ಸಂಪಾಜೆ, ಸೆ. ೨೪: ಇಲ್ಲಿನ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಪಾಜೆ ಶ್ರೀ ಪಂಚಲಿAಗೇಶ್ವರ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಯನ್.ಸಿ. ಅನಂತ್ ಊರುಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಪ್ರಸ್ತುತ ೨೮೧೧ ಸದಸ್ಯರನ್ನು ಹೊಂದಿದ್ದು, ರೂ. ೨೭೯.೧೪ ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಹಾಗೆಯೇ ಸಂಘದಲ್ಲಿ ರೂ. ೩೪೮೩.೪೨ ಲಕ್ಷ ಠೇವಣಿ ಇದ್ದು, ರೂ. ೩೮೪೬.೬೫ ಲಕ್ಷ ಗಳಷ್ಟನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ. ೨೦೨೪-೨೫ ರ ಅವಧಿಯಲ್ಲಿ ರೂ. ೩೮೫೮೬೨೬ ಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೯ ಡಿವಿಡೆಂಡ್ ಘೋಷಿಸಲಾಯಿತು.

ಸಂಘದ ಅಧ್ಯಕ್ಷ ಅನಂತ್ ಮಾತನಾಡಿ, ಸದಸ್ಯರಿಗೆ ಕನಿಷ್ಟ ದರದಲ್ಲಿ ಗರಿಷ್ಠ ಸೇವೆ ಮತ್ತು ಸಹಕಾರ ನೀಡುವ ಉದ್ದೇಶದಿಂದ ನಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಮುಂದಿನ ವರ್ಷ ೨೦೨೬ ರಲ್ಲಿ ತಮ್ಮ ಸಂಘವು ೫೦ ವರ್ಷ ಪೂರೈಸುತ್ತಿರುವುದರಿಂದ ಎಲ್ಲಾ ಗ್ರಾಮಸ್ಥರ ಮತ್ತು ಸಹಕಾರಿ ಬಂಧುಗಳ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಆಚರಿಸಲಿರುವ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. ೯೦ ರಿಂತ ಅಧಿಕ ಅಂಕ ಗಳಿಸಿದ ೨೪ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸಂಘದ ನಿರ್ದೇಶಕಿಯರಾದ ವಾಣಿ ಮತ್ತು ಪ್ರಿಯಾಂಕ ಪ್ರಾರ್ಥಿಸಿ, ಸಂಘದ ಸಿಇಓ ಆನಂದ ಬಿ.ಕೆ. ವರದಿ ವಾಚನ ಮಾಡಿ, ಉಪಾಧ್ಯಕ್ಷ ಯಶವಂತ ಡಿ.ಡಿ.ವಂದಿಸಿದರು.