ಮಡಿಕೇರಿ, ಸೆ. ೨೫: ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ತಾ. ೨೬ ಹಾಗೂ ೨೭ ರಂದು ಆಯೋಜನೆಗೊಂಡಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯುವಸಮೂಹವನ್ನು ಸೆಳೆಯಲು ಸಮಿತಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

ಈ ಸಂಬAಧ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ತಾ. ೨೬ ರಂದು ಬೆಳಿಗ್ಗೆ ನಗರದ ಬಾಲ ಭವನದಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ನಗರಸಭೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಚಾಲನೆ ನೀಡಲಿದ್ದಾರೆ. ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹರಿಪ್ರಸಾದ್ ಕೋಚನ, ಉದ್ಯಮಿ ಕೆ. ಶರಣ್, ಯುವ ದಸರಾ ಸಮಿತಿ ಆಯೋಜಕ ಹಬೀಬ್ ಅಹ್ಮದ್ ಪಾಲ್ಗೊಳ್ಳಲಿದ್ದಾರೆ. ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆೆ. ಉದ್ಯೋಗಾ ಕಾಂಕ್ಷಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಗಾಂಧಿ ಮೈದಾನ ದಲ್ಲಿ ಬೆಳಿಗ್ಗೆ ೧೦.೩೦ ರಿಂz೦À ಮಧ್ಯಾಹ್ನ ೩.೩೦ ರ ತನಕ ಶ್ವಾನ ಪ್ರದರ್ಶನ ನಡೆಯ ಲಿದ್ದು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಲಿಂಗರಾಜು ದೊಡ್ಡಮನಿ, ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನೀರ ಮೈನಾ, ಕಾಫಿ ಬೆಳೆಗಾರ ಪವಿತ್ರ ಉಳುವಾರನ, ಉದ್ಯಮಿ ಕಿರಣ್ ದೇರಾಜೆ, ರೈತ ಮುಖಂಡ ವಾಜಿದ್, ಯುವ ದಸರಾ ಸಮಿತಿಯ ಅತುಲ್ ಶರಣ್ ಭಾಗವಹಿಸಲಿದ್ದಾರೆ.

ನಗರದಲ್ಲಿ ಜಾಥಾ

ತಾ. ೨೭ ರಂದು ಬೆಳಿಗ್ಗೆ ೭ ಗಂಟೆಗೆ ನಗರದ ಸುದರ್ಶನ ವೃತ್ತದಿಂದ ಜ. ತಿಮ್ಮಯ್ಯ ವೃತ್ತದ ಮೂಲಕ ಚೌಕಿ, ಕಾವೇರಿ ಹಾಲ್, ಎಲ್.ಐ.ಸಿ.ಯಿಂದ ಗಾಂಧಿ ಮೈದಾನ ತನಕ ಸೈಕಲ್ ಜಾಥಾ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಚಾಲನೆ ನೀಡಲಿದ್ದಾರೆ. ಉದ್ಯಮಿ ಚೆಯ್ಯಂಡ ಸತ್ಯ, ಕ್ರೀಡಾ ದಸರಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ದಸರಾ ಸಮಿತಿ ಖಜಾಂಚಿ ಸಬಿತಾ, ಉದ್ಯಮಿ ಖಲೀಲ್ ಭಾಷ, ಉದ್ಯಮಿ ಎಂ.ಎಸ್. ಲೀನೇಶ್, ಟಿ.ಆರ್. ದ್ರುವ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ೧೦.೩೦ಕ್ಕೆ ಗಾಂಧಿ ಮೈದಾನದಿಂದ ಆರಂಭಗೊಳ್ಳಲಿರುವ ಸೂಪರ್ ಬೈಕ್ ಜಾಥಾಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಬಾರಿಕೆ ಚಾಲನೆ ನೀಡಲಿದ್ದಾರೆ. ವೇದಿಕೆ ಸಮಿತಿ ಅಧ್ಯಕ್ಷ ಆರ್.ಪಿ. ಚಂದ್ರಶೇಖರ್, ಕಿಂಬರ್ಲಿ ಸಂಸ್ಥೆಯ ಕೆ.ಜಿ. ಮದನ್, ಉದ್ಯಮಿ ಟಿ.ಆರ್. ಅರ್ಜುನ್, ಡಿ. ದಿಶಾಂತ್ ಉಪಸ್ಥಿತರಿರಲಿದ್ದಾರೆ ಎಂದು ಕವನ್ ಕೊತ್ತೊಳಿ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಯುವ ದಸರಾ ಸಮಿತಿಯ ಪವಿತ್ರ ಶೆಟ್ಟಿ, ಸುನಿಲ್ ಸುದರ್ಶನ್, ಕೆ. ಶರಣ್, ಟಿ.ಆರ್. ಅರ್ಜುನ್, ಎಂ.ಎಸ್.ಲೀನೇಶ್ ಹಾಜರಿದ್ದರು.