ಸುಂಟಿಕೊಪ್ಪ, ಸೆ. ೨೩: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಕಳೆದ ೫೪ ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಆಯುಧಪೂಜಾ ಕಾರ್ಯಕ್ರಮ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೂ ಸದ್ದುಮಾಡಿದೆ.

ಈ ಬಾರಿ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೫೫ನೇ ವರ್ಷದ ಅದ್ದೂರಿ ಆಯುಧಪೂಜಾ ಸಮಾರಂಭದ ಅಂಗವಾಗಿ ವಾಹನ ಚಾಲಕರ ವೇದಿಕೆ ಸೇರಿದಂತೆ ಪಟ್ಟಣದ ಮುಖ್ಯ ಬೀದಿಗಳಾದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಗದ್ದೆಹಳ್ಳದವರೆಗೆ, ಅಲ್ಲಿಂದ ಮಾದಾಪುರ ರಸ್ತೆಯಲ್ಲಿರುವ ವೃಕ್ಷೆÆÃದ್ಭವ ಗಣಪತಿ ದೇವಾಲಯದವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಮೂಲಕ ಪಟ್ಟಣದಲ್ಲಿ ಆಚರಣೆಯ ಸಿದ್ಧತೆಯಲ್ಲಿ ಸಂಘದವರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಅ.೧ ರ ಬುಧವಾರ ದಂದು ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ, ಕೃಷ್ಣಪ್ಪ ಬಿ.ಎ., ಪ್ರಧಾನ ಕಾರ್ಯದರ್ಶಿ ಮುನೀರ್ ಕಂಬಿಬಾಣೆ, ಖಜಾಂಚಿ ಅಜೀಜ್, ಸಹ ಕಾರ್ಯದರ್ಶಿ ಪಟ್ಟೆಮನೆ ಎಸ್. ರಕ್ಷಿತ್ ರೀನು, ಸಂಘಟನಾ ಕಾರ್ಯದರ್ಶಿ ರಿಜ್ವಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸಿ.ಎ. ಬಸಪ್ಪ, ರಾಜ, ಇನಾಸ್ ಡಿಸೋಜಾ, ಕೆ. ರವಿ, ಸಂದೀಪ್ ಬಿ.ಎಸ್., ಬಿ.ಕೆ ಸುರೇಶ್, ಅಸೀಸ್ ಹೊಸಕೋಟೆ, ಅಸ್ಕರ್, ಜೈನುದ್ದೀನ್, ಶಕ್ತಿವೇಲು, ಫೀಕ್‌ಮೊನು, ಮಣಿ ರಾಜ್ ತಂಬಿ, ದೇವಯ್ಯ ಎಂ.ಎ, ಕುಮಾರ ಜಿ, ಶಾಜಿ ಎಂ.ಎಸ್, ಸಲೀಂ ಗದ್ದೆಹಳ್ಳ, ಒಗ್ಗೂಡಿ ಸಮಾರಂಭದ ವಿಜೃಂಭಣೆಯಿAದ ಆಚರಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.