದ್ದು, ಇನ್ನೊಂದು ಮೊಕದ್ದಮೆಯ ಸಂಬAಧ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.
ಈಗಾಗಲೇ ಸಂಘದ ಕಲ್ಲೂರು ಶಾಖೆಯನ್ನು ನವೀಕರಣಗೊಳಿಸಿ ಗೋದಾಮು ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾನ್ಬೈಲ್ ಶಾಖೆಯನ್ನು ಕೂಡ ನವೀಕರಣಗೊಳಿಸಿ ಗೋದಾಮು ಮತ್ತು ಬ್ಯಾಂಕಿAಗ್ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದರಲ್ಲದೆ ಹೊರೂರು ಮತ್ತು ಕೊಡಗರಹಳ್ಳಿ ಶಾಖೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಪಿ.ಪಿ. ಉದಯಕುಮಾರ್, ನಿರ್ದೇಶಕರುಗಳಾದ ಎಂ.ಎನ್. ಕುಮಾರಪ್ಪ, ಎನ್.ಸಿ. ಪೊನ್ನಪ್ಪ, ಡಿ.ಬಿ. ರಮೇಶ್ ಚಂಗಪ್ಪ, ಡಿ.ಕೆ. ಗಂಗಾಧರ, ಡಾ. ಶಶಿಕಾಂತ ರೈ, ಕೆ.ಪಿ. ಜಗನ್ನಾಥ್, ಕೆ.ಆರ್. ಮಂಜುನಾಥ, ಬಿ.ಕೆ. ದಯಾನಂದ, ಪಿ.ಪಿ. ಲೀಲಾವತಿ, ಕೆ.ವಿ. ರಮ್ಯ ಮತ್ತು ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.