ಗೋಣಿಕೊಪ್ಪಲು, ಸೆ. ೨೭: ಸದಾ ಕೆಲಸದ ಒತ್ತಡದ ನಡುವೆ ದಿನದ ೨೪ ಗಂಟೆಯೂ ಕರ್ತವ್ಯದಲ್ಲೇ ನಿರತರಾಗಿರುವ ಕೊಡಗು ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಲಾ ಪ್ರದರ್ಶನ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಪೊಲೀಸರು ತಾವು ಕೂಡ ಕಲಾವಿದರಿಗೆ ಕಡಿಮೆ ಇಲ್ಲ ಎಂಬAತೆ ಕಿರು ನಾಟಕ, ಹಾಡುಗಾರಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನೀಡುವ ಮೂಲಕ ನೆರೆದಿದ್ದ ಸಾವಿರಾರು ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾದರು. ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ದಸರಾ ಜನೋತ್ಸವದ ಕಾವೇರಿ ಕಲಾ ವೇದಿಕೆಯಲ್ಲಿ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮುಂದಾಳತ್ವದ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯು ಅಚ್ಚುಕಟ್ಟಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿತು. ನವಶಕ್ತಿ ವೈಭವ ನೃತ್ಯ ರೂಪಕದಲ್ಲಿ ಕೊಡಗಿನಲ್ಲಿ ಮಹಿಳಾ ಪೊಲೀಸರು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸೈಬರ್ ಕಳ್ಳ, ಆಪರೇಷನ್ ಸಿಂಧೂರ, ನೃತ್ಯ ರೂಪಕಗಳು ಜನರನ್ನು ರಂಜಿಸಿದರು. ಬಾಲ್ಯ ವಿವಾಹ ತಡೆಯುವ ಬಗ್ಗೆ ಜಾಗೃತಿ, ನಶೆ ಮುಕ್ತ ಭಾರತ, ಮಾದಕ ವಸ್ತುಗಳ ಮಾರಾಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಾಟಕದ ಮೂಲಕ ಜನರಿಗೆ ಸಂದೇಶ ನೀಡಿದರು. ಡಿಎಆರ್ ಸಿಬ್ಬಂದಿ ತಂಡದಿAದ ಸಮೂಹಿಕ ನೃತ್ಯ, ವೀರಾಜಪೇಟೆ ಉಪವಿಭಾಗದ ಪೊಲೀಸ್ ಸಿಬ್ಬಂದಿಯಿAದ ಅಪರೇಷನ್ ಸಿಂಧೂರ ಸಾಮೂಹಿಕ ಸಂಗೀತ ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಪರೇಷನ್ ಸಿಂಧೂರ ರೂಪಕದಲ್ಲಿ ಡಿವೈಎಸ್ಪಿ ಮಹೇಶ್ಕುಮಾರ್ ಪಾತ್ರಧಾರಿಯಾಗಿ ಜನಮೆಚ್ಚುಗೆ ಪಡೆದರು. ಸದಾ ಸಮವಸ್ತçದಲ್ಲಿರುತ್ತಿದ್ದ ಪೊಲೀಸರು ವೇದಿಕೆಯಲ್ಲಿ ವಿವಿಧ ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು. ಮಡಿಕೇರಿಯ ಸರ್ಕಲ್ ಇನ್ಸ್ಪೆಕ್ಟರ್ ರಾಜು ಅವರು ಇಡೀ ತಂಡದ ಕಾರ್ಯಕ್ರಮವನ್ನು ನಿರೂಪಿದರು. ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ದಶಮಂಟಪದ ಅಧ್ಯಕ್ಷರು, ವಿವಿಧ ಮಂಟಪಗಳ ಅಧ್ಯಕ್ಷರುಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಠಾಣಾಧಿಕಾರಿ ಪ್ರದೀಪ್ ಕುಮಾರ್, ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಮನ ಸೆಳೆದ ನೃತ್ಯ ಕಾರ್ಯಕ್ರಮಗಳು
ಇದರೊಂದಿಗೆ ತಿತಿಮತಿಯ ಯಾಹವಿ ಡ್ಯಾನ್ಸ್ ಆಕಾಡೆಮಿಯಿಂದ ಶಾಸ್ತಿçÃಯ ಮತ್ತು ಪಾಶ್ಚಾತ್ಯ ನೃತ್ಯ, ನಾಪೋಕ್ಲುವಿನ ರವಿ ಓಂಕಾರ್ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಿತು. ಮೈಸೂರಿನ ಯುಎಸ್ಎ ಡ್ಯಾನ್ಸ್ ಆಕಾಡೆಮಿ ನಡೆಸಿಕೊಟ್ಟ ವಿವಿಧ ಶೈಲಿಯ ನೃತ್ಯ ಕಾರ್ಯಕ್ರಮಗಳು ಜನರ ಗಮನ ಸೆಳೆದವು.