ಸುAಟಿಕೊಪ್ಪ, ಸೆ. ೨೬: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಅ. ೧ ರಂದು ೫೫ನೇ ವರ್ಷದ ಅದ್ಧೂರಿಯ ಆಯುಧ ಪೂಜಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ವಿ. ಕಿಟ್ಟಣ್ಣ ರೈ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಅಂದು ಸಂಜೆ ೬ ಗಂಟೆಯಿAದ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ಆರ್ಕೆಸ್ಟಾç ತಂಡವಾದ ಶೈನಿಂಗ್ ಸ್ಟಾರ್ ಮೆಲೋಡಿ ಗಯ್ಸ್ ಆರ್ಕೆಸ್ಟ್ರಾ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಮೂಡಿಬರಲಿದೆ. ಖ್ಯಾತ ಮಿಮಿಕ್ರಿ ಕಲಾವಿದರಾದ ಮಿಮಿಕ್ರಿ ಗೋಪಿ ಇವರಿಂದ ಮಿಮಿಕ್ರಿ ಮತ್ತು ವಿಕ್ಟರಿ ವಾಸು ಇವರಿಂದ ಹಾಸ್ಯ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ದೊಡ್ಡ ವಾಹನಗಳ ಅಲಂಕಾರ ಸ್ಪರ್ಧೆ, ಚಿಕ್ಕ ವಾಹನಗಳ ಅಲಂಕಾರ ಸ್ಪರ್ಧೆ, ಆಟೋ ರಿಕ್ಷಾ ಅಲಂಕಾರ ಸ್ಪರ್ಧೆ, ಸರಕಾರಿ ಮತ್ತು ಸಂಘ ಸಂಸ್ಥೆಗಳ ಕಟ್ಟಡ ಅಲಂಕಾರ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ: ಮಂತರ್ ಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ. ಲೋಕೇಶ್ ಕುಮಾರ್ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುವರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರುಗಳಾದ ಪಿ.ಎಂ. ಲತೀಫ್ ಮತ್ತು ಬಿ.ಬಿ. ಭಾರತೀಶ್, ಎವರ್ ಗ್ರೀನ್ ಗ್ರೂಪ್ ಮಾಲೀಕ ಎ.ಬಿ. ಅಜೀಜ್, ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಕಾಫಿ ಬೆಳೆಗಾರರುಗಳಾದ ವಿನೋದ್ ಶಿವಪ್ಪ, ಜಗನ್ನಾಥ್ ಶೆಣೈ, ಎಸ್.ಯು. ಝಾಯ್ದು, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷÀ ಜೆರ್ಮಿ ಡಿಸೋಜ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷÀ ಕ್ಲಾಡಿಯಸ್ ಲೋಬೋ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿ.ಜಿ. ಸುಂಟಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಮೋಹನ್ ರಾಜ್, ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೆಚ್.ಯು. ರಫೀಕ್ ಖಾನ್, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಎಲ್. ವಿಶ್ವ, ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ. ಷರೀಫ್, ಯುವ ಮುಖಂಡರಾದ ಪಿ.ಎಲ್. ಹರ್ಷಾದ್, ಅನೂಪ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಅನೂಪ್‌ಕುಮಾರ್, ಶಾನಾ ಟಿಂಬರ್ಸ್ನ ಮಾಲೀಕ ಆರ್.ಹೆಚ್. ಷರೀಫ್, ವರ್ಕ್ಸ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಹಿರಿಯ ಚಾಲಕ ಹೆಚ್. ಉಸ್ಮಾನ್, ಸುಂಟಿಕೊಪ್ಪ ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷÀ ಆರ್.ಕೆ. ಹರೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಎಸ್. ಮಂಜುನಾಥ್, ಟಿಂಬರ್ ಮರ್ಚೆಂಟ್ ವಿಲಿಯಂ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಎನ್. ರವೀಂದ್ರ, ಸುಂಟಿಕೊಪ್ಪ, ಕಾಫಿ ಬೆಳೆಗಾರರುಗಳಾದ ಅಕ್ಷಯ್ ದಶರಥ್, ಗೌತಮ್ ಮುಕುಲ್ ಮಹೇಂದ್ರ, ಎಂ. ಇಬ್ರಾಹಿಂ, ಕೊಡಗರಹಳ್ಳಿ, ಪತ್ರಕರ್ತ ಲೋಕೇಶ್ ಮೂರ್ತಿ ಬೆಂಗಳೂರು, ಸಿದ್ದಲಿಂಗಪುರದ ಪ್ರಗತಿಪರ ಕೃಷಿಕರಾದ ಎ.ಎಸ್. ರಾಮಣ್ಣ, ೭ನೇ ಹೊಸಕೋಟೆಯ ಉದ್ಯಮಿ ಕಿರಣ್ ಗೌಡ, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಜಿ. ಕುಮಾರ್, ಕಾವೇರಿ ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮಂಜು, ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಾರಂಭದಲ್ಲಿ ಕುಶಾಲ ನಗರದ ನಿವೃತ್ತ ಪ್ರಾಂಶುಪಾಲರಾದ ಡಾ. ಡಿ. ದೇವರಾಜ್ ಅವರನ್ನು ಸನ್ಮಾನಿಸಲಾಗುವುದು. ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ಆಯುಧ ಪೂಜಾ ಸಮಾರಂಭದಲ್ಲಿ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಿರುವುದಾಗಿ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ ಮತ್ತು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.