ಮಡಿಕೇರಿ, ಸೆ. ೨೭: ಪ್ರತಿಷ್ಠಿತ ಕೊಡವ ಹಾಕಿ ಅಕಾಡೆಮಿಗೆ ತಾ. ೨೮ ರಂದು (ಇಂದು) ಚುನಾವಣೆ ನಡೆಯಲಿದೆ. ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಬೆಳಿಗ್ಗೆ ೧೦ ರಿಂದ ಅಪರಾಹ್ನ ೨ ಗಂಟೆಯತನಕ ಮತದಾನ ನಿಗದಿಯಾಗಿದೆ. ಹಾಕಿ ಅಕಾಡೆಮಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಾಗಿದ್ದು, ಈ ಚುನಾವಣೆ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿದೆ.

ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿರುವ ಪಾಂಡAಡ ಬೋಪಣ್ಣ ಹಾಗೂ ಕಾರ್ಯಾಧ್ಯಕ್ಷರಾಗಿರುವ ಮೇಕೇರಿರ ರವಿ ಪೆಮ್ಮಯ್ಯ ಮುಂದಾಳತ್ವದಲ್ಲಿ ಎರಡು ತಂಡಗಳು ಚುನಾವಣೆಗೆ ನಿಂತಿರುವುದು ಒಂದೆಡೆಯಾದರೆ ಕೆಲವರು ಸ್ವತಂತ್ರ ಅಭ್ಯರ್ಥಿಗಳಾಗಿಯೂ ಸ್ಪರ್ಧಾ ಕಣದಲ್ಲಿದ್ದು, ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಅಕಾಡೆಮಿಯ ಆಡಳಿತ ಮಂಡಳಿಯ ಎಲ್ಲಾ ೧೫ ಸ್ಥಾನಗಳಿಗೂ ಚುನಾವಣೆ ಅನಿವಾರ್ಯವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಪಾಂಡAಡ ಬೋಪಣ್ಣ ಹಾಗೂ ಮೇಕೇರಿರ ರವಿ ಪೆಮ್ಮಯ್ಯ ನೇರ ಸ್ಪರ್ಧಿಗಳಾಗಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಚೆಪ್ಪುಡಿರ ಎಸ್. ಪೂಣಚ್ಚ ಹಾಗೂ ಬಡಕಡ ದಿನಾ ಪೂವಯ್ಯ ಕಣದಲ್ಲಿದ್ದಾರೆ.

ಮಡಿಕೇರಿ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮಾದಂಡ ಪೆಮ್ಮಯ್ಯ ಹಾಗೂ ಶಾಂತೆಯAಡ ನಿರನ್ ನಾಚಪ್ಪ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಮೀದೇರಿರ ಗನ್ನು ಸೋಮಯ್ಯ ಹಾಗೂ ಕೂತಂಡ ಸುರೇಶ್ ಅಪ್ಪಯ್ಯ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಕಲ್ಲುಮಾಡಂಡ ತರುಣ್ ತಮ್ಮಣ್ಣ ಹಾಗೂ ಬಾಚಿನಾಡಂಡ ಪ್ರದೀಪ್ ಪೂಣಚ್ಚ ಅಭ್ಯರ್ಥಿಗಳಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಬುಟ್ಟಿಯಂಡ ಚಂಗಪ್ಪ ಹಾಗೂ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ಮತ್ತು ನಾಯಕಂಡ ದೀಪು ಚಂಗಪ್ಪ ಸ್ಪರ್ಧಿಗಳಾಗಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ನೆರವಂಡ ಅನೂಪ್ ಉತ್ತಯ್ಯ, ಅಂಜಪರವAಡ ಕುಶಾಲಪ್ಪ, ಗುಮ್ಮಟ್ಟಿರ ಚಂಗಪ್ಪ, ಚಂದೂರ ಸಂದೇಶ್ ತಿಮ್ಮಯ್ಯ, ಕುಂಞÉಯAಡ ನಿರನ್ ನಾಣಯ್ಯ, ಪಟ್ಟಮಾಡ ಡಿ. ಪೊನ್ನಪ್ಪ, ಬಲ್ಟಿಕಾಳಂಡ ಸುಜಿತ್, ಕಾಂಡAಡ ರಶ್ಮಿ ಲಾಲಪ್ಪ ಒಂದು ಗುಂಪಿನಿAದ ಹಾಗೂ ಮತ್ತೊಂದು ಗುಂಪಿನಿAದ ಕಂಬೀರAಡ ರಾಖಿ ಪೂವಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ, ಚೆಕ್ಕೆರ ಆದರ್ಶ್, ಬೊಳ್ಳಪಂಡ ಜೆ. ಕಾರ್ಯಪ್ಪ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಮಂಡೇಪAಡ ಮುಖೇಶ್ ಮೊಣ್ಣಯ್ಯ, ಮುದ್ದಂಡ ರಶಿನ್ ಸುಬ್ಬಯ್ಯ, ಮುಕ್ಕಾಟಿರ ಸೋಮಯ್ಯ ಕಣದಲ್ಲಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳಾಗಿ ಚೇನಂಡ ಸುರೇಶ್ ನಾಣಯ್ಯ, ಕೇಲೇಟಿರ ದೀಪು ದೇವಯ್ಯ, ತೀತಿಮಾಡ ಸೋಮಣ್ಣ ಸ್ಪರ್ಧೆಯಲ್ಲಿದ್ದಾರೆ.