ಗೋಣಿಕೊಪ್ಪಲು, ಸೆ. ೨೬: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೊಡಗು ಮಹಿಳಾ ಮತ್ತು ಮಕ್ಕಳ ಇಲಾಖೆ ಪೊನ್ನಂಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳು ವೀರಾಜಪೇಟೆ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಾಷ್ಟಿçÃಯ ಸೆಕೆಲ್‌ಸೆಲ್ (ಕುಡುಗೋಲು) ಅನೀಮಿಯ ಜಾಗೃತಿ ಕಾರ್ಯಕ್ರಮ ತಿತಿಮತಿ ಸಮುದಾಯ ಭವನದಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರರಾದ ಕೆ.ಎನ್. ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿತು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ರಣದೀಪ್ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಟಿ. ಯೋಗೇಶ್ ಉಪನಿರ್ದೇಶಕರಾದ ಪ್ರಭಾ ಅರಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೈಸೂರಿನ ಜೆ.ಎಸ್.ಎಸ್. ಕಾಲೇಜಿನ ಅನುವಂಶೀಯ ರೋಗತಜ್ಞೆ ಡಾ. ದೀಪಾಭಟ್ ಉಪನ್ಯಾಸ ನೀಡಿದರು. ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸತೀಶ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಅಧಿಕಾರಿಗಳಾದ ಡಾ. ಸನತ್ ಕುಮಾರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ. ಯತಿರಾಜ್, ಪೊನ್ನಂಪೇಟೆ ತಾಲೂಕು ಸಿಡಿಪಿಒ, ರೇಣುಕಾ ಬಿ. ಹೊಸಮನಿ, ಯೂನಿಯನ್ ಲೀಡರ್ ಸುಮನ, ಆಶಾ ಕಾರ್ಯಕರ್ತೆ ಸುಮಿತ್ರ, ಆರೋಗ್ಯಾಧಿಕಾರಿ ಶಶಿಕಾಂತ, ತಿತಿಮತಿ ಗ್ರಾ,ಪಂ, ಅಧ್ಯಕ್ಷರಾದ ಪೊನ್ನು, ಗ್ರಾ.ಪಂ. ಸದಸ್ಯರಾದ ರಾಜು, ಮಾಜಿ ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಲ್ಯಾಮ್ಸ್ ಸಹಕಾರ ಸಂಘದ ಅಧ್ಯಕ್ಷರಾದ ಮಣಿಕುಂಞ, ಬುಡಕಟ್ಟು ಕೃಷಿಕರ ಅಧ್ಯಕ್ಷರಾದ ಸಿದ್ದಪ್ಪ, ರಾಮ, ಉದಯ, ಉಪಾಧ್ಯಕ್ಷರಾದ ಪುಷ್ಪ, ಸದಸ್ಯರುಗಳಾದ ಸುಬ್ರಮಣಿ, ರಾಣಿ, ಗ್ರಾಮೀಣ ಅರಣ್ಯ ಸಮಿತಿಯ ಅಧ್ಯಕ್ಷರಾದ ಪಿ.ಸಿ. ರಾಮು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು