ಕುಶಾಲನಗರ, ಸೆ. ೨೫: ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ ಬೃಹತ್ ಗಾತ್ರದ ಮೊಸಳೆ ಕಂಡುಬAತು.
ಸುಮಾರು ೧೫ ಅಡಿಗಿಂತಲೂ ಉದ್ದದ ಭಾರಿ ಗಾತ್ರದ ಮೊಸಳೆ ಬಿಸಿಲಿಗೆ ಮೈಯೊಡ್ಡಿ ದಿನವಿಡಿ ವಿಶ್ರಾಂತಿ ಪಡೆದಂತೆ ಕಂಡು ಬರುತ್ತಿತ್ತು. ಇದರೊಂದಿಗೆ ಸುಮಾರು ಎಂಟರಿAದ ಹತ್ತು ಅಡಿ ಉದ್ದದ ಇನ್ನೊಂದು ಮೊಸಳೆ ಕೂಡ ಆಗಾಗ್ಗೆ ನದಿಯಿಂದ ಹೊರ ಬಂದು ಬಂಡೆ ಮೇಲೆ ಪ್ರತ್ಯಕ್ಷವಾಗುತ್ತಿತ್ತು.
ಇದನ್ನು ಕಂಡ ಹೆದ್ದಾರಿ ರಸ್ತೆಯ ವಾಹನ ಚಾಲಕರು ಸೇತುವೆ ಮೇಲೆ ರಸ್ತೆಯಲ್ಲಿಯೇ ತಮ್ಮ ವಾಹನವನ್ನು ನಿಲುಗಡೆಗೊಳಿಸಿ ಮೊಸಳೆಯನ್ನು ನೋಡುವ ತವಕದಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗಿ ಟ್ರಾಫಿಕ್ ಜಾಮ್ ಉಂಟಾಯಿತು.