ಗೋಣಿಕೊಪ್ಪಲು, ಸೆ. ೨೬: ಕೋಗಿಲ ಕಂಠದ ಗಾಯಕಿ ಅನುರಾಧ ಭಟ್ ಹಾಗೂ ತಂಡ ಕಾವೇರಿ ಕಲಾ ವೇದಿಕೆಯಲ್ಲಿ ರಾಗದ ಅಲೆ ಎಬ್ಬಿಸಿ ಕಲಾಪ್ರೇಮಿಗಳಿಗೆ ಗಾನದ ರಸದೌತಣ ನೀಡಿದರು.
ಗೋಣಿಕೊಪ್ಪ ಶ್ರೀಕಾವೇರಿ ದಸರಾ ಸಮಿತಿ ವತಿಯಿಂದ ಇಲ್ಲಿನ ಕಾವೇರಿ ಕಲಾವೇದಿಕೆಯಲ್ಲಿ ನಡೆದ ೪ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನುರಾಧ ಭಟ್ ನೇತೃತ್ವದ ಗಾಯಕರ ತಂಡ ನೀಡಿದ ಗಾನ ಪ್ರದರ್ಶನ ಮಂತ್ರಮುಗ್ದಗೊಳಿಸಿತು.
ಅನುರಾಧ ಭಟ್ ಸೇರಿದಂತೆ ರಿಯಾಲಿಟಿ ಶೋ ಖ್ಯಾತಿಯ ದಿವ್ಯ ರಾಮಚಂದ್ರ, ಖಾಸಿಮ್ ಅಲಿ, ವಿಶಾಖ್ ಅವರುಗಳು ಕನ್ನಡ ಚಿತ್ರಗೀತೆಗಳನ್ನು ಹಾಡಿ ಜನಮನ ರಂಜಿಸಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮ ಗಾನ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದರು. ಹಾಡಿನೊಂದಿಗೆ ನೃತ್ಯ ಕಾರ್ಯಕ್ರಮವೂ ನಡೆಯಿತು.
ಇದರೊಂದಿಗೆ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯಕಲಾ ಶಾಲೆ ವತಿಯಿಂದ ನೃತ್ಯ, ಸಾರಂಗ್ ಕಲಾತಂಡದಿAದ ಮ್ಯಾಜಿಕ್ ಡ್ಯಾನ್ಸ್, ಬಾಲ್ ಡ್ಯಾನ್ಸ್ ಹಾಗೂ ಏರೋಬೇಟಿಕ್ ಡ್ಯಾನ್ಸ್ ಕಾರ್ಯಕ್ರಮಗಳು ಮೂಡಿಬಂದವು.