ಸೋಮವಾರಪೇಟೆ, ಸೆ. ೨೬: ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ಮನವಿಯ ಮೆರೆಗೆ ರೈತರ ಕುಂದು ಕೊರತೆ ಸಭೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ತಾಲ್ಲೂಕಿನಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿ, ಇಂದಿನ ಕುಂದುಕೊರತೆ ಸಭೆಯಲ್ಲಿ ಚರ್ಚೆಗೊಳಪಟ್ಟ ಎಲ್ಲಾ ವಿಷಯಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಸಿ ಮತ್ತು ಡಿ, ಸೆಕ್ಷನ್ ೪ ಹಾಗೂ ಡೀಮ್ಡ್ ಅರಣ್ಯಕ್ಕೆ ಸಂಬAಧಿಸಿದAತೆ ರೈತರು ಹೋರಾಟ ನಡೆಸಿಕೊಂಡು ಬರುತ್ತಿದ್ದರೂ, ಇಂದಿಗೂ ಸಮಸ್ಯೆ ಹಾಗೆ ಉಳಿದಿದೆ. ಮೊದಲು ಸಂಬAಧಿಸಿದ ಸ್ಥಳವನ್ನು ಪೂರ್ತಿ ಸರ್ವೆ ಮಾಡಿದಲ್ಲಿ ಮಾತ್ರ ವಾಸ್ತವಾಂಶ ತಿಳಿಯಲಿದೆ. ನಂತರಸಮಸ್ಯೆ ಪರಿಹಾರಕ್ಕೆ ಮುಂದಾಗಬಹುದು. ಆದ್ದರಿಂದ ಸ್ಥಳೀಯ ರೈತರು ಜಂಟಿ ಸರ್ವೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸರ್ವೆ ಮಾಡಿದ ನಂತರ ವಸ್ತುಸ್ಥಿತಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು. ನಂತರ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸÀಲಾಗುವುದು. ಅಲ್ಲಿಂದ ಕೇಂದ್ರಕ್ಕೆ ವರದಿ ಹೋಗುವುದು. ಇದರಲ್ಲಿ ರೈತರು ಭಯಪಡುವ ಅವಶ್ಯಕತೆ ಇಲ್ಲ. ಈಗಿನ ಸಮಸ್ಯೆಗಳಿಗೆ ಸಂಬAಧಿಸಿದAತೆ ಮುಂದಿನ ಒಂದು ತಿಂಗಳಿನಲ್ಲಿ ಮತ್ತೆ ಕುಂದುಕೊರತೆ ಸಭೆ ಸೇರಿ ಉತ್ತರ ನೀಡಲಾಗುವುದು. ಎಲ್ಲಾ ಭೂ ದಾಖಲೆಗಳು ಡಿಜಿಟಲೈಜೇಷನ್ ಮಾಡುತ್ತಿರುವುದರಿಂದ ಭೂಮಿಗೆ ಸಂಬAಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಇಲಾಖಾ ಕಚೇರಿಯಲ್ಲಿ ಕುಳಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬೇಜಬ್ದಾರಿ ವರದಿಯನ್ನು ಸರ್ಕಾರಕ್ಕೆ ನೀಡಿದ ಪರಿಣಾಮ ಇಂದು ರೈತರು ಅನುಭವಿಸುತ್ತಿದ್ದಾರೆ. ಇದನ್ನು ಅಧಿಕಾರಿಗಳೇ ಸರಿಪಡಿಸಬೇಕಿದೆ ಎಂದು ಹೇಳಿದರು. ಈ ಸಂದರ್ಭ ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಅಧಿಕಾರಿಗಳ ತಪ್ಪಿನಿಂದಾಗಿ ಸಮಸ್ಯೆಯಾಗಿರುವುದು ನಿಜ. ಅದನ್ನು ಮುಂದೆ ಸರ್ವೆ ನಡೆಸಿ, ಯಾವುದೇ ರೈತರಿಗೂ ಸಮಸ್ಯೆಯಾಗದಂತೆ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಸರ್ವೆ ನಡೆಸಿ ಅರಣ್ಯ ಎಂದು ಭೂಮಿಯ ದಾಖಲೆಯನ್ನು ಅರಣ್ಯದ ಹೆಸರಿಗೆ ವರ್ಗಾಯಿಸಲಾಗಿದೆ. ಒಮ್ಮೆ ಅರಣ್ಯದ ಹೆಸರಿಗೆ ದಾಖಲಾತಿ ವರ್ಗವಾದಲ್ಲಿ ಅದನ್ನು ಸ್ಥಳೀಯ ಅಧಿಕಾರಿಗಳು ಸರಿಪಡಿಸಲು ಸಾಧ್ಯವಿಲ್ಲ. ಇವರು ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿ, ಅಲ್ಲಿಂದ ಕೇಂದ್ರಕ್ಕೆ ಸಲ್ಲಿಕೆಯಾದ ನಂತರ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬಹುದು. ಆದುದರಿಂದ ಸ್ಥಳೀಯವಾಗಿ ಮಾಡುವ ಯಾವುದೇ ಯೋರಾಟಗಳು ಯಶಸ್ವಿಯಾಗುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ಕಚೇರಿಯ ಎದುರು ಹೋರಾಟ ನಡೆಸಿದಲ್ಲಿ ಮಾತ್ರ ರೈತರಿಗೆ ಅನುಕೂಲವಾಗುವುದು ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಹೇಳಿದರು.

