ಗೋಣಿಕೊಪ್ಪಲು, ಸೆ. ೨೫ : ಗೋಣಿಕೊಪ್ಪಲುವಿನ ಕೊಡಗು ಕಿತ್ತಳೆ ಬೆಳೆಗಾರರ ಸಂಘದ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಅರುಣ್ ಮಾಚಯ್ಯ ಸಂಘಕ್ಕೆ ಸುಮಾರು ೧೮ ರಿಂದ ೨೦ ಲಕ್ಷ ಆರ್ಥಿಕ ಬಂಡವಾಳ ಅಗತ್ಯವಿದೆ. ವಿವಿಧ ಯಂತ್ರಗಳನ್ನು ಖರೀದಿಸಬೇಕಾಗಿದೆ. ಇದಕ್ಕಾಗಿ ಬಂಡವಾಳವನ್ನು ಕ್ರೋಢೀಕರಿಸ ಬೇಕಾಗಿದೆ. ಯೋಜನೆಯನ್ನು ತಯಾರಿಸಿದ್ದು ಅದನ್ನು ಕಾರ್ಯ ರೂಪಗೊಳಿಸಲು ಸದಸ್ಯರ ಸಹಾಯ ಬೇಕಾಗಿದೆ ಎಂದರು.
ಸAಘದ ಸದಸ್ಯರು ಹಾಗೂ ಸದಸ್ಯಯೇತರ ವ್ಯಕ್ತಿಗಳಿಂದ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಿ ಅದನ್ನು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಉತ್ಪಾದನಾ ಘಟಕದಲ್ಲಿ ಯಂತ್ರೋಪಕರಣಗಳ ಅಳವಡಿಕೆ ಮತ್ತು ಉತ್ಪಾದನೆಗೆ ಉಪಯೋಗಿಸಿ ಅದರಿಂದ ಬರುವಂತಹ ಆದಾಯ ವನ್ನು ಹೂಡಿಕೆದಾರರಿಗೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಉತ್ಪಾದನೆಗೊಂಡ ಉತ್ಪನ್ನಗಳನ್ನು ಹೂಡಿಕೆದಾರರಿಗೆ ಮಾರುಕಟ್ಟೆ ದರಕ್ಕಿಂತ ಫ್ಯಾಕ್ಟರಿ ದರದಲ್ಲಿ ಖರೀದಿಸಲು ಅನುವು ಮಾಡಿಕೊಡ ಲಾಗುವುದು. ಉತ್ಪಾದನೆಗೊಂಡ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದAತಹ ಆದಾಯದಲ್ಲಿ ಬರು ವಂತಹ ಹಣವನ್ನು ಪ್ರತಿವರ್ಷ ಡಿವಿಡೆಂಡ್ ರೂಪದಲ್ಲಿ ಹೂಡಿಕೆ ದಾರರಿಗೆ ನೀಡಲಾಗುವುದು ಎಂದರು.ಸAಘದ ಅಭಿವೃದ್ಧಿಗೆ ಪೂರಕ ವಾದ ಸಲಹೆಗಳನ್ನು ಸಂಘದ ಸದಸ್ಯರುಗಳು ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಳವಂಡ ಕೆ. ಅರವಿಂದ್, ನಿರ್ದೇಶಕರುಗಳಾದ ಕಡೇಮಾಡ ಸುನಿಲ್ ಮಾದಪ್ಪ, ಕಿರಿಯಮಾಡ ಯು. ಪೂಣಚ್ಚ, ಎಸ್.ಎಸ್. ಸುರೇಶ್, ಸಣ್ಣುವಂಡ ಎಸ್. ವಿಶ್ವನಾಥ್, ಚೇಂದ್ರಿಮಾಡ ಸಿ. ಕಾಳಯ್ಯ, ಬಾನಂಡ ಎನ್. ಪ್ರಥ್ವಿ, ಚೇಂದAಡ ಸುಮಿ ಸುಬ್ಬಯ್ಯ, ಪುಲಿಯಂಡ ಶೋಭ ಕುಟ್ಟಪ್ಪ, ಕಾಡ್ಯಮಾಡ ಬಿ. ಸುಮನ್, ಸಹಕಾರ ಸಂಘದ ತಮ್ಮು ಪೂವಯ್ಯ, ಕಾಯ ðನಿರ್ವಾಹಣಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿ ಸಿದ್ದರು. ಉಪಾಧ್ಯಕ್ಷ ಅರವಿಂದ್ ಸ್ವಾಗತಿಸಿ, ನಿರ್ದೇಶಕ ಸುರೇಶ್ ವಂದಿಸಿದರು.