ಮಡಿಕೇರಿ, ಸೆ. ೨೪: ದಸರಾ ಅಂಗವಾಗಿ ತಾ. ೨೫ ರಂದು (ಇಂದು) ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ ೬ ಗಂಟೆಯಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಡಿಕೇರಿಯ ಕೂರ್ಗ್ ಸನ್‌ರೈಸ್ ಮೆಲೋಡಿಸ್ ತಂಡದಿAದ ಸಂಗೀತ ರಸಮಂಜರಿ, ಮಡಿಕೇರಿ ನಾಟ್ಯ ಮಯೂರಿ ಮೆಲೋಡಿಸ್‌ನಿಂದ ಸಾಂಸ್ಕೃತಿಕ ವೈವಿಧ್ಯ, ಸುಳ್ಯದ ಸುಗಿಪು ಜಾನಪದ ತಂಡದಿAದ ಜಾನಪದ ವೈವಿಧ್ಯ, ಮಂಗಳೂರಿನ ಹೆಜ್ಜೆನಾದ ತಂಡದಿAದ ಸಾಂಸ್ಕೃತಿಕ ವೈವಿಧ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.