೧೯೦೮ರಿಂದ ೨೦೦೦ ದವರೆಗೆ ನೇಗಳ್ಳಿ ಕರ್ಕಳ್ಳಿ ಬಸವನಕೊಪ್ಪ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ದಾಖಲಾತಿ ನೀಡಿದ ನಂತರವೂ ಅದನ್ನು ಸಿ ಮತ್ತು ಡಿ ಭೂಮಿ ಮತ್ತು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚರ್ಕವರ್ತಿ ಸುರೇಶ್ ಸಭೆಯ ಗಮನಕ್ಕೆ ತಂದರು.

ಸರ್ಕಾರ ಆದೇಶ ನೀಡಿರುವುದರಿಂದ ಕಂದಾಯ ಮತ್ತು ಅರಣ್ಯ ಇಲಾಖೆಯವರು ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುತ್ತಿದ್ದಾರೆ. ಆದರೆ, ಹಲವೆಡೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದನ್ನು ಮೊದಲು ತೆರವುಗೊಳಿಸುವ ಕೆಲಸ ಅರಣ್ಯ ಇಲಾಖೆಯಿಂದಾಗಬೇಕು. ರೈತರ ಕೃಷಿ ಭೂಮಿ ಸಮಸ್ಯೆ ಕೇವಲ ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚಾಗಿದೆ. ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಪರಿಹರಿಸಬೇಕೆಂದರು.

ರೈತರ ಕೃಷಿ ಭೂಮಿ ೨೦೧೮ರಿಂದಲೂ ದುರಸ್ತಿಯಾಗಿಲ್ಲ. ಹಣ ನೀಡಿದವರ ಅರ್ಜಿ ವಿಲೇವಾರಿಯಾಗಿ ದುರಸ್ತಿಯಾಗಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸೂಕ್ತ ಮನಸ್ಸು ಮಾಡಿದಲ್ಲಿ ಮಾತ್ರ ಸಾಧ್ಯ ಎಂದು ಅನಿಲ್ ತಿಳಿಸಿದರು. ರಾಜ್ಯದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ದುರಸ್ತಿಗೆ ಸರಳ ಆ್ಯಪ್ ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಡಿಸೆಂಬರ್‌ನಲ್ಲಿ ಸುಮಾರು ೧೬೦೦ರಿಂದ ೨೦೦೦ ರೈತರ ಕೃಷಿ ಜಮೀನನ್ನು ದುರಸ್ತಿ ಮಾಡಿ, ಅವರ ಹೆಸರಿನಲ್ಲಿ ಆರ್‌ಟಿಸಿ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರರು ಸಭೆಯ ಗಮನಕ್ಕೆ ತಂದರು.

ವೇದಿಕೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಎಸಿಎಫ್ ಗೋಪಾಲ್ ಹಾಗೂ ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಇದ್ದರು.