ಮಡಿಕೇರಿ, ಸೆ. ೨೭: ರಾಜ್ಯ ಸರಕಾರದ ಅಧೀನದಲ್ಲಿ ಬರುವ ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್ ಟ್ರಸ್ಟ್ನ ಸದಸ್ಯರಾಗಿ ಕೊಡಗಿನ ಮೂವರನ್ನು ಸರಕಾರ ನೇಮಕ ಮಾಡಿದೆ.

ರಾಜ್ಯ ಸರಕಾರ ವಿವಿಧ ನಿಗಮ ಮಂಡಳಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್ ಟ್ರಸ್ಟ್ನ ಪದಾಧಿಕಾರಿಗಳ ಹೆಸರನ್ನೂ ಪ್ರಕಟಿಸಲಾಗಿದೆ. ಇದರ ಸದಸ್ಯರುಗಳಾಗಿ ಕೊಡಗಿನವರಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ. ಪ್ರಸಾದ್, ಹುತಾತ್ಮ ಸೇನಾನಿ ಮೇಜರ್ ಮಂಗೇರಿರ ಮುತ್ತಣ್ಣ ಅವರ ಪತ್ನಿ ರೀನಾ ಮುತ್ತಣ್ಣ ಹಾಗೂ ಶೌರ್ಯಚಕ್ರ ಪ್ರಶಸ್ತಿ ವಿಜೇತ ಸೇನಾನಿ ದಿವಂಗತ ಚೊಟ್ಟಂಗಡ ಗಣೇಶ್ ಮಾದಪ್ಪ ಅವರ ಪತ್ನಿ ನಿರೂಪ ಮಾದಪ್ಪ ಅವರುಗಳು ನೇಮಕಗೊಂಡಿದ್ದಾರೆ.