ಮಡಿಕೇರಿ, ಸೆ. ೨೪: ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ತಾ. ೨೩ ರಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಭಾಗಮಂಡಲದ ಜಾನ್ ಡ್ಯಾನ್ಸ್ ಗ್ಯಾಲರಿಯಿಂದ ನೃತ್ಯ ವೈವಿಧ್ಯ, ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಅನ್ವಿತ್ ತಂಡದಿAದ ಸಂಗಿತ ಕಾರ್ಯಕ್ರಮ, ಮೈಸೂರಿನ ನಿತ್ಯ ನಿರಂತರ ಟ್ರಸ್ಟ್ನ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಂಗಳೂರಿನ ಸ್ವರ ಸಿಂಚನ ತಂಡದಿAದ ಸಂಗೀತ ರಸಮಂಜರಿ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.