ಸೋಮವಾರಪೇಟೆ, ಸೆ. ೨೫: ಇಲ್ಲಿನ ವಿವಿದೋದ್ಧೇಶ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೪೦ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಟಿ. ಪರಮೇಶ್ ಹೇಳಿದರು.
ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘ ಒಟ್ಟು ೪೦,೦೧,೫೩೨ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೮ ಲಾಭಾಂಶ ನೀಡಲು ಸಭೆ ತೀರ್ಮಾನಿಸಲಾಗಿದೆ ಎಂದರು.
ಸಂಘದಲ್ಲಿ ಒಟ್ಟು ೧೧೩೩ ಸದಸ್ಯರಿದ್ದು, ರೂ. ೮೩,೦೧,೨೩೪ ಪಾಲುಹಣ ಬಂದಿರುತ್ತದೆ. ಸಿ ವರ್ಗದ ೩೯೮ ಸದಸ್ಯರಿಂದ ರೂ. ೨೪,೩೪,೮೦೦ ಹಾಗೂ ಪಾಲು ಅಮಾನತುಗೊಂಡಿರುವ ೬೯೬ ಸದಸ್ಯರಿಂದ ರೂ. ೧,೫೧,೮೦೦ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಂಘಕ್ಕೆ ದುಡಿಯುವ ಬಂಡವಾಳದ ಅವಶ್ಯಕತೆ ಇದ್ದು, ಆಡಳಿತ ಮಂಡಳಿ, ಪ್ರಚಾರ ಮಾಡುವ ಮೂಲಕ ಸದಸ್ಯರು ಹಾಗೂ ಸದಸ್ಯೇತರರಿಂದ ಹೆಚ್ಚಿನ ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರು ಹಾಗೂ ವ್ಯಾಪಾರಸ್ಥರಿಗೆ ರೂ. ೨೩,೩೪,೧೯,೯೭೫ ಸಾಲ ವಿತರಿಸಲಾಗಿದೆ. ಒಟ್ಟು ೧೧೩,೨೧,೭೯,೫೯೪ ವ್ಯವಹಾರ ಮಾಡುವ ಮೂಲಕ ಹಿಂದಿನ ಸಾಲಿಗಿಂತಲೂ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗಿದೆ ಎಂದರು.ಸAಘದ ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಸಂಘದಲ್ಲಿ ಕಂಪ್ಯೂಟರ್ ತಂತ್ರಾAಶವನ್ನು ಅಳವಡಿಸುವುದರೊಂದಿಗೆ, ಎಲ್ಲ ವ್ಯವಹಾರಗಳನ್ನು ಗಣಕೀಕರಣ ಮಾಡಲಾಗಿದೆ. ಮರಣ ನಿಧಿಯಲ್ಲಿ ನೋಂದಾಯಿಸಿಕೊAಡ ಆರು ಮಂದಿ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬದವರಿಗೆ ರೂ. ೬೦,೦೦೦ ಪಾವತಿಸಲಾಗಿದೆ. ಓಡಿ ಸಾಲ, ವ್ಯಾಪಾರೋದ್ಯಮ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ಪಿಗ್ಮಿ ಠೇವಣಿ ಆಧಾರ ಜಾಮೀನು ಸಾಲ ಮತ್ತು ಜಾಮೀನು ಸಾಲಗಳ ಭದ್ರತೆ ದೃಷ್ಟಿಯಿಂದ ಸಾಲಗಳ ವಿಮಾ ನಿಧಿಯನ್ನು ಪ್ರಾರಂಭಿಸಲಾಗಿದೆ. ಸದಸ್ಯರ ಕೋರಿಕೆಯಂತೆ ನೆಟ್ ಬ್ಯಾಂಕಿAಗ್ ಸೌಲಭ್ಯದ ಮೂಲಕ ತ್ವರಿತವಾಗಿ ಹಣ ವರ್ಗಾವಣೆ ಸೌಲಭ್ಯವನ್ನು ನೀಡುತ್ತಿದ್ದು, ಸದಸ್ಯರು ಬಳಸಿಕೊಳ್ಳಬೇಕೆಂದರು.
ಮುAದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಸದಸ್ಯರಿಗೆ ಸೌಲಭ್ಯಗಳನ್ನು ನೀಡಲು ಎಲ್ಲ ಸದಸ್ಯರು ಸಂಘದಲ್ಲಿಯೇ ವ್ಯವಹಾರ ನಡೆಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ. ಶಿವಪ್ಪ, ನಿರ್ದೇಶಕರುಗಳಾದ ಬಿ.ಪಿ. ಶಿವಕುಮಾರ್, ಎಚ್.ಕೆ. ಮಾದಪ್ಪ, ಬಿ.ಎಂ. ರಾಮ್ ಪ್ರಸಾದ್, ಎಂ. ಶ್ರೀಕಾಂತ್, ಬಿ.ಆರ್. ಮೃತ್ಯುಂಜಯ, ಎಂ.ಸಿ. ರಾಘವ, ಎಚ್.ಎಸ್. ವೆಂಕಪ್ಪ, ಕೆ.ಬಿ. ಸುರೇಶ್, ಎಂ.ಜೆ. ದರ್ಶನ್, ಸಿ.ಎನ್. ಶೋಭಿತ, ಎಸ್.ಸಿ. ರೂಪಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ತಾರಾ ಇದ್ದರು.