ಗೋಣಿಕೊಪ್ಪ ವರದಿ, ಸೆ. ೨೪: ಹಿರಿಯರ ಸೇವೆಯಲ್ಲಿ ಗುರುತಿಸುವುದು ದೊಡ್ಡ ಸೇವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ಧ ಸಹಕಾರ ಸಂಘದ ಸಭಾಂಗಣದಲ್ಲಿ ಕ್ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆಯ ಕಾರ್ಯಕ್ರಮದಲ್ಲಿ ನಿವೃತ್ತ ಸರ್ವೆ ಸಹಾಯಕ ನಿರ್ದೇಶಕ ಅಜ್ಜಿಕುಟ್ಟೀರ ಬಿ. ಭೀಮಯ್ಯ ಅವರಿಗೆ ‘ಕ್ಗ್ಗಟ್ಟ್ ನಾಡ್ ಮ್ಯಾನ್ ಅಫ್ ದ ಇಯರ್’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹಿರಿಯರು ಸಾಕಷ್ಟು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರೂ ಸಮಾಜಕ್ಕೆ ಅವರ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಈ ನಿಟ್ಟಿನಲ್ಲಿ ಹಿರಿಯರ ಶ್ರಮ, ಸ್ಥಳೀಯವಾಗಿ ನೀಡಿರುವ ವಿಶೇಷ ಕಾಳಜಿಯನ್ನು ಗುರುತಿಸಬೇಕಿದೆ ಎಂದರು. ಸರ್ವೇ ಇಲಾಖೆಯಲ್ಲಿ ಅಜ್ಜಿಕುಟ್ಟೀರ ಬಿ. ಭೀಮಯ್ಯ ಅವರ ಸೇವೆಯ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಕಾರ್ಯ ನಡೆದಿದೆ. ಹಿಂದಿನ ಕಾಲದ ಸರ್ವೇಕಾರ್ಯ ಕಷ್ಟದ ಕೆಲಸವಾಗಿತ್ತು. ಗಡಿಯೇ ಇಲ್ಲದ ಕಾಲಘಟ್ಟದಲ್ಲಿ ಸರ್ವೆ ನಡೆಸಿ ಭೂಮಿಯನ್ನು ಜನರಿಗೆ ದಾಖಲೆಯಾಗಿ ನೀಡುವುದು ಕಷ್ಟದ ಕೆಲಸ. ಕೊಡಗು ಕರ್ನಾಟಕ ರಾಜ್ಯಕ್ಕೆ ವಿಲೀನದ ನಂತರ ಕೂಡ ಗಡಿ ಗುರುತು, ಜಾಗದ ತಗಾದೆ ಪೂರ್ಣಗೊಂಡಿಲ್ಲ. ಈಗಿನ ಕಾಲದಲ್ಲಿ ಹಣಕ್ಕಾಗಿ ನಡೆಯುವ ಸರ್ವೇ ಕಚೇರಿಯಂತೆ ಹಿಂದೆ ಇರಲಿಲ್ಲ. ಹಿರಿಯದಿಂದ ದೊಡ್ಡ ಸೇವೆ ಸಿಕ್ಕಿದೆ ಎಂದರು. ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಮಾತನಾಡಿದರು. ಕಾಫಿ ಬೆಳೆಗಾರ ಚೆಕ್ಕೇರ ಪೂಣಚ್ಚ, ವೇದಿಕೆಯ ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ, ಉಪಾಧ್ಯಕ್ಷ ಮಂಡೆಚAಡ ಗಣೇಶ್, ಕಾರ್ಯದರ್ಶಿ ಚೇಂದೀರ ಬೋಪಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ಲೆಕ್ಕ ಪರಿಶೋಧಕ ಬೊಳ್ಳಿಯಂಗಡ ದಾದು ಪೂವಯ್ಯ ಇದ್ದರು. ಚಿರಿಯಪಂಡ ರುಕ್ಮಿಣಿ ನಿರೂಪಿಸಿದರು.