ನಾಪೋಕ್ಲು, ಸೆ. ೨೭: ಬೆಟ್ಟಗೇರಿ ಬಕ್ಕ ಕ್ರೀಡಾ ಸಂಘ, ಶ್ರೀ ಕೃಷ್ಣ,ಸಂಕ್ರಾAತಿ, ಸಾಗರ ಸ್ವಸಹಾಯ ಸಂಘ , ಅಂಬಿಕಾ ಸ್ತಿçà ಶಕ್ತಿ , ಗಜಾನನ ಭಕ್ತ ಮಂಡಳಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಯೋಜಿಸಿದ ೧೯ ನೆ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭ ಬಕ್ಕದಲ್ಲಿ ಜರುಗಿತು.
ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಉದ್ಘಾಟಿಸಿದರು. ನಂತರ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಾರ್ವಜನಿಕರಿಗೆ ಮ್ಯಾರಥಾನ್ ಓಟ ಮಹಿಳೆಯರಿಗೆ ನಿಂಬೆಹಣ್ಣು ಚಮಚದ ಓಟ, ಮೂರು ಕಾಲಿನ ಓಟ ಗೋಣಿಚೀಲದ ಓಟ, ಬಾಟಲಿಗೆ ನೀರು ತುಂಬಿಸುವುದು, ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ವಯಸ್ಕರ ನಡಿಗೆ, ವಾದ್ಯ ಕುಣಿತ, ಹೀಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು ಮನೋಲ್ಲಾಸ ನೀಡಿದವು.
ಸಮಾರೋಪ
ಸಂಜೆ ಸಮಾರೋಪ ಸಮಾರಂಭದಲ್ಲಿ ಸೇನಾ ಕ್ಷೇತ್ರದಲ್ಲಿ ಬೈತಡ್ಕ ಲೀಲಾ ವೇಣಿ ಜಗದೀಶ್, ಶಿಕ್ಷಣ ಕ್ಷೇತ್ರದಲ್ಲಿ ಸೂದನ ಎಸ್ ಗೋಪಾಲ, ಅಂಚೆ ಇಲಾಖೆಯ ನಿವೃತ್ತ ಪೋಸ್ಟ್ ಮಾಸ್ಟರ್ ರಾಜಮ್ಮ ರಾಣಿ, ಚಾಮುಂಡೇಶ್ವರಿ ವಿದ್ಯುತ್ ಶಕ್ತಿ ನಿಗಮದ ಯಂತ್ರಕರ್ಮಿ ಅಲ್ಲಪ್ಪ ಅವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ೨೦೨೪-೨೫ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಹಾಗೂ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಿಸರ್ಗ ರೈ ಹಾಗೂ ಅಬಾಕಸ್ ಬ್ರೆöÊನೋ ಬ್ರೆöÊನ್ ಸ್ಪರ್ಧೆಯಲ್ಲಿ ಅಂತರರಾಷ್ಟçಮಟ್ಟದ ಚಾಂಪಿಯನ್ ಶಿಪ್ ಪಡೆದ ಕಡ್ಲೇರ ಲಿಖಿತ್ ಸೋಮಣ್ಣ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಆರ್ಪಿಎಫ್ನ ನಿವೃತ್ತ ಎಎಸ್ಐ ಲೀಲವೇಣಿ ಜಗದೀಶ್ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳಿಂದ ಒಗ್ಗಟ್ಟು ಸಾಮರಸ್ಯ, ಮನರಂಜನೆ ಹಾಗೂ ಕ್ರೀಡೆಗೆ ಸ್ಪೂರ್ತಿ ಸಿಗುತ್ತದೆ ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ಒಳ್ಳೆಯ ಅವಕಾಶ ಸಿಗುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಸೂದನ ಎಸ್ ಗೋಪಾಲ್ ಅವರು ಮಾತನಾಡಿ ಮನಸ್ಸಿನ ಜಂಜಾಟವನ್ನು ದೂರಸರಿಸಲು ಇಂತಹ ಆಟೋಟ ಸ್ಪರ್ಧೆಗಳು ಬಹಳ ಪ್ರಯೋಜನಕಾರಿ ಎಂದರು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮಾಜಿ ಸೈನಿಕರಾದ ಹೊಸೋಕ್ಲು ಮೊಣ್ಣಪ್ಪ, ಪುದಿಯನೆರವನ ವೀಣಾ, ಕುಂಜಿಲನ ಲೋಕನಾಥ್, ಬಾಡನ ಸತೀಶ್, ಪಂಚಾಯಿತಿ ಸದಸ್ಯರಾದ ಗೋಪಾಲ, ಲಿಖಿತಾ ಬಾಡನ ಸೇರಿದಂತೆ ಕ್ರೀಡಾಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ತೇನನ ರಜನಿ ಪ್ರಾರ್ಥಿಸಿ ನೆಯ್ಯಣಿ ಹೇಮ ಕುಮಾರ್ ಮತ್ತು ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.