ವೀರಾಜಪೇಟೆ, ಸೆ. ೨೬: ಪಟ್ಟಣದ ಕೊಡವ ಸಂಘ ಒಕ್ಕೂಟದ ಅಧೀನದಲ್ಲಿ ಕಾವೇರಿ ಕೊಡವಕೇರಿ ನಡೆಸುತ್ತಿರುವ ಅಂತರ ಕೊಡವಕೇರಿ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಅಕ್ಟೋಬರ್ ೧೧ ಮತ್ತು ೧೨ ರಂದು ವೀರಾಜಪೇಟೆ ಜೂನಿಯರ್ ಕಾಲೇಜು ಬಳಿ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಕಾವೇರಿ ಕೊಡವಕೇರಿ ಸಂಘದ ಅಧ್ಯಕ್ಷ ಮೇರಿಯಂಡ ಅರಸು ತಿಳಿಸಿದ್ದಾರೆ.

ಅಕ್ಟೋಬರ್ ೧೨ ರಂದು ಸಂಜೆ ೬ ಗಂಟೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ ಅವರುಗಳು ಉಪಸ್ಥಿತಲಿರುವರು ಎಂದು ಅವರು ತಿಳಿಸಿದ್ದಾರೆ.