ಶನಿವಾರಸಂತೆ, ಸೆ. ೨೪: ಸಮೀಪದ ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ತಾ. ೨೨ ರಿಂದ ಅ. ೨ ರವರೆಗೆ ಶರನ್ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆ ಹಾಗೂ ವಿವಿಧ ಸೇವಾರಾಧನೆಗಳು ನಡೆಯಲಿವೆ.
ತಾ.೨೨ ರಂದು ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣ, ಅಖಂಡ ನಂದಾದೀಪ ಸ್ಥಾಪನೆ ನಡೆಯಿತು. ಸಂಜೆ ೬ ಗಂಟೆಗೆ ಮಹಾಭಿಷೇಕ ಸಹಿತ ದುರ್ಗಾ ಪೂಜೆ ನಡೆಯಿತು. ರಾತ್ರಿ ಸಾಮೂಹಿಕ ಪ್ರಾರ್ಥನೆ, ಮಹಾ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಪೂಜಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಪೌರೋಹಿತ್ಯದಲ್ಲಿ ನಡೆಯಿತು. ದೇವಾಲಯ ಸೇವಾ ಸಮಿತಿ ಹಾಗೂ ಚೌಡೇಶ್ವರಿ ಮಹಿಳಾ ಬಳಗ ಪದಾಧಿಕಾರಿಗಳು ಹಾಜರಿದ್ದರು.